AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​ಗೆ ಭಾರತದ ಅಧಿಕೃತ ಆಯ್ಕೆ ಪ್ರಕಟ: ಈ ಬಾರಿ ಮಲಯಾಳಂ ಸಿನಿಮಾಕ್ಕೆ ಮಣೆ

Oscars: 2024ರ ಆಸ್ಕರ್​ಗೆ ಭಾರತವು ಮಲಯಾಳಂನ '2018' ಸಿನಿಮಾವನ್ನು ಅಧಿಕೃತ ಆಯ್ಕೆಯಾಗಿ ಕಳಿಸುತ್ತಿದೆ. ಈ ಸಿನಿಮಾವು ಆಸ್ಕರ್​ರ ವಿದೇಶಿ ವಿಭಾಗದಲ್ಲಿ ನಾಲ್ಕರ ಘಟ್ಟಕ್ಕೆ ಏರಲು ಸೆಣೆಸಲಿದೆ.

ಆಸ್ಕರ್​ಗೆ ಭಾರತದ ಅಧಿಕೃತ ಆಯ್ಕೆ ಪ್ರಕಟ: ಈ ಬಾರಿ ಮಲಯಾಳಂ ಸಿನಿಮಾಕ್ಕೆ ಮಣೆ
ಮಂಜುನಾಥ ಸಿ.
|

Updated on: Sep 27, 2023 | 3:24 PM

Share

2023ರ ಆಸ್ಕರ್ (Oscars 2024) ಭಾರತದ ಪಾಲಿಗೆ ಮರೆಯಲಾಗದ ಆಸ್ಕರ್ ಆಗಿ ಪರಿಣಮಿಸಿದೆ. ಭಾರತದಲ್ಲಿ ನಿರ್ಮಾಣವಾದ ಸಿನಿಮಾಕ್ಕೆ ಅತ್ಯುತ್ತಮ ಹಾಡು ವಿಭಾಗದಲ್ಲಿ ಆಸ್ಕರ್ ಬಂದಿದೆ. ಆಸ್ಕರ್ ಗೆದ್ದಿದ್ದ ತೆಲುಗಿನ ‘ಆರ್​ಆರ್​ಆರ್’ (RRR) ಸಿನಿಮಾದ ‘ನಾಟು-ನಾಟು’ (NatuNatu) ಹಾಡು. ಎಂಎಂ ಕೀರವಾಣಿ, ಚಂದ್ರಭೋಸ್ ಅವರುಗಳು ಆಸ್ಕರ್ ಗೆದ್ದಿದ್ದನ್ನು ಇಡೀ ದೇಶವೇ ಸಂಭ್ರಮಿಸಿತು. ಇದೀಗ ಎಲ್ಲರ ದೃಷ್ಟಿ 2024ರ ಆಸ್ಕರ್​ ಕಡೆ ನೆಟ್ಟಿದ್ದು, ಈ ಬಾರಿ ಆಸ್ಕರ್​ಗೆ ಭಾರತದದಿಂದ ಕಳಿಸಲಾಗುವ ಅಧಿಕೃತ ಸಿನಿಮಾ ಘೋಷಣೆ ಆಗಿದೆ.

ಕಳೆದ ವರ್ಷ ಗುಜರಾತಿ ಸಿನಿಮಾ ‘ಚೆಲ್ಲೋ ಶೋ’ (ದಿ ಲಾಸ್ಟ್ ಶೋ) ಅನ್ನು ಕಳಿಸಲಾಗಿತ್ತು. ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸಿದ್ದ ‘ಚೆಲ್ಲೋ ಶೋ’ ಒಂದು ಹಂತವೂ ಮೇಲೆ ಹೋಗಲು ವಿಫಲವಾಗಿತ್ತು. ‘ಆರ್​ಆರ್​ಆರ್’ ಸಿನಿಮಾ ಭಾರತದ ಅಧಿಕೃತ ಆಯ್ಕೆ ಆಗಿರದ ಕಾರಣ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸಲಾಗಿರಲಿಲ್ಲ. ಆದರೆ ಬೇರೆ ವಿಭಾಗದಲ್ಲಿ ಅದಕ್ಕೆ ನಾಮಿನೇಷನ್ ದೊರೆಯಲಿಲ್ಲ. ನಾಮಿನೇಷನ್ ದೊರೆತ ಅತ್ಯುತ್ತಮ ಹಾಡು ವಿಭಾಗದಲ್ಲಿ ಆಸ್ಕರ್ ಗೆದ್ದಿತು.

ಈ ಬಾರಿ ಆಸ್ಕರ್​ಗೆ ಮಲಯಾಳಂ ಸಿನಿಮಾ ‘2018’ ಅನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. 2018 ರಲ್ಲಿ ಕೇರಳವನ್ನು ಬಾಧಿಸಿದ ಮಹಾಮಳೆ, ಪ್ರವಾಹ ಸನ್ನಿವೇಶವನ್ನು ಕೇರಳದ ಜನ, ಸರ್ಕಾರ ಹೇಗೆ ಒಗ್ಗಟ್ಟಾಗಿ ಎದುರಿಸಿತು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಬಾಕ್ಸ್ ಆಫೀಸ್​ನಲ್ಲಿ ಸೂಪರ್ ಹಿಟ್ ಆಗುವ ಜೊತೆಗೆ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿದ್ದ ಸಿನಿಮಾವನ್ನು 2024ರ ಆಸ್ಕರ್​ಗೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ:‘ಜವಾನ್​’ ಚಿತ್ರ ಆಸ್ಕರ್​ಗೆ ಹೋಗಬೇಕು ಎಂದ ನಿರ್ದೇಶಕ ಅಟ್ಲಿ; ಟ್ರೋಲ್​ ಮಾಡಿದ ನೆಟ್ಟಿಗರು

‘2018’ ಸಿನಿಮಾವನ್ನು ಜೂಡ್ ಜೋಸೆಫ್ ಆಂಟೊನಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಟೊವಿನೋ ಥಾಮಸ್, ಕುಂಚಾಕು ಬೋಬನ್, ಲಾಲ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ ಇನ್ನೂ ಅನೇಕ ಮಲಯಾಳಂನ ಹೆಸರಾಂತ ನಟರು ನಟಿಸಿದ್ದಾರೆ. ಕೇವಲ 30 ಕೋಟಿ ಬಜೆಟ್​ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದ್ದು, ಸಿನಿಮಾ 200 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದೆ. ಅತ್ಯಂತ ಕಡಿಮೆ ಬಜೆಟ್​ನಲ್ಲಿ ಪ್ರವಾಹದ ದೃಶ್ಯಗಳನ್ನು ನೈಜವಾಗಿ ಚಿತ್ರೀಕರಿಸಿದ ಬಗ್ಗೆ ಭಾರತದ ಹಲವು ಖ್ಯಾತ ಸಿನಿ ಕರ್ಮಿಗಳು ‘2018’ ಸಿನಿಮಾವನ್ನು ಕೊಂಡಾಡಿದ್ದರು.

‘2018’ ಆಸ್ಕರ್​ಗೆ ಅಧಿಕೃತವಾಗಿ ಕಳಿಸಲ್ಪಡುತ್ತಿರುವ ಮಲಯಾಳಂನ ಮೂರನೇ ಸಿನಿಮಾ. 2020 ರಲ್ಲಿ ಮಲಯಾಳಂನ ‘ಜಲ್ಲಿಕಟ್ಟು’ ಸಿನಿಮಾವನ್ನು ಆಸ್ಕರ್​ಗೆ ಕಳಿಸಲಾಗಿತ್ತು. 2011ರಲ್ಲಿ ‘ಅಬು ಸನ್ ಆಫ್ ಆಡಮ್’ ಸಿನಿಮಾವನ್ನು ಆಸ್ಕರ್​ಗೆ ಕಳಿಸಲಾಗಿತ್ತು. 1997ರಲ್ಲಿ ಮೋಹನ್​ಲಾಲ್ ನಟನೆಯ ‘ಗುರು’ ಸಿನಿಮಾವನ್ನು ಆಸ್ಕರ್​ಗೆ ಕಳಿಸಲಾಗಿತ್ತು. ಕಳೆದ ವರ್ಷ ಒಂದು ಆಸ್ಕರ್​ ಅನ್ನು ಭಾರತದ ಸಿನಿಮಾ ಪಡೆದಿತ್ತು. ಈ ಬಾರಿ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂಬ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ