1940ರಲ್ಲೇ ಇತ್ತು ಸೀಕ್ವೆಲ್ ಕಾನ್ಸೆಪ್ಟ್; ಇದನ್ನು ಮೊದಲು ಪರಿಚಯಿಸಿದ್ದು ಯಾರು?

30ರ ದಶಕದಲ್ಲಿ ಸಾಲು ಸಾಲು ಸಿನಿಮಾಗಳನ್ನು ನಿರ್ದೇಶನ ಮಾಡಿದರು ಹೋಮಿ. ಆರಂಭದಲ್ಲಿ ಅವರ ಸಿನಿಮಾಗಳಲ್ಲಿ ಭರ್ಜರಿ ಆ್ಯಕ್ಷನ್ ಇರುತ್ತಿತ್ತು. ಆಗ ಯಾರೂ ಸ್ಟಂಟ್ ಮಾಸ್ಟರ್​ಗಳು ಇರುತ್ತಿರಲಿಲ್ಲ. ತಾವೇ ಕಲಿತು ಸ್ಟಂಟ್ ಮಾಡಬೇಕಿತ್ತು. ನಟಿ ನಾಡಿಯಾ ಹಾಗೂ ನಿರ್ದೇಶಕ ಹೋಮಿ ಒಟ್ಟಾಗಿ ಹಲವು ಸಿನಿಮಾ ಮಾಡಿದ್ದರು.

1940ರಲ್ಲೇ ಇತ್ತು ಸೀಕ್ವೆಲ್ ಕಾನ್ಸೆಪ್ಟ್; ಇದನ್ನು ಮೊದಲು ಪರಿಚಯಿಸಿದ್ದು ಯಾರು?
ನಾಡಿಯಾ, ವಾಡಿಯಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Jan 03, 2024 | 5:54 PM

ಇತ್ತೀಚೆಗೆ ಚಿತ್ರರಂಗದಲ್ಲಿ ಪ್ರಯೋಗಗಳು ಹೆಚ್ಚುತ್ತಿವೆ. ಸಿನಿಮ್ಯಾಟಿಕ್ ಯೂನಿವರ್ಸ್​ಗಳತ್ತ ನಿರ್ಮಾಪಕರು, ನಿರ್ದೇಶಕರು ಹೆಚ್ಚು ಆಕರ್ಷಿತಗೊಂಡಿದ್ದಾರೆ. ಅನೇಕ ನಿರ್ದೇಶಕರು ಹಾಗೂ ನಿರ್ಮಾಪಕರು ಈ ರೀತಿಯ ಯೂನಿವರ್ಸ್​​ಗಳನ್ನು ಸೃಷ್ಟಿ ಮಾಡಿದ್ದಾರೆ. ಹಾಲಿವುಡ್​ನಲ್ಲಿ ಹಲವು ದಶಕಗಳಿಂದ ಈ ಕಾನ್ಸೆಪ್ಟ್ ಜಾರಿಯಲ್ಲಿದೆ. ಸಿನಿಮಾಗೆ ಸೀಕ್ವೆಲ್ (Sequel) ಮಾಡೋದು ಕೂಡ ಜಾರಿಯಲ್ಲಿದೆ. ಒಂದು ಚಿತ್ರ ಹಿಟ್ ಆದರೆ ಅದಕ್ಕೆ ಸೀಕ್ವೆಲ್ ಸಿದ್ಧ ಮಾಡಲಾಗುತ್ತದೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರದ ಕಥೆಗೆ ಲಿಂಕ್ ಇರಲಿ ಅಥವಾ ಇಲ್ಲದೆ ಇರಲಿ ಸೀಕ್ವೆಲ್ ಮಾಡೋದು ಜೋರಾಗಿಯೇ ಇದೆ. ಅಂದಹಾಗೆ ಭಾರತದಲ್ಲಿ 1940ರಲ್ಲೇ ಸೀಕ್ವೆಲ್ ಕಾನ್ಸೆಪ್ಟ್ ಜಾರಿಯಲ್ಲಿತ್ತು. ಆದರೆ, ಇದನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. 1935ರಲ್ಲಿ ಬಂದ ‘ಹಂಟರ್​ವಾಲಿ’ ಚಿತ್ರಕ್ಕೆ ಸೀಕ್ವೆಲ್ ಮಾಡಿದ ಖ್ಯಾತಿ ನಿರ್ದೇಶಕ ಹೋಮಿ ವಾಡಿಯಾ (Homi Wadia) ಅವರಿಗೆ ಸಿಗುತ್ತದೆ.

ಹೋಮಿ ವಾಡಿಯಾ ಜನಿಸಿದ್ದು 1911ರ ಮೇ 22ರಂದು. ಅವರು ಚಿತ್ರರಂಗದತ್ತ ಹೆಚ್ಚು ಆಕರ್ಷಿತಗೊಂಡಿದ್ದರು. 1935ರಿಂದ 1978ರವರೆಗೆ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. 2004ರಂದು ಅವರು ಮೃತಪಟ್ಟರು. 1935ರಲ್ಲಿ ರಿಲೀಸ್ ಆದ ‘ಹಂಟರ್​ವಾಲಿ’ ಸಿನಿಮಾ ಗಮನ ಸೆಳೆದಿತ್ತು. ಫಿಯರ್​​ಲೆಸ್ ನಾಡಿಯಾ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು.

30ರ ದಶಕದಲ್ಲಿ ಸಾಲು ಸಾಲು ಸಿನಿಮಾಗಳನ್ನು ನಿರ್ದೇಶನ ಮಾಡಿದರು ಹೋಮಿ. ಆರಂಭದಲ್ಲಿ ಅವರ ಸಿನಿಮಾಗಳಲ್ಲಿ ಭರ್ಜರಿ ಆ್ಯಕ್ಷನ್ ಇರುತ್ತಿತ್ತು. ಆಗ ಯಾರೂ ಸ್ಟಂಟ್ ಮಾಸ್ಟರ್​ಗಳು ಇರುತ್ತಿರಲಿಲ್ಲ. ತಾವೇ ಕಲಿತು ಸ್ಟಂಟ್ ಮಾಡಬೇಕಿತ್ತು. ನಟಿ ನಾಡಿಯಾ ಹಾಗೂ ನಿರ್ದೇಶಕ ಹೋಮಿ ಒಟ್ಟಾಗಿ ಹಲವು ಸಿನಿಮಾ ಮಾಡಿದ್ದರು. ಆ್ಯಕ್ಷನ್ ಮೂಲಕ ನಾಡಿಯಾ ಫೇಮಸ್ ಆಗಿದ್ದರು. ಸಿನಿಮಾಗೋಸ್ಕರ ಪಂಜರದೊಳಗೆ ಕೂಡಿಟ್ಟ ಸಿಂಹದ ಜೊತೆಗೆ ಫೈಟ್ ಮಾಡಿ ನಾಡಿಯಾ ಅವರು ‘ಫಿಯರ್​​ಲೆಸ್’ ಎನ್ನುವ ಪಟ್ಟ ಪಡೆದರು. ಆಸ್ಟ್ರೇಲಿಯಾದಲ್ಲಿ ಜನಿಸಿದ ಇವರು ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ಬಂದರು. ಇಲ್ಲಿ ನಟನೆ, ಆ್ಯಕ್ಷನ್ ಮೂಲಕ ಗಮನ ಸೆಳೆದರು. ಈ ಸಿನಿಮಾಗಳು ಹೆಚ್ಚೆಚ್ಚು ಜನರನ್ನು ಆಕರ್ಷಿಸುತ್ತಿತ್ತು.

ಇದನ್ನೂ ಓದಿ: ಹಿಟ್ ಸಿನಿಮಾದ ಸೀಕ್ವೆಲ್​ನಲ್ಲಿ ನಟಿಸೋಕೆ ಷರತ್ತುಗಳನ್ನು ಹಾಕಿದ ರಜನಿಕಾಂತ್

1940ರ ಸಂದರ್ಭದಲ್ಲಿ ನಿಧಾನವಾಗಿ ಆ್ಯಕ್ಷನ್ ಸಿನಿಮಾ ಕ್ರೇಜ್ ಕಳೆದುಕೊಳ್ಳಲು ಆರಂಭಿಸಿತು. ನಾಡಿಯಾ ಹಾಗೂ ಹೋಮಿಗೆ ದೊಡ್ಡ ಗೆಲುವು ಸಿಗುತ್ತಿರಲಿಲ್ಲ. ಈ ವೇಳೆ ಹೋಮಿ ಅವರು ಬೇರೆ ಪ್ರಯೋಗಕ್ಕೆ ಮುಂದಾದರು. ಆಗ ಹುಟ್ಟಿದ್ದೇ ಸೀಕ್ವೆಲ್ ಐಡಿಯಾ. 1935ರಲ್ಲಿ ರಿಲೀಸ್ ಆದ ‘ಹಂಟರ್​ವಾಲಿ’ ಚಿತ್ರಕ್ಕೆ ಸೀಕ್ವೆಲ್ ಮಾಡಿದರು ಹೋಮಿ. ಇದಕ್ಕೆ ‘ಹಂಟರ್​ವಾಲಿ ಕಿ ಬೇಟಿ’ ಎನ್ನುವ ಶೀರ್ಷಿಕೆ ಕೊಟ್ಟರು. ‘ಹಂಟರ್​ವಾಲಿ’ ಚಿತ್ರದ ಪಾತ್ರವರ್ಗವೇ ಇದರಲ್ಲೂ ಮುಂದುವರಿಯಿತು. 1942ರಲ್ಲಿ ರಿಲೀಸ್ ಆದ ಈ ಚಿತ್ರ ಜನರಿಗೆ ಇಷ್ಟ ಆಯಿತು. ಈ ಸಿನಿಮಾ ಕೂಡ ಹಿಟ್ ಆಯಿತು.

‘ಹಂಟರ್​ವಾಲಿ ಕಿ ಬೇಟಿ’ ಚಿತ್ರದ ಬಳಿಕ ನಾಡಿಯಾ ಅವರು ಏಳೆಂಟು ಸಿನಿಮಾಗಳಲ್ಲಿ ಮಾತ್ರ ನಟಿಸಿದರು. 1968ರಲ್ಲಿ ಅವರು ಚಿತ್ರರಂಗ ತೊರೆದರು. ಹೋಮಿ ಅವರು 1978ರವರೆಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. 1968ರಲ್ಲಿ ರಿಲೀಸ್ ಆದ, ನಾಡಿಯಾ ನಟನೆಯ ಕೊನೆಯ ಸಿನಿಮಾ ‘ಖಿಲಾಡಿ’ ಚಿತ್ರವನ್ನು ಹೋಮಿ ಅವರೇ ನಿರ್ದೇಶನ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ