ಪಾರದರ್ಶಕ ಬಟ್ಟೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಶ್ರೀದೇವಿ ಮಗಳು ಖುಷಿ ಕಪೂರ್ ಟ್ರೋಲ್
ಮುಂಬೈನ ಅಂಧೇರಿ ಬಳಿ ಜಿಮ್ ಮುಗಿಸಿ ಬರುವಾಗ ಖುಷಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಖುಷಿ ಜಿಮ್ನಿಂದ ಹೊರ ಬರುತ್ತಿದ್ದಂತೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಬಾಲಿವುಡ್ ನಟಿ ಶ್ರೀದೇವಿ ಮಗಳು ಹಾಗೂ ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ. ಮೊದಲಿನಿಂದಲೂ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಆಗಿಟ್ಟಿದ್ದ ಅವರು, ಇತ್ತೀಚೆಗಷ್ಟೇ ಅದನ್ನು ಸಾರ್ವಜನಿಕಗೊಳಿಸಿದ್ದರು. ಅವರು ಸಿನಿಮಾ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆಗುತ್ತಿರುವಾಗಲೇ ಬಟ್ಟೆ ಮೂಲಕ ಖುಷಿ ಟ್ರೋಲ್ ಆಗಿದ್ದಾರೆ.
ಮುಂಬೈನ ಅಂಧೇರಿ ಬಳಿ ಜಿಮ್ ಮುಗಿಸಿ ಬರುವಾಗ ಖುಷಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಖುಷಿ ಜಿಮ್ನಿಂದ ಹೊರ ಬರುತ್ತಿದ್ದಂತೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವೇಳೆ ಅವರು ಮೇಕಪ್ ಹಾಕಿಲ್ಲದ ಕಾರಣ ನ್ಯಾಚುರಲ್ ಆಗಿ ಕಾಣಿಸುತ್ತಿದ್ದರು. ಆದರೆ, ಅವರು ಪಾರದರ್ಶಕ ಬಟ್ಟೆ ಹಾಕಿದ್ದರಿಂದ ಒಳ ಉಡುಪುಗಳು ಕಾಣಿಸಿದ್ದವು. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅವರಿಗೆ ಮುಜುಗರ ತಂದಿದೆ. ಪ್ರಿಯಾಂಕಾ ಚೋಪ್ರಾ ಸೇರಿ ಅನೇಕ ನಟಿಯರು ಈ ರೀತಿ ಪಾರದರ್ಶಕ ಬಟ್ಟೆ ಹಾಕಿ ಟ್ರೋಲ್ ಆದ ಉದಾಹರಣೆ ಇದೆ.
ಖುಷಿ ಕಪೂರ್ ಈವರೆಗೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿಲ್ಲ. ಅವರು ಶೀಘ್ರವೇ ಚಿತ್ರರಂಗಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಮಾತನಾಡಿದ್ದ ಖುಷಿ ತಂದೆ ಬೋನಿ ಕಪೂರ್, ಖುಷಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದಕ್ಕೂ ಮೊದಲು ಅವರು ಅಮೆರಿಕದ ಲಾಸ್ ಎಂಜಲೀಸ್ನಲ್ಲಿ ನಟನಾ ತರಬೇತಿ ಪಡೆದು ಬರಲಿದ್ದಾರೆ ಎಂದಿದ್ದರು.
ಖುಷಿ ಸಹೋದರಿ ಜಾಹ್ನವಿ ಕಪೂರ್ ಅವರನ್ನು ನಿರ್ಮಾಪಕ ಕರಣ್ ಜೋಹರ್ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಈಗ ಖುಷಿ ಅವರನ್ನು ಕೂಡ ಕರಣ್ ಜೋಹರ್ ಅವರೇ ಪರಿಚಯಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Rajiv Kapoor Death: ಬಾಲಿವುಡ್ ಸಿನಿಮಾ;ರಾಮ್ ತೇರಿ ಗಂಗಾ ಮೈಲಿ ನಟ ರಾಜೀವ್ ಕಪೂರ್ ವಿಧಿವಶ