ಈ ಸೆಲೆಬ್ರಿಟಿಗಳ ಮನೆ ಎಷ್ಟು ಕೋಟಿ ರೂಪಾಯಿ ಬೆಲೆ ಬಾಳುತ್ತೆ ಗೊತ್ತಾ? ಇಲ್ಲಿದೆ ವಿವರ

ಶಾರುಖ್ ಖಾನ್ ಅವರ ಮನ್ನತ್​ ಅಂತೂ ಅಭಿಮಾನಿಗಳ ಫೇವರಿಟ್ ಜಾಗಗಳಲ್ಲಿ ಒಂದು. ಈ ರೀತಿ ಐಷಾರಾಮಿ ಮನೆ ಹೊಂದಿರುವ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಈ ಸೆಲೆಬ್ರಿಟಿಗಳ ಮನೆ ಎಷ್ಟು ಕೋಟಿ ರೂಪಾಯಿ ಬೆಲೆ ಬಾಳುತ್ತೆ ಗೊತ್ತಾ? ಇಲ್ಲಿದೆ ವಿವರ
ಶಾರುಖ್​-ಅಮಿತಾಭ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 04, 2024 | 8:54 AM

ಬಾಲಿವುಡ್​ನಲ್ಲಿ ಹಲವು ಸೂಪರ್ ಸ್ಟಾರ್​ಗಳಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಸೆಲೆಬ್ರಿಟಿಗಳು ಮನೆ ಡಿಸೈನ್ ಮಾಡಿಕೊಂಡಿದ್ದಾರೆ. ದೇಶ ವಿದೇಶದಿಂದ ಮನೆಯ ಪಿಠೋಪಕರಣ ತರಿಸಿದ್ದಾರೆ. ಶಾರುಖ್ ಖಾನ್ (Shah RukhKhan) ಅವರ ಮನ್ನತ್​ ಅಂತೂ ಅಭಿಮಾನಿಗಳ ಫೇವರಿಟ್ ಜಾಗಗಳಲ್ಲಿ ಒಂದು. ಈ ರೀತಿ ಐಷಾರಾಮಿ ಮನೆ ಹೊಂದಿರುವ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಅಜಯ್ ದೇವಗನ್

ಇತ್ತೀಗೆ ಅಜಯ್ ದೇವಗನ್ ಹಾಗೂ ಕಾಜೋಲ್ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ. 5310 ಚದರ ಅಡಿ ವಿಸ್ತಾರವನ್ನು ಈ ಮನೆ ಹೊಂದಿದೆ. ಈ ಮನೆಗೆ ಶಿವಶಕ್ತಿ ಎಂದು ಹೆಸರು ಇಡಲಾಗಿದೆ. ಈ ಮನೆ 60 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ವಿಶಾಲ ಗಾರ್ಡನ್, ಸ್ವಿಮ್ಮಿಂಗ್ ಪೂಲ್​ ಮೊದಲಾದ ವ್ಯವಸ್ಥೆಗಳನ್ನು ಇದು ಹೊಂದಿದೆ. ಈ ಮನೆಯ ಬೆಲೆ 100 ಕೋಟಿ ರೂಪಾಯಿ ಎನ್ನಲಾಗಿದೆ. ವಾಸ್ತು ಪ್ರಕಾರ ಈ ಮನೆಯನ್ನು ಡಿಸೈನ್ ಮಾಡಲಾಗಿದೆ. ಯೋಗಾಸನ ಮಾಡುವ ಸಂದರ್ಭದಲ್ಲಿ ಅವರು ಮನೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಶಾಹಿದ್ ಕಪೂರ್

ಶಾಹಿದ್ ಕಪೂರ್ ಅವರು ಮುಂಬೈನಲ್ಲಿ ಡುಪ್ಲೆಕ್ಸ್ ಅಪಾರ್ಟ್​ಮೆಂಟ್ ಹೊಂದಿದ್ದಾರೆ. 43ನೇ ಫ್ಲೋರ್​ನಲ್ಲಿ ಈ ಮನೆ ಇದೆ. ಈ ಮನೆ 56 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

ಅಮಿತಾಭ್ ಬಚ್ಚನ್

ನಟ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯ ಒಂದೇ ಮನೆಯಲ್ಲಿದ್ದಾರೆ. ಈ ಮನೆ 10 ಸಾವಿರ ಚದರ ಅಡಿ ಇದೆ. ಸಮುದ್ರದ ಸಮೀಪ ಇರುವ ಈ ಮನೆಯ ಬೆಲೆ 100-120 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಇತ್ತೀಚೆಗೆ ಐಶ್ವರ್ಯಾ ರೈ ಅವರು ಈ ಮನೆಯಲ್ಲಿ ವಾಸ ಮಾಡುತ್ತಿಲ್ಲ ಎನ್ನಲಾಗಿದೆ.

ಶಾರುಖ್ ಖಾನ್

ಶಾರುಖ್ ಖಾನ್ ಅವರ ಮನೆಗೆ ‘ಮನ್ನತ್’ ಎಂದು ಹೆಸರು ಇಡಲಾಗಿದೆ. ಈ ಮನೆ ಒಂದು ರೀತಿಯಲ್ಲಿ ಅಭಿಮಾನಿಗಳಿಗೆ ದೇವಾಲಯ ಇದ್ದಂತೆ. ದಿನಂ ಪ್ರತಿ ಇಲ್ಲಿ ಜನರು ನೆರೆಯುತ್ತಾರೆ. ಈ ಮನೆ 27 ಸಾವಿರ ಚದರ ಅಡಿ ಇದೆ. ಈ ಮನೆಯಲ್ಲಿ ಲೈಬ್ರರಿ, ಜಿಮ್, ಥಿಯೇಟರ್ ಸೇರಿದಂತೆ ಹಲವು ವ್ಯವಸ್ಥೆ ಹೊಂದಿದೆ. ವಿಶಾಲವಾದ ಪಾರ್ಕಿಂಗ್ ಜಾಗ ಕೂಡ ಇದೆ. ಆರು ಅಂತಸ್ತಿನ ಈ ಕಟ್ಟಡ 200 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇದನ್ನು ಅವರ ಪತ್ನಿ ಗೌರಿ ಖಾನ್ ಡಿಸೈನ್ ಮಾಡಿದ್ದಾರೆ.

ಜಾನ್ ಅಬ್ರಹಾಂ

ಜಾನ್ ಅಬ್ರಾಹಂ ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರು ಮುಂಬೈನಲ್ಲಿ ಮನೆ ಹೊಂದಿದ್ದಾರೆ. ಇದನ್ನು ಅವರ ಸಹೋದರ ಅಲಾನ್ ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ. ಈ ಮನೆಯ ಬೆಲೆ 70 ಕೋಟಿ ರೂಪಾಯಿಗೂ ಅಧಿಕವಾಗಿದೆ. ಈ ಮನೆ ಸಾಕಷ್ಟು ವಿಶಾಲವಾಗಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಜೊತೆಯಾಗಿ ಮನೆ ಹೊಂದಿದ್ದಾರೆ. ಬಾಂದ್ರಾದಲ್ಲಿರುವ ಸಾಗರ್ ರೇಷಂ ಅಪಾರ್ಟ್​ಮೆಂಟ್​ನಲ್ಲಿ 16, 17, 18 ಹಾಗೂ 19 ಅಂತಸ್ತಿನ ಮನೆ ದೀಪಿಕಾ ಹೆಸರಲ್ಲಿದೆ. ಇದರ ಬೆಲೆ 119 ಕೋಟಿ ರೂಪಾಯಿ ಎನ್ನಲಾಗಿದೆ.

 ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಜುಹುನ ಪ್ರೈಮ್ ಬೀಚ್​​ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಯನ್ನು ಟ್ವಿಂಕಲ್ ಖನ್ನಾ ಡಿಸೈನ್ ಮಾಡಿದ್ದಾರೆ. ಈ ಮನೆ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಆರೋಪಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರು

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಅವರು ಮುಂಬೈನಲ್ಲಿರುವ ಹಲವು ಪ್ರಾಪರ್ಟಿಗಳನ್ನು ಮಾರಾಟ ಮಾಡಿದ್ದಾರೆ. ಅವರು ಲಾಸ್ ಏಂಜಲೀಸ್​ನಲ್ಲಿ ವಾಸವಾಗಿದ್ದಾರೆ. ಇಲ್ಲಿ 20 ಸಾವಿರ ಚದರ ಅಡಿಯ ಮನೆಯಲ್ಲಿ ವಾಸವಾಗಿದ್ದಾರೆ.

ಹೃತಿಕ್ ರೋಷನ್

ಬಾಲಿವುಡ್​ನ ಸ್ಟಾರ್ ಹೀರೋ ಹೃತಿಕ್ ರೋಷನ್ ಅವರು ‘ಫೈಟರ್’ ಸಿನಿಮಾ ರಿಲೀಸ್​ಗಾಗಿ ಕಾದಿದ್ದಾರೆ. ಜುಹು ಹಾಗೂ ವರ್ಸೋವಾ ಲಿಂಕ್ ರೋಡ್ನಲ್ಲಿ ಇವರು ಮನೆ ಹೊಂದಿದ್ದಾರೆ. ಅವರು ಅಪರೂಪಕ್ಕೊಮ್ಮೆ ಮನೆಯ ಫೋಟೋ ಹಂಚಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು