ಬಾಲಿವುಡ್ನ ಈ ಸೆಲೆಬ್ರಿಟಿಗಳು ಕೂದಲು ಕಸಿ ಮಾಡಿಕೊಂಡಿದ್ದಾರೆ; ಇಲ್ಲಿದೆ ವಿವರ
ಹಲವು ಕಾರಣಗಳಿಂದ ಕೂದಲು ಉದುರಿ ಹೋಗುತ್ತದೆ. ಇಂಥ ಸಂದರ್ಭದಲ್ಲಿ ಕೂದಲು ಕಸಿಯ ಮೊರೆ ಹೋಗಬೇಕಾಗುತ್ತದೆ. ಈ ರೀತಿ ಕೂದಲು ಕಸಿ ಮಾಡಿಸಿಕೊಂಡ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇದ್ದಾರೆ. ಇದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ.
ಚಿತ್ರರಂಗದ ಸೆಲೆಬ್ರಿಟಿಗಳಿಗೆ ಲುಕ್ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುತ್ತಾರೆ. ಜಿಮ್ನಲ್ಲಿ ಹೆಚ್ಚು ವರ್ಕೌಟ್ ಮಾಡುತ್ತಾರೆ. ಇದರ ಜೊತೆ ಚರ್ಮದ ಆರೋಗ್ಯದ ಬಗ್ಗೆಯೂ ಗಮನ ಹರಿಸುತ್ತಾರೆ. ಇನ್ನು ಕೂದಲ (Hair) ಬಗ್ಗೆಯೂ ಗಮನ ಹರಿಸಲೇಬೇಕು. ಆದರೆ, ಹಲವು ಕಾರಣಗಳಿಂದ ಕೂದಲು ಉದುರಿ ಹೋಗುತ್ತದೆ. ಇಂಥ ಸಂದರ್ಭದಲ್ಲಿ ಕೂದಲು ಕಸಿಯ (Hair Transplant) ಮೊರೆ ಹೋಗಬೇಕಾಗುತ್ತದೆ. ಈ ರೀತಿ ಕೂದಲು ಕಸಿ ಮಾಡಿಸಿಕೊಂಡ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು (Bollywood Celebrities) ಇದ್ದಾರೆ. ಇದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ.
ಅಕ್ಷಯ್ ಕುಮಾರ್
ಬಾಲಿವುಡ್ನ ಹ್ಯಾಂಡ್ಸಮ್ ಹೀರೋಗಳಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರು. ಪ್ರತಿ ವರ್ಷ ಅವರ ನಟನೆಯ ಮೂರ್ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತವೆ. ಅಕ್ಷಯ್ ಕುಮಾರ್ ಅವರಿಗೆ 40 ವರ್ಷ ದಾಟಿದ ಬಳಿಕ ಹೇರ್ ಲಾಸ್ ಸಮಸ್ಯೆ ಕಾಣಿಸಿತು. ಈ ಕಾರಣದಿಂದ ಅವರು ಹೇರ್ ಟ್ರಾನ್ಸ್ಪ್ಲಾಂಟ್ ಮಾಡಿಕೊಂಡಿದ್ದರು. ಈ ಮೊದಲು ಮಾತನಾಡಿದ್ದ ಅಕ್ಷಯ್, ತಮಗೆ ವಿಗ್ ಹಾಕುವುದು ಹಾಗೂ ಕೂದಲು ಕಸಿ ಮಾಡಿಕೊಳ್ಳುವುದು ಇಷ್ಟವಿಲ್ಲ ಎಂದು ಹೇಳಿದ್ದರು.
ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರ ವಯಸ್ಸು ಈಗ 57. ಆದರೂ ಅವರ ತಲೆಯಮೇಲೆ ಕೂದಲು ಹೇರಳವಾಗಿದೆ. ಇದಕ್ಕೆ ಕೂದಲು ಕಸಿ ಕಾರಣ ಎನ್ನಲಾಗಿದೆ. ಸಲ್ಮಾನ್ ಖಾನ್ ಅವರು ಹಲವು ಬಾರಿ ಹೇರ್ ಟ್ರಾನ್ಸ್ಪ್ಲಾಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಶೇಷ ಎಂದರೆ ವಿದೇಶದಿಂದ ವೈದ್ಯರು ಸಲ್ಮಾನ್ ಖಾನ್ ಫಾರ್ಮ್ಹೌಸ್ಗೆ ಬಂದು ಈ ಶಸ್ತ್ರಚಿಕಿತ್ಸೆ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಹಲವು ಬಾಲಿವುಡ್ ನಟರ ಮೇಲೆ ಇಡಿ ದಾಳಿ: ದುಬೈ ಮದುವೆಯ ಲಿಂಕ್
ಕಪಿಲ್ ಶರ್ಮಾ
ಕಪಿಲ್ ಶರ್ಮಾ ಅವರಿಗೆ ಹಾಸ್ಯ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಕಾಮಿಡಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಅವರು ತುಂಬಾನೇ ಆಸ್ತಿ ಮಾಡಿದ್ದಾರೆ. ಅವರಿಗೂ ಕೂದಲು ಉದುರುವ ಸಮಸ್ಯೆ ಇತ್ತು. ಹೀಗಾಗಿ, ಕೂದಲು ಕಸಿ ಮಾಡಿಕೊಂಡರು. ಇದರಿಂದ ಅವರಿಗೆ ತಲೆತುಂಬ ಕೂದಲಿದೆ.
ಸಂಜಯ್ ದತ್
ಬಾಲಿವುಡ್, ಕನ್ನಡ, ತೆಲುಗು ಸಿನಿಮಾ ರಂಗದಲ್ಲಿ ಸಂಜಯ್ ದತ್ ಬ್ಯುಸಿ ಆಗಿದ್ದಾರೆ. ಇವರು ಕೂಡ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ. 2012ರಲ್ಲಿ ರಿಲೀಸ್ ಆದ ‘ಅಗ್ನೀಪತ್’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಶೂಟಿಂಗ್ ಬಳಿಕ ಅವರು ಈ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್
ನಟ ಅಮಿತಾಭ್ ಬಚ್ಚನ್ ವಯಸ್ಸು ಈಗ 80. ಅವರು ಕೂದಲನ್ನು ಹೇಗೆ ಕಾಪಾಡಿಕೊಂಡರು? ಅವರ ಕೂದಲು ಉದುರಿಲ್ಲವೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಇದಕ್ಕೆ ಉತ್ತರ ಕೂದಲು ಕಸಿ. ಅವರು ಕೂಡ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ. ಈ ವಿಚಾರವನ್ನು ಅಮಿತಾಭ್ ಓಪನ್ ಆಗಿ ಹೇಳಿಕೊಂಡಿಲ್ಲ. 2000ನೇ ಇಸವಿಯಲ್ಲಿ ಅವರು ಇದನ್ನು ಮಾಡಿಸಿಕೊಂಡಿದ್ದಾರೆ. ಸದ್ಯ ‘ಕೌನ್ ಬನೇಗಾ ಕರೋಡ್ಪತಿ ಸೀಸನ್ 15’ ನಡೆಸಿಕೊಡುತ್ತಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನ ಈ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದ ದಕ್ಷಿಣ ಭಾರತದ ಸ್ಟಾರ್ ಕಲಾವಿದರಿವರು
ಗೋವಿಂದ
ಗೋವಿಂದ ಅವರು ಚಿತ್ರರಂಗದಿಂದ ದೂರ ಇದ್ದಾರೆ. ಆದರೆ, ಫಿಟ್ನೆಸ್ ಬಗ್ಗೆ, ಸೌಂದರ್ಯದ ಬಗ್ಗೆ ಅವರು ಕಾಳಜಿ ವಹಿಸುತ್ತಾರೆ. 2012ರಲ್ಲಿ ಅವರು ಸಲ್ಮಾನ್ ಖಾನ್ ಅವರ ಮಾರ್ಗದರ್ಶನದಲ್ಲಿ ಕೂದಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ.
ಮನೋಜ್ ಬಾಜ್ಪಾಯಿ
ಮನೋಜ್ ಬಾಜ್ಪಾಯಿ ಅವರ ತಲೆಯ ತುಂಬ ಕೂದಲಿದೆ. ಆದರೆ, ಈ ಮೊದಲ ಫೋಟೋಗಳನ್ನು ನೋಡಿದ್ದರೆ ಅವರ ತಲೆಯಲ್ಲಿ ಕೂದಲು ಕಾಣುತ್ತಿರಲಿಲ್ಲ. ಮನೋಜ್ ಹೇರ್ ಟ್ರಾನ್ಸ್ಪ್ಲಾಂಟ್ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಚಿತ್ರಕ್ಕಾಗಿ ಭರ್ಜರಿ ಸಂಭಾವನೆ ಪಡೆದ ದಕ್ಷಿಣ ಭಾರತದ ಸ್ಟಾರ್ಗಳು
ಏನಿದು ಕೂದಲು ಕಸಿ?
ತಲೆಯ ಕೂದಲು ಉದುರುವ ಸಮಸ್ಯೆಯನ್ನು ಅನೇಕರು ಎದುರಿಸಿರುತ್ತಾರೆ. ಅವರು ಈ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಎಲ್ಲಿ ಕೂದಲು ಆರೋಗ್ಯವಾಗಿರುತ್ತದೆಯೋ ಅದನ್ನು ಬೇರು ಸಮೇತ ಕಿತ್ತು, ಖಾಲಿ ಇರುವ ಜಾಗದಲ್ಲಿ ನಾಟಿ ಮಾಡಲಾಗುತ್ತದೆ. ಈ ಶಸ್ತ್ರಚಿಕಿತ್ಸೆಗೆ ಒಳಗಾಗೋದು ಹೆಚ್ಚು ರಿಸ್ಕ್ನ ವಿಚಾರ ಎಂಬುದು ಅನೇಕರ ಅಭಿಪ್ರಾಯ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:44 am, Sat, 16 September 23