‘ದಿ ಆರ್ಚೀಸ್’ ಬಿಡುಗಡೆ ವೇಳೆ ತಾಯಿ ಶ್ರೀದೇವಿಗೆ ವಿಶೇಷ ನಮನ ಸಲ್ಲಿಸಿದ 2ನೇ ಪುತ್ರಿ ಖುಷಿ ಕಪೂರ್
ಲೆಜೆಂಡರಿ ನಟಿ ಶ್ರೀದೇವಿ ಅವರು ಇಂದು ನಮ್ಮೊಂದಿಗೆ ಇಲ್ಲ. ಕುಟುಂಬದವರು ಶ್ರೀದೇವಿಯನ್ನು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಶ್ರೀದೇವಿ ಎರಡನೇ ಮಗಳು ಖುಷಿ ಕಪೂರ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಅವರ ಮೊದಲ ಸಿನಿಮಾ ‘ದಿ ಆರ್ಚೀಸ್’ ಡಿ.7ರಂದು ಬಿಡುಗಡೆ ಆಗಲಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ಇದರಲ್ಲಿ ನಟಿಸಿದ್ದಾರೆ.
ಬಾಲಿವುಡ್ನಲ್ಲಿ ನಟಿ ಶ್ರೀದೇವಿ (Sridevi) ಅವರು ತಮ್ಮದೇ ಛಾಪು ಮೂಡಿಸಿದ್ದರು. ಈಗ ಅವರ ಮಕ್ಕಳು ಕೂಡ ಚಿತ್ರರಂಗಲ್ಲಿ ಮಿಂಚುತ್ತಿದ್ದಾರೆ. ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಮೊದಲ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಎರಡನೇ ಪುತ್ರಿ ಖುಷಿ ಕಪೂರ್ (Khushi Kapoor) ಕೂಡ ಬಣ್ಣದ ಲೋಕಕ್ಕೆ ಪರಿಚಯ ಆಗುತ್ತಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್’ (The Archies) ಡಿಸೆಂಬರ್ 7ರಂದು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಶ್ರೀದೇವಿಗೆ ಖುಷಿ ಕಪೂರ್ ಅವರು ವಿಶೇಷವಾಗಿ ನಮನ ಸಲ್ಲಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
‘ದಿ ಆರ್ಚೀಸ್’ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿಲ್ಲ. ಬದಲಿಗೆ, ನೇರವಾಗಿ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ. ಇತ್ತೀಚೆಗೆ ಈ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದರು. ಈ ಕಾರ್ಯಕ್ರಮಕ್ಕೆ ಬರುವಾಗ ಖುಷಿ ಕಪೂರ್ ಅವರು ಶ್ರೀದೇವಿಯ ಹಳೇ ಗೌನ್ ಧರಿಸಿ ಬಂದಿದ್ದಾರೆ. ಆ ಮೂಲಕ ತಾಯಿಯನ್ನು ಅವರು ಸ್ಮರಿಸಿಕೊಂಡಿದ್ದಾರೆ. ಖುಷಿ ಕಪೂರ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: Khushi Kapoor: ಶ್ರೀದೇವಿ 2ನೇ ಪುತ್ರಿ ಖುಷಿ ಕಪೂರ್ ಫೋಟೋ ವೈರಲ್; ಮೊದಲ ಸಿನಿಮಾ ರಿಲೀಸ್ಗೂ ಮುನ್ನವೇ ಹವಾ
ಖುಷಿ ಕಪೂರ್ ಪಾಲಿಗೆ ಇದು ಮಹತ್ವದ ದಿನ. ಇಂಥ ಸ್ಪೆಷಲ್ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಹೊಸ ಬಟ್ಟೆ ಧರಿಸಿ ಮಿಂಚಲು ಇಷ್ಟಪಡುತ್ತಾರೆ. ಆದರೆ ಖುಷಿ ಕಪೂರ್ ಆ ರೀತಿ ಮಾಡಿಲ್ಲ. 2023ರಲ್ಲಿ ಶ್ರೀದೇವಿ ಅವರು ಧರಿಸಿದ್ದ ಗೌನ್ ಅನ್ನು ಈಗ ಖುಷಿ ಕಪೂರ್ ಧರಿಸಿದ್ದಾರೆ. ಹಳೇ ಬಟ್ಟೆ ಆಗಿದ್ದರೂ ಕೂಡ ಅದರಲ್ಲಿ ಎಮೋಷನ್ ಇದೆ. ಆ ಕಾರಣಕ್ಕಾಗಿ ಖುಷಿ ಅವರು ತಾಯಿಯ ಗೌನ್ ಧರಿಸಿ ಬಂದಿದ್ದಾರೆ. ತಮ್ಮ ಮೊದಲ ಸಿನಿಮಾದ ಬಿಡುಗಡೆ ವೇಳೆ ತಾಯಿಯನ್ನು ಅವರು ಸಖತ್ ಮಿಸ್ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.
ಇದನ್ನೂ ಓದಿ: ಪಾರದರ್ಶಕ ಬಟ್ಟೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಶ್ರೀದೇವಿ ಮಗಳು ಖುಷಿ ಕಪೂರ್ ಟ್ರೋಲ್
ಜೋಯಾ ಅಖ್ತರ್ ಅವರು ‘ದಿ ಆರ್ಚೀಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಗಮನ ಸೆಳೆದಿದೆ. ರೆಟ್ರೋ ಮಾದರಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ‘ದಿ ಆರ್ಚೀಸ್’ ಸಿನಿಮಾ ಜನಮನ ಗೆದ್ದರೆ ಈ ಸ್ಟಾರ್ ಕಿಡ್ಗಳ ಭವಿಷ್ಯ ಭದ್ರವಾಗಲಿದೆ. ಸುಹಾನಾ ಖಾನ್ ಅವರಿಗೆ ಈಗಾಗಲೇ ಹೊಸ ಆಫರ್ಗಳು ಬರಲು ಆರಂಭ ಆಗಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.