10 ವರ್ಷಗಳ ಹಿಂದೆಯೇ ಶಾರುಖ್​ ಖಾನ್​ ಚಿತ್ರದ ಆಫರ್​ ತಿರಸ್ಕರಿಸಿದ್ದ ನಯನತಾರಾ; ಕಾರಣ ಏನು?

2013ರಲ್ಲಿ ತೆರೆಕಂಡ ‘ಚೆನ್ನೈ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ನಟಿಸಬಾರದು ಎಂಬುದು ನಯನತಾರಾ ಅವರ ಉದ್ದೇಶ ಆಗಿರಲಿಲ್ಲ. ಆದರೂ ಅವರು ಆಫರ್​ ತಿರಸ್ಕರಿಸಿದ್ದರ ಹಿಂದೆ ಒಂದು ಬಲವಾದ ಕಾರಣ ಇತ್ತು. ನಂತರ ಆ ಚಾನ್ಸ್​ ಪ್ರಿಯಾಮಣಿ ಪಾಲಾಯಿತು. ಈಗ ‘ಜವಾನ್​’ ಚಿತ್ರದಲ್ಲಿ ಶಾರುಖ್​ ಮತ್ತು ನಯನತಾರಾ ಜೊತೆಯಾಗಿ ನಟಿಸಿದ್ದಾರೆ.

10 ವರ್ಷಗಳ ಹಿಂದೆಯೇ ಶಾರುಖ್​ ಖಾನ್​ ಚಿತ್ರದ ಆಫರ್​ ತಿರಸ್ಕರಿಸಿದ್ದ ನಯನತಾರಾ; ಕಾರಣ ಏನು?
ಶಾರುಖ್​ ಖಾನ್​, ನಯನತಾರಾ
Follow us
ಮದನ್​ ಕುಮಾರ್​
|

Updated on: Sep 05, 2023 | 11:47 AM

ನಟಿ ನಯನತಾರಾ ಅವರು ‘ಜವಾನ್​’ (Jawan) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸೆಪ್ಟೆಂಬರ್​ 7ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇದು ಬಾಲಿವುಡ್​ ಸಿನಿಮಾ ಆಗಿದ್ದರೂ ಕೂಡ ದಕ್ಷಿಣ ಭಾರತದ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ತೆರೆ ಹಿಂದೆ ಕೂಡ ಸೌತ್​ ಸಿನಿಮಾ ಇಂಡಸ್ಟ್ರಿಯ ಹಲವರು ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಶಾರುಖ್ ಖಾನ್ (Shah Rukh Khan)​ ಮತ್ತು ನಯನತಾರಾ ಅವರು ಜೋಡಿಯಾಗಿ ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಅಚ್ಚರಿಯ ವಿಚಾರ ಏನೆಂದರೆ, 10 ವರ್ಷಗಳ ಹಿಂದೆಯೇ ನಯನತಾರಾ (Nayanthara) ಅವರಿಗೆ ಶಾರುಖ್​ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ..

2013ರಲ್ಲಿ ‘ಚೆನ್ನೈ ಎಕ್ಸ್​ಪ್ರೆಸ್​’ ಸಿನಿಮಾ ತೆರೆಕಂಡು ಸೂಪರ್​ ಹಿಟ್​ ಆಯಿತು. ಆ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಜೋಡಿಯಾಗಿ ನಟಿಸಿದ್ದರು. ಹಾಗಂತ ದೀಪಿಕಾ ಪಡುಕೋಣೆ ಮಾಡಬೇಕಿದ್ದ ಪಾತ್ರವನ್ನು ನಯನತಾರಾಗೆ ಆಫರ್​ ಮಾಡಿರಲಿಲ್ಲ. ಬದಲಿಗೆ ‘ಒನ್​ ಟು ತ್ರಿ ಫೋರ್​..’ ಐಟಂ ಹಾಡಿಗೆ ಹೆಜ್ಜೆ ಹಾಕುವಂತೆ ನಯನತಾರಾಗೆ ಕೇಳಿಕೊಳ್ಳಲಾಗಿತ್ತು. ಆದರೆ ಅದನ್ನು ಅವರು ತಿರಸ್ಕರಿಸಿದ್ದರು. ಬಳಿಕ ಆ ಅವಕಾಶ ಪ್ರಿಯಾಮಣಿಗೆ ಸಿಕ್ಕಿತು. ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿ ಜನಪ್ರಿಯತೆ ಹೆಚ್ಚಿಸಿಕೊಂಡರು.

ಇದನ್ನೂ ಓದಿ: ‘ಜವಾನ್’ ಚಿತ್ರಕ್ಕೆ ನಯನತಾರಾ ಪಡೆದ ಸಂಭಾವನೆ ಇಷ್ಟೊಂದಾ? ಕೇಳಿದ್ರೆ ಅಚ್ಚರಿಪಡ್ತೀರಿ

ಶಾರುಖ್​ ಖಾನ್​ ಜೊತೆ ನಟಿಸಬಾರದು ಎಂಬುದು ನಯನತಾರಾ ಅವರ ಉದ್ದೇಶ ಆಗಿರಲಿಲ್ಲ. ಆದರೆ, ಕೇವಲ ಐಟಂ ಡ್ಯಾನ್ಸ್​ನಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಅಂಥ ದೊಡ್ಡ ಸ್ಟಾರ್​ ನಟನ ಸಿನಿಮಾದಿಂದ ಆಫರ್​ ಬಂದರೂ ಕೂಡ ಅದನ್ನು ಅವರು ನಯವಾಗಿ ತಿರಸ್ಕರಿಸಿದ್ದರು. ಈಗ ‘ಜವಾನ್​’ ಸಿನಿಮಾದಲ್ಲಿ ನಯನತಾರಾಗೆ ಮುಖ್ಯವಾದ ಪಾತ್ರವೇ ಸಿಕ್ಕಿದೆ. ಆದ್ದರಿಂದ ಅವರು ಖುಷಿಯಿಂದ ಒಪ್ಪಿಕೊಂಡು ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್​ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: ‘ಸುಮ್ಮನಿರಿ.. 2 ಮಕ್ಕಳ ತಾಯಿ ಅವರು’: ನಯನತಾರಾ ಮೇಲೆ ಲವ್​ ಆಯ್ತಾ ಅಂತ ಕೇಳಿದ್ದಕ್ಕೆ ಶಾರುಖ್​ ಉತ್ತರ

ಅಟ್ಲಿ ನಿರ್ದೇಶನ ಮಾಡಿರುವ ‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಖಾನ್​, ನಯನತಾರಾ ಮಾತ್ರವಲ್ಲದೇ ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ ಪ್ರಿಯಾಮಣಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಶಾರುಖ್​ ಖಾನ್​ ಅವರಿಗೆ ವಿವಿಧ ಗೆಟಪ್​ಗಳು ಇವೆ. ಭರ್ಜರಿ ಆ್ಯಕ್ಷನ್​ ಸನ್ನಿವೇಶಗಳು ಈ ಸಿನಿಮಾದಲ್ಲಿ ಇವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಆದರೆ ಪ್ರಚಾರ ಕಾರ್ಯದಲ್ಲಿ ಅವರು ಭಾಗವಹಿಸುತ್ತಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ