AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರವೇ ತಾಯಿ ಆಗಲಿದ್ದಾರೆ ದೀಪಿಕಾ ಪಡುಕೋಣೆ; ಹಿಂಟ್ ಕೊಟ್ಟ ನಟಿ

ಮಕ್ಕಳ ಬಗ್ಗೆ ಮಾತನಾಡುತ್ತಿದ್ದಂತೆ ದೀಪಿಕಾ ಅವರಿಗೆ ಆ ಕುರಿತು ಪ್ರಶ್ನೆ ಮಾಡಲಾಗಿದೆ. ‘ಕುಟುಂಬದ ಬಗ್ಗೆ ಏನಾದರೂ ಯೋಚಿಸಿದ್ದೀರಾ’ ಎಂದು ಕೇಳಲಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ.

ಶೀಘ್ರವೇ ತಾಯಿ ಆಗಲಿದ್ದಾರೆ ದೀಪಿಕಾ ಪಡುಕೋಣೆ; ಹಿಂಟ್ ಕೊಟ್ಟ ನಟಿ
ದೀಪಿಕಾ ಪಡುಕೋಣೆ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 04, 2024 | 12:31 PM

Share

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ (Ranveer Singh) 2018ರ ನವೆಂಬರ್​ನಲ್ಲಿ ಇಟಲಿಗೆ ಹೋಗಿ ಮದುವೆ ಆದರು. ಇವರ ದಾಂಪತ್ಯಕ್ಕೆ ಈಗಾಗಲೆ ಐದು ವರ್ಷ ಪೂರ್ಣಗೊಂಡಿದೆ. ಮಗು ಹೊಂದುವ ಬಗ್ಗೆ ಇವರು ಯಾವುದೇ ಮಾಹಿತಿ ರಿವೀಲ್ ಮಾಡಿರಲಿಲ್ಲ. ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಮಗುವನ್ನು ಹೊಂದುತ್ತೇವೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಸೆಲೆಬ್ರಿಟಿ ಪಟ್ಟ ಸಿಕ್ಕ ಬಳಿಕ ಮನೆಯಲ್ಲಿ ಅವರನ್ನು ಟ್ರೀಟ್ ಮಾಡುವ ರೀತಿ ಬದಲಾಗುತ್ತದೆ. ಆದರೆ, ದೀಪಿಕಾಗೆ ಈ ರೀತಿ ಆಗಿಲ್ಲ. ಇದು ಅವರಿಗೆ ಖುಷಿ ನೀಡಿದೆ. ‘ಉದ್ಯಮದಲ್ಲಿ ಖ್ಯಾತಿ ಮತ್ತು ಹಣ ಪಡೆದ ನಂತರ ಬದಲಾಗುವುದು ಸುಲಭ. ಆದರೆ, ನನ್ನ ಚಿಕ್ಕಮ್ಮ, ಚಿಕ್ಕಪ್ಪ, ಕುಟುಂಬದವರು, ಸ್ನೇಹಿತರು ನಾನು ಬದಲಾಗಿಲ್ಲ ಎಂದು ಹೇಳುತ್ತಾರೆ. ನನ್ನ ಮನೆಯಲ್ಲಿ ಯಾರೂ ನನ್ನನ್ನು ಸೆಲೆಬ್ರಿಟಿಯಂತೆ ಟ್ರೀಟ್ ಮಾಡುವುದಿಲ್ಲ. ಮನೆಯಲ್ಲಿ ಇರುವಾಗ ನಾನು ಮಗಳು, ಸಹೋದರಿ ಆಗಿರುತ್ತೇನೆ. ಈ ವಿಷಯ ಎಂದಿಗೂ ಬದಲಾಗಬಾರದು ಎಂದು ನಾನು ಭಾವಿಸುತ್ತೇನೆ. ಇದೇ ಮೌಲ್ಯವನ್ನು ರಣವೀರ್ ಮತ್ತು ನಾನು ನಮ್ಮ ಮಕ್ಕಳಲ್ಲಿ ಬೆಳೆಸಲು ಬಯಸುತ್ತೇನೆ’ ಎಂದು ದೀಪಿಕಾ ಹೇಳಿದ್ದಾರೆ.

ಮಕ್ಕಳ ಬಗ್ಗೆ ಮಾತನಾಡುತ್ತಿದ್ದಂತೆ ದೀಪಿಕಾ ಅವರಿಗೆ ಆ ಕುರಿತು ಪ್ರಶ್ನೆ ಮಾಡಲಾಗಿದೆ. ‘ಕುಟುಂಬದ ಬಗ್ಗೆ ಏನಾದರೂ ಯೋಚಿಸಿದ್ದೀರಾ’ ಎಂದು ಕೇಳಲಾಗಿದೆ. ‘ನನಗೆ ಹಾಗೂ ರಣವೀರ್ ಸಿಂಗ್​ಗೆ ಮಕ್ಕಳು ಎಂದರೆ ಇಷ್ಟ. ಮುಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದೇವೆ’ ಎಂದಿದ್ದಾರೆ ಅವರು. ಈ ಮೂಲಕ ಶೀಘ್ರವೇ ಸಿಹಿ ಸುದ್ದಿ ನೀಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಮದುವೆ ಆದ ಬಳಿಕ ಒಂದಷ್ಟು ನಟಿಯರು ನಟನೆಯಿಂದ ದೂರವಾಗುತ್ತಾರೆ. ಇನ್ನೂ ಕೆಲವರು ಮಗು ಜನಿಸಿದ ಬಳಿಕವೂ ನಟನೆಯಲ್ಲಿ ಮುಂದುವರಿಯುತ್ತಾರೆ. ಆಲಿಯಾ ಭಟ್ ಮಗು ಜನಿಸಿದ ಬಳಿಕವೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅನುಷ್ಕಾ ಶರ್ಮಾ ಅವರು ಮಗು ಜನಿಸಿದ ಬಳಿಕ ನಟನೆಯಿಂದ ದೂರ ಆಗಿದ್ದಾರೆ. ದೀಪಿಕಾ ಪಡುಕೋಣೆ ಅವರು ಯಾವ ಸಾಲಿಗೆ ಸೇರುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಫೈಟರ್’ ಪೋಸ್ಟರ್​ ಮೂಲಕ ಗಮನ ಸೆಳೆದ ದೀಪಿಕಾ ಪಡುಕೋಣೆ; ಸಾಂಗ್ ಬಗ್ಗೆ ಹುಟ್ಟಿದೆ ಕಲ್ಪನೆ

ದೀಪಿಕಾ ಪಡುಕೋಣೆಗೆ 2023 ಆಶಾದಾಯಕವಾಗಿತ್ತು. ಅವರು ಮುಖ್ಯಭೂಮಿಕೆ ನಿರ್ವಹಿಸಿದ ‘ಪಠಾಣ್’ ದೊಡ್ಡ ಗೆಲುವು ಕಂಡಿತು. ‘ಜವಾನ್’ ಸಿನಿಮಾದಲ್ಲಿ ಪ್ರಮುಖ ಅತಿಥಿ ಪಾತ್ರ ಮಾಡಿ ಗಮನ ಸೆಳೆದರು. ಈ ಚಿತ್ರ ಕೂಡ ಗೆದ್ದಿದೆ. ಈಗ ‘ಫೈಟರ್’ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಹೃತಿಕ್ ರೋಷನ್​ಗೆ ಈ ಚಿತ್ರದಲ್ಲಿ ಅವರು ಜೊತೆಯಾಗಿದ್ದು, ಜನವರಿ 25ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದಲ್ಲದೆ, ‘ಕಲ್ಕಿ 2898 ಎಡಿ’ ಹಾಗೂ  ‘ಸಿಂಗಂ ಅಗೇನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!