AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ಬಾಲಿವುಡ್ ನಟರ ಮೇಲೆ ಇಡಿ ದಾಳಿ: ದುಬೈ ಮದುವೆಯ ಲಿಂಕ್

ED raid on Bollywood: ಬಾಲಿವುಡ್​ನ ಹಲವು ನಟ-ನಟಿಯರು, ಗಾಯಕರು, ಹಾಸ್ಯ ಕಲಾವಿದರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ದುಬೈನಲ್ಲಿ ನಡೆದ ಮದುವೆಯೊಂದಿಗೆ ಲಿಂಕ್ ಹೊಂದಿದವರನ್ನಷ್ಟೆ ದಾಳಿಗೆ ಗುರಿ ಮಾಡಿಕೊಂಡಿರುವುದು ವಿಶೇಷ.

ಹಲವು ಬಾಲಿವುಡ್ ನಟರ ಮೇಲೆ ಇಡಿ ದಾಳಿ: ದುಬೈ ಮದುವೆಯ ಲಿಂಕ್
ಟೈಗರ್-ಸನ್ನಿ-ನುಸ್ರತ್
ಮಂಜುನಾಥ ಸಿ.
|

Updated on: Sep 15, 2023 | 3:18 PM

Share

ಹಲವು ಬಾಲಿವುಡ್ (Bollywood) ನಟ-ನಟಿಯರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ದಾಳಿ ನಡೆದ ಎಲ್ಲ ನಟ-ನಟಿಯರಿಗೂ ದುಬೈನಲ್ಲಿ ನಡೆದ ಐಶಾರಾಮಿ ಮದುವೆ ಕಾರ್ಯಕ್ರಮವೊಂದರ ಲಿಂಕ್ ಇರುವುದಾಗಿ ಗೊತ್ತಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದಿದ್ದ ಭಾರತೀಯರೊಬ್ಬರ ಬಹು ಐಶಾರಾಮಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ-ನಟಿಯರ ಮೇಲೆ ಮಾತ್ರ ಈ ಇಡಿ ದಾಳಿ ನಡೆದಿದೆ.

ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್​ನ ಮಾಲೀಕ ಸೌರಭ್ ಚಂದ್ರಕರ್ ಮದುವೆ ಇದೇ ಫೆಬ್ರವರಿಯಲ್ಲಿ ದುಬೈನಲ್ಲಿ ಬಹು ಅದ್ಧೂರಿಯಾಗಿ ನಡೆದಿತ್ತು. ಆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಪ್ರದರ್ಶನ ನೀಡಿದ್ದ ಬಾಲಿವುಡ್ ನಟ, ನಟಿಯರ ಮೇಲೆ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

ದುಬೈನಲ್ಲಿ ನಡೆದ ಮದುವೆಯಲ್ಲಿ ನಟ ಟೈಗರ್ ಶ್ರಾಫ್, ಸನ್ನಿ ಲಿಯೋನಿ, ಕೃತಿ ಕರಬಂಧ, ನುಸ್ರತ್ ಬರೂಚಾ, ಭಾಗ್ಯಶ್ರೀ, ಕಮಿಡಿಯನ್​ಗಳಾದ ಕೃಷ್ಣ ಅಭಿಷೇಕ್, ಭಾರತಿ, ಗಾಯಕರಾದ ನೇಹಾ ಕಕ್ಕಡ್, ಅತಿಫ್ ಅಸ್ಲಂ, ರಾಹತ್ ಫತೇ ಅಲಿ ಖಾನ್, ವಿಶಾಲ್ ದದ್ಲಾನಿ, ಅಲಿ ಅಸ್ಗರ್ ಇನ್ನೂ ಕೆಲವರ ಮೇಲೆ ಇಡಿ ದಾಳಿ ನಡೆಸಿದೆ.

ಇದನ್ನೂ ಓದಿ:ಅಂಡರ್ವಲ್ಡ್ ಮುಂದೆ ಮಂಡಿಯೂರದ ಏಕೈಕ ಬಾಲಿವುಡ್ ಸ್ಟಾರ್ ಶಾರುಖ್ ಖಾನ್

ಸೌರಭ್ ಚಂದ್ರಕರ್ ಮದುವೆಗೆ ಸುಮಾರು 200 ಕೋಟಿ ಖರ್ಚು ಮಾಡಿದ್ದಾರೆ ಎಂದು ಇಡಿ ಅಂದಾಜಿಸಿದ್ದು, ಇದರಲ್ಲಿ 140 ಕೋಟಿ ಹಣವನ್ನು ಹವಾಲ ರೂಪದಲ್ಲಿ ಮುಂಬೈನ ಇವೆಂಟ್ ಮ್ಯಾನೇಜ್​ಮೆಂಟ್ ಸಂಸ್ಥೆಯೊಂದಕ್ಕೆ ನೀಡಲಾಗಿದೆಯಂತೆ. ಈ ಇವೆಂಟ್ ಮ್ಯಾನೇಜ್​ಮೆಂಟ್ ಸಂಸ್ಥೆಯ ಮೂಲಕವೇ ಬಾಲಿವುಡ್ ನಟ-ನಟಿಯರು, ಗಾಯಕರಿಗೆ ಸಂಭಾವನೆಗಳನ್ನು ತಲುಪಿಸಲಾಗಿದೆ.

ದುಬೈನಲ್ಲಿ ನಡೆದ ಮದುವೆಗೆ ತೆರಳಲು ನಾಗಪುರದಿಂದ ಹಲವು ಪ್ರೈವೇಟ್ ಜೆಟ್​ಗಳನ್ನು ಬುಕ್ ಮಾಡಲಾಗಿತ್ತಂತೆ. ದುಬೈನಲ್ಲಿ ಹೋಟೆಲ್​ಗಳಿಗೆ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತಂತೆ. ಈ 40 ಕೋಟಿ ಹಣದ ಹೊರತಾಗಿ ಮದುವೆಗೆ ಖರ್ಚು ಮಾಡಿದ ನೂರಾರು ಕೋಟಿ ಹಣವನ್ನು ಹವಾಲಾ ಮೂಲಕವೇ ನೀಡಲಾಗಿತ್ತು ಎಂದು ಇಡಿಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಸೌರಭ್ ಚಂದ್ರಕರ್ ಹಾಗೂ ರವಿ ಉಪ್ಪಾಲ್ ಅವರುಗಳು ಮಹದೇವ್ ಆನ್​ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ದುಬೈನಲ್ಲಿದ್ದುಕೊಂಡು ನಡೆಸುತ್ತಿದ್ದರಂತೆ. ಹೊಸ ಬಳಕೆದಾರರನ್ನು ತಲುಪಲು, ಹಣ ವರ್ಗಾವಣೆ ಇನ್ನಿತರೆ ಕಾರ್ಯಗಳಿಗೆ ಲೇಯರ್ಡ್ ವೆಬ್ ಅನ್ನು ಬಳಸುತ್ತಿದ್ದರು. ಭಾರತದಲ್ಲಿಯೂ ಹಲವಾರು ಏಜೆಂಟ್​ಗಳನ್ನು ಇವರು ನೇಮಕ ಮಾಡಿಕೊಂಡಿದ್ದು 70:30ರ ಅನುಪಾತದಲ್ಲಿ ಲಾಭಾಂಶ ಹಂಚಿಕೆ ಮಾಡಿಕೊಳ್ಳುತ್ತಿದ್ದರು ಎಂದಿದೆ ಇಡಿ.

ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಗುರಿಯಾಗಿಸಿಕೊಂಡು ಹಲವು ನಗರಗಳಲ್ಲಿ ದಾಳಿ ಮಾಡಿರುವ ಇಡಿ 417 ಕೋಟಿ ಮೌಲ್ಯದ ನಗದು, ಚಿನ್ನ, ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಭೋಪಾಲ್, ಮುಂಬೈ, ಕೊಲ್ಕತ್ತ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ರೇಡ್​ಗಳನ್ನು ಇಡಿ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು