‘ಆದಿಪುರುಷ್’ ಸೋಲಿನ ಬಳಿಕ ರಗಡ್ ಆಗಿ ಬರ್ತಿದ್ದಾರೆ ಕೃತಿ ಸನೋನ್; ‘ಗಣಪತ್’ ಪೋಸ್ಟರ್ ವೈರಲ್
ಗೌರಿ ಗಣೇಶ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಸಿನಿಮಾ ಮಂದಿಗೂ ಈ ಹಬ್ಬ ಅಂದರೆ ಸ್ಪೆಷಲ್. ಈ ವಿಶೇಷ ದಿನದಂದು ಅನೇಕ ಸಿನಿಮಾ ತಂಡಗಳು ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಿವೆ. ‘ಗಣಪತ್: ಎ ಹೀರೋ ಈಸ್ ಬಾರ್ನ್’ ಚಿತ್ರತಂಡ ಕೂಡ ಪೋಸ್ಟರ್ ರಿಲೀಸ್ ಮಾಡಿದ್ದು, ಅದರಲ್ಲಿ ಕೃತಿ ಸನೋನ್ ಅವರು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ಬೆಡಗಿ ಕೃತಿ ಸನೋನ್ (Kriti Sanon) ಅವರು ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾದಲ್ಲಿ ಕೃತಿ ಸನೋನ್ಗೆ ಸೀತೆಯ ಪಾತ್ರ ನೀಡಲಾಗಿತ್ತು. ಬಹಳ ಸೌಮ್ಯ ಸ್ವಭಾವದ ಆ ಪಾತ್ರಕ್ಕೆ ಅವರು ಜೀವ ತುಂಬಿದ್ದರು. ಆದರೆ ಆ ಸಿನಿಮಾ ಗೆಲ್ಲಲಿಲ್ಲ. ಈಗ ಅದಕ್ಕೆ ತದ್ವಿರುದ್ಧವಾದಂತಹ ಒಂದು ಗೆಟಪ್ನಲ್ಲಿ ಪ್ರೇಕ್ಷಕರ ಮುಂದೆ ಬರಲು ಕೃತಿ ಸನೋನ್ ಸಜ್ಜಾಗಿದ್ದಾರೆ. ಹೌದು, ಶೀಘ್ರದಲ್ಲೇ ರಿಲೀಸ್ ಆಗಲಿರುವ ‘ಗಣಪತ್: ಎ ಹೀರೋ ಈಸ್ ಬಾರ್ನ್’ (Ganapath: A Hero Is Born) ಸಿನಿಮಾದಲ್ಲಿ ಅವರು ರಗಡ್ ಪಾತ್ರ ಮಾಡಿದ್ದಾರೆ. ಅದರ ಝಲಕ್ ತೋರಿಸುವಂತಹ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಟೈಗರ್ ಶ್ರಾಫ್ (Tiger Shroff) ನಟಿಸುತ್ತಿದ್ದಾರೆ. ಲೆಜೆಂಡರಿ ನಟ ಅಮಿತಾಭ್ ಬಚ್ಚನ್ ಅವರಿಗೂ ಒಂದು ಮುಖ್ಯವಾದ ಪಾತ್ರ ಇದೆ.
ಗೌರಿ ಗಣೇಶ ಹಬ್ಬವನ್ನು ಎಲ್ಲ ಕಡೆಗಳಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗಿದೆ. ಸಿನಿಮಾ ಮಂದಿಗೂ ಈ ಹಬ್ಬ ಸಖತ್ ಸ್ಪೆಷಲ್. ಈ ವಿಶೇಷ ದಿನದಂದು ಅನೇಕ ಸಿನಿಮಾ ತಂಡಗಳು ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಿವೆ. ‘ಗಣಪತ್: ಎ ಹೀರೋ ಈಸ್ ಬಾರ್ನ್’ ಚಿತ್ರತಂಡ ಕೂಡ ಪೋಸ್ಟರ್ ರಿಲೀಸ್ ಮಾಡಿದ್ದು, ಅದರಲ್ಲಿ ಕೃತಿ ಸನೋನ್ ಅವರು ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್ ವೈರಲ್ ಆಗುತ್ತಿದೆ. ಆ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.
View this post on Instagram
ಇದಕ್ಕೂ ಮುನ್ನ ಟೈಗರ್ ಶ್ರಾಫ್ ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಅವರು ಕೂಡ ಆ್ಯಕ್ಷನ್ ಅವತಾರದಲ್ಲಿ ಪೋಸ್ ನೀಡಿದ್ದಾರೆ. ಬೇಟೆಗೆ ಸಜ್ಜಾಗಿರುವ ಹುಲಿಯಂತೆ ಅವರ ಪೋಸ್ಟರ್ ಮೂಡಿಬಂದಿದೆ. ಅವರ ಕಟ್ಟುಮಸ್ತಾದ ಬಾಡಿ ಕೂಡ ಗಮನ ಸೆಳೆಯುತ್ತಿದೆ. ಟೈಗರ್ ಶ್ರಾಫ್ ನಟನೆಯ ಸಿನಿಮಾ ಎಂದರೆ ಅಭಿಮಾನಿಗಳು ಭರ್ಜರಿ ಸಾಹಸ ದೃಶ್ಯಗಳನ್ನು ಇಷ್ಟಪಡುತ್ತಾರೆ. ‘ಗಣಪತ್: ಎ ಹೀರೋ ಈಸ್ ಬಾರ್ನ್’ ಸಿನಿಮಾದಲ್ಲಿ ಕೂಡ ಮೈನವಿರೇಳಿಸುವಂತಹ ಆ್ಯಕ್ಷನ್ ದೃಶ್ಯಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್; ಆಲಿಯಾ ಭಟ್, ಕೃತಿ ಸನೋನ್ಗೆ ‘ಅತ್ಯುತ್ತಮ ನಟಿ’ ಅವಾರ್ಡ್
ಕೃತಿ ಸನೋನ್, ಅಮಿತಾಭ್ ಬಚ್ಚನ್, ಟೈಗರ್ ಶ್ರಾಫ್ ಅವರಂತಹ ಘಟಾನುಘಟಿ ಕಲಾವಿದರ ಸಂಗಮ ‘ಗಣಪತ್: ಎ ಹೀರೋ ಈಸ್ ಬಾರ್ನ್’ ಸಿನಿಮಾದಲ್ಲಿ ಆಗಿರುವುದರಿಂದ ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 20ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಹಿಂದಿ, ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿದೆ. ಈ ಸಿನಿಮಾಗೆ ವಿಕಾಸ್ ಬಹ್ಲ್ ಅವರು ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.