‘ಅನಿಮಲ್’ ಚಿತ್ರಕ್ಕೆ ಸೀಕ್ವೆಲ್; ಮತ್ತಷ್ಟು ವೈಲೆಂಟ್ ಆಗಿರಲಿದೆ ‘ಅನಿಮಲ್ ಪಾರ್ಕ್’
‘ಅನಿಮಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಪಾತ್ರ ಹೈಲೈಟ್ ಆಗಿತ್ತು. ‘ಅನಿಮಲ್ ಪಾರ್ಕ್’ ಸಿನಿಮಾದಲ್ಲಿ ಹಲವು ಸ್ಟಾರ್ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಮತ್ತಷ್ಟು ವೈಲೆನ್ಸ್ ಇರಲಿದೆ ಎಂದು ಹೇಳಲಾಗುತ್ತಿದೆ.
‘ಅನಿಮಲ್’ ಸಿನಿಮಾ (Animal Movie) ಸೂಪರ್ ಹಿಟ್ ಆಗಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಗಳಿಕೆ 300 ಕೋಟಿ ರೂಪಾಯಿ ಸಮೀಪಿಸಿದೆ. ಇದು ಸಿನಿಮಾ ತಂಡದವರ ಖುಷಿ ಹೆಚ್ಚಿಸಿದೆ. ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಬಾಲಿವುಡ್ನಲ್ಲಿ ಎರಡನೇ ಗೆಲುವು ಕಂಡಿದ್ದಾರೆ. ಒಂದು ವರ್ಗದ ಜನರು ಸಿನಿಮಾ ಬಗ್ಗೆ ಅಪಸ್ವರ ತೆಗೆದರೂ ಸಿನಿಮಾದ ಗಳಿಕೆ ತಗ್ಗುತ್ತಿಲ್ಲ. ಈಗ ಚಿತ್ರದ ಸೀಕ್ವೆಲ್ ಬಗ್ಗೆ ಭರ್ಜರಿ ಚರ್ಚೆ ಆಗುತ್ತಿದೆ.
‘ಅನಿಮಲ್’ ಸಿನಿಮಾ ಐದು ದಿನಕ್ಕೆ 283 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಾರದ ದಿನದಲ್ಲೂ ಸಿನಿಮಾದ ಗಳಿಕೆ ತಗ್ಗುತ್ತಿಲ್ಲ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ಸಾಕಷ್ಟು ವೈಲೆಂಟ್ ಆಗಿದೆ ಎಂದು ಅನೇಕರು ಹೇಳಿದ್ದರು. ‘ಅನಿಮಲ್’ ಸಿನಿಮಾದಲ್ಲಿ ಈ ವೈಲೆನ್ಸ್ ಇನ್ನಷ್ಟು ಹೆಚ್ಚಿದೆ. ಸಿನಿಮಾ ಗೆಲ್ಲಲು ಇದೂ ಒಂದು ಕಾರಣ.
‘ಅನಿಮಲ್’ ಸಿನಿಮಾದಲ್ಲಿ ಮಿತಿ ಮೀರಿ ಬೋಲ್ಡ್ ದೃಶ್ಯಗಳನ್ನು ತೋರಿಸಲಾಗಿದೆ. ರಶ್ಮಿಕಾ ಹಾಗೂ ತೃಪ್ತಿ ದಿಮ್ರಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈಗ ‘ಅನಿಮಲ್’ ಸಿನಿಮಾಗೆ ಸೀಕ್ವೆಲ್ ಮಾಡಲು ಸಂದೀಪ್ ರೆಡ್ಡಿ ವಂಗ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಅವರು ‘ಅನಿಮಲ್ ಪಾರ್ಕ್’ ಮಾಡಲು ಉತ್ಸಾಹ ತೋರಿದ್ದಾರೆ.
‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಮಾತ್ರ ಹೈಲೈಟ್ ಆಗಿದ್ದಾರೆ. ‘ಅನಿಮಲ್ ಪಾರ್ಕ್’ ಸಿನಿಮಾದಲ್ಲಿ ಹಲವು ಸ್ಟಾರ್ಗಳು ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಮತ್ತಷ್ಟು ವೈಲೆನ್ಸ್ ಇರಲಿದೆ ಎಂದು ಹೇಳಲಾಗುತ್ತಿದೆ. ‘ಅನಿಮಲ್’ ಸಿನಿಮಾ ಕ್ಲೈಮ್ಯಾಕ್ಸ್ನಲ್ಲಿ ಸೀಕ್ವೆಲ್ ಬಗ್ಗೆಯೂ ಸೂಚನೆ ನೀಡಲಾಗಿದೆ.
People who are in favour of this movie plz give me the answer of one question 🙏 Why director shows ranbir kapoor naked in that garden scene?? It is really required😡😡#AnimalTheMovie #AnimalPark #AnimalReview #animal #AnimalCruelty #BobbyDeol #RashmikaMandanna #RanbirKapoor pic.twitter.com/b9LdKReX9t
— Soumil jain (@Soumilj29042074) December 5, 2023
ಇದನ್ನೂ ಓದಿ: ಸೋಮವಾರದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆದ ‘ಅನಿಮಲ್’; ಊಹೆಗೂ ಮೀರಿ ಕಲೆಕ್ಷನ್
‘ಅನಿಮಲ್’ ಚಿತ್ರಕ್ಕೆ ಸೀಕ್ವೆಲ್ ಬಂದರೆ ಅದು ಮತ್ತಷ್ಟು ಡಾರ್ಕ್ ಹಾಗೂ ವೈಲೆಂಟ್ ಆಗಿರಲಿದೆಯಂತೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ಸಿದ್ಧವಾಗಲಿದ್ದು, ಈ ಬಗ್ಗೆ ಸಂದೀಪ್ ರೆಡ್ಡಿ ವಂಗ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:34 am, Wed, 6 December 23