‘ಜವಾನ್’ ಚಿತ್ರಕ್ಕೆ ಸೀಕ್ವೆಲ್ ಮಾಡುವ ಇಚ್ಛೆ ವ್ಯಕ್ತಪಡಿಸಿದ ಅಟ್ಲಿ; ಕಾರಣ ತಿಳಿಸಿದ ನಿರ್ದೇಶಕ
ಶಾರುಖ್ ಖಾನ್ ‘ಜವಾನ್’ ಸಿನಿಮಾದಲ್ಲಿ ಡಬಲ್ ರೋಲ್ ಮಾಡಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಎರಡೂ ಪಾತ್ರಗಳು ಉಳಿಯುತ್ತವೆ. ಸೀಕ್ವೆಲ್ನಲ್ಲಿ ತಂದೆ ಮಗನ ಪಾತ್ರವನ್ನು ಮತ್ತೊಮ್ಮೆ ಒಟ್ಟಿಗೆ ತಂದು ಸಿನಿಮಾ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬೆನ್ನಲ್ಲೇ ಅಟ್ಲಿ ಅವರೇ ಈ ಬಗ್ಗೆ ಮಾತನಾಡಿದ್ದಾರೆ.
ನಿರ್ದೇಶಕ ಅಟ್ಲಿ (Atlee) ಅವರು ‘ಜವಾನ್’ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಬಾಲಿವುಡ್ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲೇ ಅವರು ಗೆಲುವು ಕಂಡಿದ್ದಾರೆ. ಸಿನಿಮಾ ಸೂಪರ್ ಹಿಟ್ ಆದರೆ ಅದಕ್ಕೆ ಸೀಕ್ವೆಲ್ ರೆಡಿ ಮಾಡಲಾಗುತ್ತದೆ. ‘ಪಠಾಣ್’ (Pathaan Movie) ಹಿಟ್ ಆದಾಗಲೂ ಇದೇ ರೀತಿಯ ಸುದ್ದಿ ಹರಿದಾಡಿತ್ತು. ಈಗ ‘ಜವಾನ್’ ಚಿತ್ರ ಗೆದ್ದ ಬಳಿಕವೂ ಇದೇ ರೀತಿಯ ಚರ್ಚೆ ಶುರುವಾಗುತ್ತಿದೆ. ಈ ಚಿತ್ರಕ್ಕೆ ಸೀಕ್ವೆಲ್ ತರುವ ಬಗ್ಗೆ ಅಟ್ಲಿ ಮಾತನಾಡಿದ್ದಾರೆ.
ಶಾರುಖ್ ಖಾನ್ ‘ಜವಾನ್’ ಸಿನಿಮಾದಲ್ಲಿ ಡಬಲ್ ರೋಲ್ ಮಾಡಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಎರಡೂ ಪಾತ್ರಗಳು ಉಳಿಯುತ್ತವೆ. ಸೀಕ್ವೆಲ್ನಲ್ಲಿ ತಂದೆ ಮಗನ ಪಾತ್ರವನ್ನು ಮತ್ತೊಮ್ಮೆ ಒಟ್ಟಿಗೆ ತಂದು ಸಿನಿಮಾ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬೆನ್ನಲ್ಲೇ ಅಟ್ಲಿ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ಕಥೆಯ ಒಂದು ಲೈನ್ ಸ್ಟ್ರಾಂಗ್ ಆಗಿದ್ದರೆ ಅವರು ಸೀಕ್ವೆಲ್ ಮಾಡಲಿದ್ದಾರಂತೆ.
‘ನನ್ನ ಎಲ್ಲಾ ಸಿನಿಮಾಗಳಿಗೆ ಪೂರ್ಣ ಪ್ರಮಾಣದ ಕ್ಲೈಮ್ಯಾಕ್ಸ್ ನೀಡಿಲ್ಲ. ನನ್ನ ಯಾವ ಸಿನಿಮಾಗಳಿಗೂ ಸೀಕ್ವೆಲ್ ಮಾಡುವ ಆಲೋಚನೆ ಮಾಡಿಲ್ಲ. ಆದರೆ, ಜವಾನ್ ಚಿತ್ರವನ್ನು ಮುಂದುವರಿಸಲು ಒಂದು ಬಲವಾದ ಕಥೆ ಸಿಕ್ಕರೆ ಮಾಡುತ್ತೇನೆ. ಇಂದಲ್ಲ ನಾಳೆ ಈ ಚಿತ್ರದ ಕಥೆ ಮುಂದುವರಿಸಲು ಅವಕಾಶ ಇದೆ. ಖಂಡಿತವಾಗಿಯೂ ಒಂದು ದಿನ ಜವಾನ್ ಸೀಕ್ವೆಲ್ ಮಾಡುತ್ತೇನೆ’ ಎಂದಿದ್ದಾರೆ ಅವರು.
ಇತ್ತೀಚೆಗೆ ತಮಿಳು ವೆಬ್ಸೈಟ್ ಒಂದು ‘ಜವಾನ್ 2’ ಬಗ್ಗೆ ಅಪ್ಡೇಟ್ ನೀಡಿತ್ತು. ‘ಜವಾನ್ 2’ ಚಿತ್ರಕ್ಕೆ ಅಟ್ಲಿ ಅವರು ಕಥೆ ಮಾಡಿಕೊಳ್ಳಲು ಹೇಳಿದ್ದಾರೆ ಎಂದು ವರದಿ ಆಗಿತ್ತು. ಈ ವಿಚಾರದ ಬಗ್ಗೆ ಅಟ್ಲಿ ಅವರಿಗೆ ನೇರವಾಗಿ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸುವಾಗ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶನಿವಾರ ಬಂಗಾರದ ಬೆಳೆ ತೆಗೆದ ‘ಜವಾನ್’; ಎರಡನೇ ವಾರವೂ ಮುಂದುವರಿದ ಸಿನಿಮಾ ಅಬ್ಬರ
‘ಜವಾನ್’ ಸಿನಿಮಾದಲ್ಲಿ ಈಗಾಗಲೇ ವಿಜಯ್ ಸೇತುಪತಿ ಪಾತ್ರ ಕೊನೆ ಆಗಿದೆ. ಹೀಗಾಗಿ, ಸೀಕ್ವೆಲ್ ಬಂದರೆ ಈ ಪಾತ್ರ ಮುಂದುವರಿಯೋದು ಅನುಮಾನವೇ. ಇನ್ನು ಸಿನಿಮಾದಲ್ಲಿ ಹಲವು ಪಾತ್ರಗಳು ಬರುತ್ತವೆ. ಅವರಿಗೆ ಹೇಗೆ ತರಬೇತಿ ನೀಡಲಾಯಿತು ಎನ್ನು ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಆ ಕುರಿತು ಕೂಡ ಸೀಕ್ವೆಲ್ ಮಾಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ