ಏಕದಿನದಲ್ಲಿ ಸೂರ್ಯನಿಗೆ ಗ್ರಹಣ; 19 ಇನ್ನಿಂಗ್ಸ್​ಗಳಿಂದ ಒಂದೇ ಒಂದು ಅರ್ಧಶತಕವಿಲ್ಲ..!

Suryakumar Yadav: ಇಲ್ಲಿಯವರೆಗೆ ಸೂರ್ಯ 27 ಏಕದಿನ ಪಂದ್ಯಗಳ 25 ಇನ್ನಿಂಗ್ಸ್‌ಗಳಲ್ಲಿ 24.40 ರ ಸರಾಸರಿಯಲ್ಲಿ 537 ರನ್ ಬಾರಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಎರಡು ಅರ್ಧಶತಕಗಳನ್ನು ಬಿಟ್ಟರೆ, ಸೂರ್ಯನ ಬ್ಯಾಟ್​ನಿಂದ ಶತಕ ಬಂದಿಲ್ಲ. ಇದೆಲ್ಲದರ ಹೊರತಾಗಿ ಕಳೆದ 19 ಇನ್ನಿಂಗ್ಸ್‌ಗಳಲ್ಲಿ ಸೂರ್ಯ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ ಎಂಬುದು ಅವರ ಕಳಪೆ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿದೆ.

ಏಕದಿನದಲ್ಲಿ ಸೂರ್ಯನಿಗೆ ಗ್ರಹಣ; 19 ಇನ್ನಿಂಗ್ಸ್​ಗಳಿಂದ ಒಂದೇ ಒಂದು ಅರ್ಧಶತಕವಿಲ್ಲ..!
ಸೂರ್ಯಕುಮಾರ್ ಯಾದವ್
Follow us
|

Updated on:Sep 16, 2023 | 11:15 AM

ಏಷ್ಯಾಕಪ್ (Asia Cup 2023) ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ (India vs Bangladesh) ಆರು ರನ್‌ಗಳಿಂದ ಸೋಲನುಭವಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತಕ್ಕೆ ಗೆಲ್ಲಲು 266 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಕೇವಲ 259 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಈಗಾಗಲೇ ಫೈನಲ್ ತಲುಪಿದ್ದರಿಂದ ಈ ಪಂದ್ಯಕ್ಕೆ ಭಾರತ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಕುಲ್ದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಸ್ಟಾರ್ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಕೂಡ ಪಂದ್ಯ ಆಡುವ ಅವಕಾಶ ಪಡೆದಿದ್ದರು. ಆದರೆ, ಸೂರ್ಯಕುಮಾರ್ ಮತ್ತೊಮ್ಮೆ ಏಕದಿನದಲ್ಲಿ ವಿಫಲರಾಗುವ ಮೂಲಕ ತಾನು ಈ ಮಾದರಿಗೆ ಸರಿ ಹೊಂದುವ ಬ್ಯಾಟರ್ ಅಲ್ಲ ಎಂಬುದನ್ನು ಸಾಭೀತು ಪಡಿಸಿದ್ದಾರೆ.

ಈ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ 34 ಎಸೆತಗಳಲ್ಲಿ ಮೂರು ಬೌಂಡರಿ ಒಳಗೊಂಡಂತೆ 26 ರನ್ ಬಾರಿಸಿದರು. ಆದರೆ ನಿರ್ಣಾಯಕ ಹಂತದಲ್ಲಿ ಸ್ವೀಪ್ ಶಾಟ್ ಆಡುವ ಯತ್ನದಲ್ಲಿ ಶಕೀಬ್ ಅಲ್ ಹಸನ್ ಬೌಲಿಂಗ್​ನಲ್ಲಿ ಸೂರ್ಯಕುಮಾರ್ ಬೌಲ್ಡ್ ಆದರು. ಈ ಮೂಲಕ ಏಕದಿನ ಮಾದರಿಯಲ್ಲಿ ಸೂರ್ಯ ಅವರ ಕಳಪೆ ಫಾರ್ಮ್​ ಕೂಡ ಮುಂದುವರೆಯಿತು. ಇಲ್ಲಿಯವರೆಗೆ ಸೂರ್ಯ 27 ಏಕದಿನ ಪಂದ್ಯಗಳ 25 ಇನ್ನಿಂಗ್ಸ್‌ಗಳಲ್ಲಿ 24.40 ರ ಸರಾಸರಿಯಲ್ಲಿ 537 ರನ್ ಬಾರಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಎರಡು ಅರ್ಧಶತಕಗಳನ್ನು ಬಿಟ್ಟರೆ, ಸೂರ್ಯನ ಬ್ಯಾಟ್​ನಿಂದ ಒಂದೇ ಒಂದು ಶತಕ ಬಂದಿಲ್ಲ. ಇದೆಲ್ಲದರ ಹೊರತಾಗಿ ಕಳೆದ 19 ಇನ್ನಿಂಗ್ಸ್‌ಗಳಲ್ಲಿ ಸೂರ್ಯ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ ಎಂಬುದು ಅವರ ಕಳಪೆ ಫಾರ್ಮ್​ಗೆ ಹಿಡಿದ ಕೈಗನ್ನಡಿಯಾಗಿದೆ.

T20 Rankings: ಶೂನ್ಯ ಸರದಾರ ಸೂರ್ಯಕುಮಾರ್ ಯಾದವ್ ಕೈತಪ್ಪಿತಾ ನಂ.1 ಪಟ್ಟ?

19 ಇನ್ನಿಂಗ್ಸ್​ಗಳಿಂದ ಒಂದೇ ಒಂದು ಅರ್ಧಶತಕವಿಲ್ಲ..!

18 ಜುಲೈ 2021 ರಂದು ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ತಮ್ಮ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್​ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಆ ಪಂದ್ಯದಲ್ಲಿ ಅಜೇಯ 31 ರನ್ ಗಳಿಸುವ ಮೂಲಕ ಈ ಮಾದರಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದರು. ನಂತರ ತಮ್ಮ ಎರಡನೇ ಏಕದಿನ ಪಂದ್ಯದಲ್ಲಿಯೇ ಅರ್ಧ ಶತಕ ಬಾರಿಸಿದ್ದ ಸೂರ್ಯ, ಮಧ್ಯಮ ಕ್ರಮಾಂಕಕ್ಕೆ ಹೇಳಿ ಮಾಡಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಆದರೆ 9 ಫೆಬ್ರವರಿ 2022 ರಂದು ವೆಸ್ಟ್ ಇಂಡೀಸ್ ವಿರುದ್ಧ 64 ರನ್ಗಳ ಇನ್ನಿಂಗ್ಸ್ ಆಡಿದ ನಂತರ, ಸೂರ್ಯನ ಬ್ಯಾಟ್ ಮೌನದೆಡೆಗೆ ಮುಖ ಮಾಡಿದೆ. ಅಂದಿನಿಂದ ಸೂರ್ಯ ಆಡಿದ ಒಂದೇ ಒಂದು ಪಂದ್ಯದಲ್ಲೂ ಅವರಿಗೆ ಗಮನಾರ್ಹ ಪ್ರದರ್ಶನ ನೀಡಲಾಗಿಲ್ಲ. ಇದಕ್ಕೆ ಸಾಕ್ಷಿಯಾಗಿ ಕೊನೆಯ 25 ಇನ್ನಿಂಗ್ಸ್‌ಗಳಲ್ಲಿ ಸೂರ್ಯ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದರ ವಿವರ ಇಲ್ಲಿದೆ.

  1. ಶ್ರೀಲಂಕಾ ವಿರುದ್ಧ 31* ರನ್
  2. ಶ್ರೀಲಂಕಾ ವಿರುದ್ಧ 53 ರನ್
  3. ಶ್ರೀಲಂಕಾ ವಿರುದ್ಧ 40 ರನ್
  4. ದಕ್ಷಿಣ ಆಫ್ರಿಕಾ ವಿರುದ್ಧ 39 ರನ್
  5. ವೆಸ್ಟ್ ಇಂಡೀಸ್ ವಿರುದ್ಧ 34* ರನ್
  6. ವೆಸ್ಟ್ ಇಂಡೀಸ್ ವಿರುದ್ಧ 64 ರನ್
  7. ವೆಸ್ಟ್ ಇಂಡೀಸ್ ವಿರುದ್ಧ 6 ರನ್
  8. ಇಂಗ್ಲೆಂಡ್ ವಿರುದ್ಧ 27 ರನ್
  9. ಇಂಗ್ಲೆಂಡ್ ವಿರುದ್ಧ 16 ರನ್
  10. ವೆಸ್ಟ್ ಇಂಡೀಸ್ ವಿರುದ್ಧ 13 ರನ್
  11. ವೆಸ್ಟ್ ಇಂಡೀಸ್ ವಿರುದ್ಧ 9 ರನ್
  12. ವೆಸ್ಟ್ ಇಂಡೀಸ್ ವಿರುದ್ಧ 8 ರನ್
  13. ನ್ಯೂಜಿಲೆಂಡ್ ವಿರುದ್ಧ 4 ರನ್
  14. ನ್ಯೂಜಿಲೆಂಡ್ ವಿರುದ್ಧ 34* ರನ್
  15. ನ್ಯೂಜಿಲೆಂಡ್ ವಿರುದ್ಧ 6 ರನ್
  16. ಶ್ರೀಲಂಕಾ ವಿರುದ್ಧ 4 ರನ್
  17. ಶ್ರೀಲಂಕಾ ವಿರುದ್ಧ 31 ರನ್
  18. ನ್ಯೂಜಿಲೆಂಡ್ ವಿರುದ್ಧ 14 ರನ್
  19. ಆಸ್ಟ್ರೇಲಿಯಾ ವಿರುದ್ಧ 0 ರನ್
  20. ಆಸ್ಟ್ರೇಲಿಯಾ ವಿರುದ್ಧ 0 ರನ್
  21. ಆಸ್ಟ್ರೇಲಿಯಾ ವಿರುದ್ಧ 0 ರನ್
  22. ವೆಸ್ಟ್ ಇಂಡೀಸ್ 19 ರನ್
  23. ವೆಸ್ಟ್ ಇಂಡೀಸ್ ವಿರುದ್ಧ 24 ರನ್
  24. ವೆಸ್ಟ್ ಇಂಡೀಸ್ ವಿರುದ್ಧ 35 ರನ್
  25. ಬಾಂಗ್ಲಾದೇಶ ವಿರುದ್ಧ 26 ರನ್

ವಿಶ್ವಕಪ್ ತಂಡದಲ್ಲಿ ಸೂರ್ಯನಿಗೆ ಸ್ಥಾನ

ಸೂರ್ಯಕುಮಾರ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಏಕದಿನ ವಿಶ್ವಕಪ್‌ಗಾಗಿ 15 ಸದಸ್ಯರ ತಂಡದಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಏಕದಿನ ವಿಶ್ವಕಪ್‌ಗೂ ಮುನ್ನ ದೊಡ್ಡ ಇನ್ನಿಂಗ್ಸ್ ಆಡುವ ಮೂಲಕ ಸೂರ್ಯಕುಮಾರ್‌ಗೆ ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಅವಕಾಶವಿತ್ತು. ಆದರೆ ಅದೂ ಕೂಡ ಸೂರ್ಯನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಸೂರ್ಯಕುಮಾರ್ ಬದಲು ಫಾರ್ಮ್​ನಲ್ಲಿರುವ ಇತರ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಬೇಕೆಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:13 am, Sat, 16 September 23

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್