Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ

ಕಾಲಿವುಡ್​ನ ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ನಯನತಾರಾ ಮುಂತಾದ ಸ್ಟಾರ್​ ಕಲಾವಿದರು ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ದೇಶಭಕ್ತಿ, ಫ್ಯಾಮಿಲಿ ಎಮೋಷನ್​ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಿವೆ. ಜವಾನ್​ ಚಿತ್ರದ ವಿಮರ್ಶೆ ಇಲ್ಲಿದೆ..

Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ
ಶಾರುಖ್​ ಖಾನ್​
Follow us
|

Updated on:Sep 07, 2023 | 12:39 PM

ಚಿತ್ರ: ಜವಾನ್​. ನಿರ್ಮಾಣ: ಗೌರಿ ಖಾನ್​. ನಿರ್ದೇಶನ: ಅಟ್ಲಿ. ಪಾತ್ರವರ್ಗ: ಶಾರುಖ್​ ಖಾನ್​, ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಸಂಜಯ್​ ದತ್​ ಮುಂತಾದವರು. ಸ್ಟಾರ್​: 3.5/5

ಶಾರುಖ್​ ಖಾನ್​ (Shah Rukh Khan) ನಟನೆಯ ‘ಜವಾನ್​’ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕೆ ಕಾರಣ ಹಲವು. ಕಾಲಿವುಡ್​ನ ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ನಯನತಾರಾ ಮುಂತಾದ ಸ್ಟಾರ್​ ಕಲಾವಿದರು ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಂದು (ಸೆಪ್ಟೆಂಬರ್​ 7) ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಮಾಸ್​ ಮನರಂಜನೆ ಬಯಸುವ ಪ್ರೇಕ್ಷಕರಿಗೆ ‘ಜವಾನ್​’ ಸಿನಿಮಾ (Jawan movie) ಇಷ್ಟ ಆಗುತ್ತದೆ. ಒಂದು ಕಮರ್ಷಿಯಲ್​ ಕಥೆಯ ಮೂಲಕ ಜನರಿಗೆ ಸಂದೇಶ ನೀಡುವ ಕೆಲಸವೂ ಆಗಿದೆ. ಬಹುತಾರಾಗಣ ಇರುವುದರಿಂದ ಚಿತ್ರದ ಮೆರುಗು ಹೆಚ್ಚಿದೆ. ಒಟ್ಟಾರೆ ‘ಜವಾನ್​’ ಹೇಗಿದೆ ತಿಳಿಯಲು ಈ ವಿಮರ್ಶೆ (Jawan movie Review) ಓದಿ..

ಪ್ಯಾನ್​ ಇಂಡಿಯಾ ಕಾನ್ಸೆಪ್ಟ್​

‘ಜವಾನ್​’ ಸಿನಿಮಾದಲ್ಲಿ ಬಾಲಿವುಡ್​ ಮತ್ತು ಸೌತ್​ ಸಿನಿಮಾದ ಸಂಗಮ ಆಗಿದೆ. ಕಾಲಿವುಡ್​ನ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಕೈ ಜೋಡಿಸಿದ್ದಾರೆ. ಹಾಗಾಗಿ ಈ ಚಿತ್ರದ ಮೇಕಿಂಗ್​ ಕೂಡ ಬಹುತೇಕ ಸೌತ್​ ಶೈಲಿಯಲ್ಲಿದೆ. ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಚಾಲ್ತಿಯಲ್ಲಿರುವ ಈ ಕಾಲಘಟ್ಟವನ್ನು ಗಮನದಲ್ಲಿ ಇಟ್ಟುಕೊಂಡೇ ಅಟ್ಲಿ ಅವರು ಸ್ಕ್ರಿಪ್ಟ್​ ಮಾಡಿದಂತಿದೆ. ಇದು ಬರೀ ಮೇಕಿಂಗ್ ವಿಚಾರಕ್ಕೆ ಮಾತ್ರವಲ್ಲ, ಇದರಲ್ಲಿ ಹೇಳಿರುವ ಸಂದೇಶಕ್ಕೂ ಅನ್ವಯ. ಇಡೀ ದೇಶದಲ್ಲಿ ಕಾಡುತ್ತಿರುವ ರೈತರ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಎಲ್ಲಡೆ ಬೇರು ಬಿಟ್ಟಿರುವ ಭ್ರಷ್ಟಾಚಾರ ಮುಂತಾದ ಅಂಶಗಳ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಎಲ್ಲವನ್ನೂ ಪಕ್ಕಾ ಮಾಸ್​ ಕಮರ್ಷಿಯಲ್​ ಶೈಲಿಯಲ್ಲಿ ನಿರೂಪಿಸಲಾಗಿದೆ.

10 ವರ್ಷಗಳ ಹಿಂದೆಯೇ ಶಾರುಖ್​ ಖಾನ್​ ಚಿತ್ರದ ಆಫರ್​ ತಿರಸ್ಕರಿಸಿದ್ದ ನಯನತಾರಾ; ಕಾರಣ ಏನು?

ದ್ವಿಪಾತ್ರದಲ್ಲಿ ಶಾರುಖ್​ ಖಾನ್​

ನಟ ಶಾರುಖ್​ ಖಾನ್​ ಅವರು ‘ಜವಾನ್​’ ಸಿನಿಮಾದಲ್ಲಿ ದ್ವಿಪಾತ್ರ ಮಾಡಿದ್ದಾರೆ. ಅಪ್ಪ-ಮಗನ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಎರಡು ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ನಟನೆಗಿಂತಲೂ ಹೆಚ್ಚಾಗಿ ಅವರು ಆ್ಯಕ್ಷನ್​ಗೆ ಒತ್ತು ನೀಡಿದ್ದಾರೆ. ಇದು ಪಕ್ಕಾ ಮಾಸ್​ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಪೂರೈಸಲು ಶಾರುಖ್​ ಖಾನ್​ ಪ್ರಯತ್ನಿಸಿದ್ದಾರೆ. ಚಿತ್ರದುದ್ದಕ್ಕೂ ಅವರು ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಪ್ಪ ಮತ್ತು ಮಗನಾಗಿ ಎರಡು ಬೇರೆ ಬೇರೆ ಶೇಡ್​ನಲ್ಲಿ ಶಾರುಖ್​ ಅಭಿನಯಿಸಿದ್ದಾರೆ. ಆರಂಭದ ಕೆಲವು ದೃಶ್ಯಗಳಲ್ಲಿ ವಿಲನ್​ ರೀತಿ ಅಬ್ಬರಿಸುವ ಅವರು ನಂತರ ಹೀರೋಯಿಸಂ ತೋರಿಸುತ್ತಾರೆ. ಈ ರೀತಿಯ ಚಿಕ್ಕ-ಪುಟ್ಟ ಟ್ವಿಸ್ಟ್​ಗಳ ಕಾರಣದಿಂದ ಪ್ರೇಕ್ಷಕರನ್ನು ಹಿಡಿದಿರುವ ಪ್ರಯತ್ನ ಮಾಡಲಾಗಿದೆ.

Toby Review: ಮಾತನಾಡದೆ ಮನಸ್ಸಿಗೆ ನಾಟುವ ‘ಟೋಬಿ’; ಇಲ್ಲಿದೆ ಒಂದಷ್ಟು ಪ್ಲಸ್​, ಇನ್ನೊಂದಿಷ್ಟು ಮೈನಸ್​

ಬೇರೆ ಪಾತ್ರಗಳಿಗೂ ಸಿಕ್ಕಿದೆ ಮಹತ್ವ

ಇಡೀ ಸಿನಿಮಾದಲ್ಲಿ ಶಾರುಖ್​ ಖಾನ್​ ಆವರಿಸಿಕೊಂಡಿದ್ದಾರೆ. ಆದರೆ ಅವರು ಇನ್ನುಳಿದ ಕಲಾವಿದರನ್ನು ಮೂಲೆಗೆ ತಳ್ಳಿಲ್ಲ. ಸೂಪರ್​ ಕಾಪ್​ ಆಗಿ ಕಾಣಿಸಿಕೊಂಡಿರುವ ನಯನತಾರಾ, ಖೈದಿಗಳಾಗಿ ಕಾಣಿಸಿಕೊಂಡ ಪ್ರಿಯಾಮಣಿ, ಸಾನ್ಯಾ ಮಲೋತ್ರಾ, ಫ್ಲ್ಯಾಶ್​ ಬ್ಯಾಕ್​ ದೃಶ್ಯಗಳಲ್ಲಿ ಬರುವ ದೀಪಿಕಾ ಪಡುಕೋಣೆ ಸೇರಿದಂತೆ ಎಲ್ಲರಿಗೂ ಅಗತ್ಯವಾದ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಕೆಲವೇ ದೃಶ್ಯಗಳಲ್ಲಿ ಬಂದು ಹೋದರೂ ಕೂಡ ದೀಪಿಕಾ ಪಡುಕೋಣೆ ನಿಭಾಯಿಸಿರುವ ಪಾತ್ರಕ್ಕೆ ತೂಕ ಇದೆ. ನಟ ವಿಜಯ್​ ಸೇತುಪತಿ ಅವರು ಹೊಡಿಬಡಿ ದೃಶ್ಯಗಳಿಗಿಂತಲೂ ಹೆಚ್ಚಾಗಿ ಹಾವಭಾವದಲ್ಲೇ ಹೀರೋಗೆ ಟಕ್ಕರ್​ ನೀಡುವ ವಿಲನ್​ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ಅವರ ಅಭಿಮಾನಿಗಳು ಬಯಸುವಷ್ಟು ತೀವ್ರತೆಯಿಂದ ಈ ಪಾತ್ರ ಮೂಡಿಬಂದಿಲ್ಲ ಎನಿಸುತ್ತದೆ. ‘ಜವಾನ್​’ ಸಿನಿಮಾದಲ್ಲಿ ಸಂಜಯ್​ ದತ್​ ಅವರು ಒಂದು ವಿಶೇಷವಾದ ಪಾತ್ರ ಮಾಡಿದ್ದಾರೆ. ಕಥೆಯ ಒಂದು ಮಹತ್ವದ ಘಟ್ಟದಲ್ಲಿ ಅವರ ಪಾತ್ರ ಎಂಟ್ರಿ ಆಗುತ್ತದೆ. ಚೂರು ಕಾಮಿಡಿ ಮಾಡುತ್ತಾ, ಇನ್ನೂ ಒಂಚೂರು ಖಡಕ್​ ಆಗಿ ನಡೆದುಕೊಳ್ಳುತ್ತಾ ಅವರು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ.

Kausalya Supraja Rama Review: ನೀವು ನಿಜವಾದ ಗಂಡಸು ಹೌದಾ? ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ನೋಡಿದ್ರೆ ಬಯಲಾಗುತ್ತೆ ಸತ್ಯ

ಅಟ್ಲಿ ಹೇಳಿದ ಮಿಕ್ಸ್​​ ಮಸಾಲಾ ಕಥೆ

‘ಜವಾನ್​’ ಸಿನಿಮಾ ನೋಡುತ್ತಿದ್ದರೆ ಇದೇನೋ ಸಂಪೂರ್ಣ ಹೊಸ ಬಗೆಯ ಚಿತ್ರ ಎನಿಸುವುದೇ ಇಲ್ಲ. ಪ್ರತಿ ದೃಶ್ಯಗಳ ಜೀವಾಳವನ್ನು ಬೇರೆ ಇನ್ಯಾವುದೋ ಸಿನಿಮಾದಿಂದ ಎರವಲು ತಂದಂತೆ ಭಾಸವಾಗುತ್ತದೆ. ಸಾಲದಿಂದ ರೈತರ ಆತ್ಮಹತ್ಯೆ, ಸರ್ಕಾರದಲ್ಲಿ ಅಡಗಿರುವ ಲಂಚಾವತಾರ, ಸೈನಿಕರಿಗೆ ಪೂರೈಕೆ ಆಗುವ ಕಳಪೆ ಶಸ್ತ್ರಾಸ್ತ ಸೇರಿದಂತೆ ಅನೇಕ ವಿಚಾರಗಳು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಬಂದುಹೋಗಿವೆ. ಅದನ್ನೇ ಮತ್ತೊಮ್ಮೆ ‘ಜವಾನ್​’ ಸಿನಿಮಾದಲ್ಲಿ ಹೇಳಿದ್ದಾರೆ ನಿರ್ದೇಶಕರು. ಒಳ್ಳೆಯ ಕೆಲಸಕ್ಕಾಗಿ ಹೀರೋನೇ ಹೈಜಾಕ್​, ಕಿಡ್ನಾಪ್​ ಮುಂತಾದ ತಂತ್ರಗಳನ್ನು ಉಪಯೋಗಿಸಿಕೊಂಡು ಸರ್ಕಾರನ್ನು ಬಗ್ಗಿಸುವುದು ಕೂಡ ಹಲವು ಸಿನಿಮಾಗಳಲ್ಲಿ ಬಂದು ಹೋಗಿದೆ. ಅದು ‘ಜವಾನ್​’ ಚಿತ್ರದಲ್ಲೂ ಮುಂದುವರಿದಿದೆ. ವಿಷಯ ಹಳೆಯದಾದರೂ ಅದು ಇಂದಿಗೂ ಪ್ರಸ್ತುತ ಎಂಬ ಕಾರಣಕ್ಕೆ ಪ್ರೇಕ್ಷಕರಿಗೆ ಈ ಚಿತ್ರ ಕನೆಕ್ಟ್​ ಆಗುತ್ತದೆ.

ಒಟ್ಟಾರೆಯಾಗಿ ‘ಜವಾನ್​’ ಸಿನಿಮಾ ಬಗ್ಗೆ ಹೇಳೋದಾದರೆ ಇದು ಪಕ್ಕಾ ಶಾರುಖ್​ ಖಾನ್​ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ. ಆದರೆ ಇಲ್ಲಿ ರೊಮ್ಯಾಂಟಿಕ್​ ಆದಂತಹ ಶಾರುಖ್​ ಹೆಚ್ಚಾಗಿ ಕಾಣಸಿಗುವುದಿಲ್ಲ. ಆ್ಯಕ್ಷನ್​ ಹೀರೋ ಆಗಿ ಅವರು ಅಬ್ಬರಿಸಿದ್ದಾರೆ. ಹೊಡಿಬಡಿ ದೃಶ್ಯಗಳ ಜೊತೆಗೆ ಒಂದಷ್ಟು ದೇಶಭಕ್ತಿ, ಫ್ಯಾಮಿಲಿ ಎಮೋಷನ್​ ಮುಂತಾದ ಅಂಶಗಳನ್ನು ಬೆರೆಸುವ ಕೆಲಸ ಆಗಿದೆ. ಎಲ್ಲಿಯೂ ಬೋರ್​ ಆಗದಂತೆ ಆರಂಭದಿಂದ ಕೊನೇ ತನಕ ನೋಡಿಸಿಕೊಂಡು ಹೋಗುವ ಗುಣ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:29 pm, Thu, 7 September 23

ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ