‘ಸಲಾರ್​’ ವರ್ಸಸ್​ ‘ಡಂಕಿ’ ಟ್ರೇಲರ್ ಪೈಪೋಟಿ; ಹಿಂದಿಯಲ್ಲಿ ಶಾರುಖ್​ ಖಾನ್​ ಮೇಲುಗೈ

ಬಾಕ್ಸ್​ ಆಫೀಸ್​ನಲ್ಲಿ ‘ಸಲಾರ್​’ ಮತ್ತು ‘ಡಂಕಿ’ ಸಿನಿಮಾಗಳ ನಡುವೆ ಪೈಪೋಟಿ ಏರ್ಪಡುವುದು ಖಚಿತ. ಡಿಸೆಂಬರ್​ 21ರಂದು ‘ಡಂಕಿ’ ಬಿಡುಗಡೆ ಆಗಲಿದೆ. ಡಿಸೆಂಬರ್​ 22ರಂದು ‘ಸಲಾರ್​’ ತೆರೆಕಾಣಲಿದೆ. ಅದಕ್ಕೂ ಮುನ್ನ, ಟ್ರೇಲರ್​ ವಿಚಾರದಲ್ಲೂ ಈ ಸಿನಿಮಾಗಳು ಹಣಾಹಣಿ ನಡೆಸಿವೆ.

‘ಸಲಾರ್​’ ವರ್ಸಸ್​ ‘ಡಂಕಿ’ ಟ್ರೇಲರ್ ಪೈಪೋಟಿ; ಹಿಂದಿಯಲ್ಲಿ ಶಾರುಖ್​ ಖಾನ್​ ಮೇಲುಗೈ
ಶಾರುಖ್​ ಖಾನ್​, ಪ್ರಭಾಸ್​
Follow us
ಮದನ್​ ಕುಮಾರ್​
|

Updated on: Dec 06, 2023 | 7:07 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಡಂಕಿ’ (Dunki) ಮತ್ತು ‘ಸಲಾರ್​’ ಸಿನಿಮಾಗಳು ಇವೆ. ಒಂದು ದಿನದ ಅಂತರದಲ್ಲಿ ಈ ಎರಡೂ ಚಿತ್ರಗಳು ಬಿಡುಗಡೆ ಆಗಲಿವೆ. ಆ ಕಾರಣದಿಂದ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಏರ್ಪಡಲಿದೆ. ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ (Shah Rukh Khan) ಮುಖ್ಯ ಭೂಮಿಕೆ ನಿಭಾಯಿಸಿದ್ದರೆ, ‘ಸಲಾರ್​’ (Salaar) ಸಿನಿಮಾದಲ್ಲಿ ಪ್ರಭಾಸ್​ ಮುಖ್ಯ ಪಾತ್ರ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾಗಳ ಟ್ರೇಲರ್​ ಬಿಡುಗಡೆ ಆಯಿತು. 24 ಗಂಟೆಗಲ್ಲಿ ಹಿಂದಿ ವರ್ಷನ್​ನಲ್ಲಿ ‘ಸಲಾರ್​’ ಟ್ರೇಲರ್​ಗಿಂತಲೂ ‘ಡಂಕಿ’ ಟ್ರೇಲರ್​ ಹೆಚ್ಚು ವೀವ್ಸ್​ ಪಡೆದುಕೊಂಡಿದೆ.

24 ಗಂಟೆಯಲ್ಲಿ ‘ಡಂಕಿ’ ಸಿನಿಮಾದ ಟ್ರೇಲರ್​ ಯೂಟ್ಯೂಬ್​ನಲ್ಲಿ 58 ಮಿಲಿಯನ್​ ಬಾರಿ ವೀಕ್ಷಣೆ ಕಂಡಿದೆ. 13 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ. ಆ ಮೂಲಕ ಹಿಂದಿಯಲ್ಲಿ 24 ಗಂಟೆಗಳ ಒಳಗೆ ಅತಿ ಹೆಚ್ಚು ವೀಕ್ಷಣೆ ಕಂಡ ಸಿನಿಮಾ ಟ್ರೇಲರ್​ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ. ಇನ್ನೊಂದೆಡೆ, ‘ಸಲಾರ್​’ ಸಿನಿಮಾದ ಹಿಂದಿ ವರ್ಷನ್​ ಟ್ರೇಲರ್​ಗೆ 24 ಗಂಟೆಯಲ್ಲಿ 54 ಮಿಲಿಯನ್​ ವೀವ್ಸ್​ ಆಗಿದೆ. ಆ ಮೂಲಕ ಈ ಎರಡೂ ಸಿನಿಮಾಗಳ ನಡುವೆ ಎಷ್ಟು ಪೈಪೋಟಿ ಇದೆ ಎಂಬುದು ಬಹಿರಂಗ ಆಗಿದೆ.

‘ಸಲಾರ್​’ ಸಿನಿಮಾಗೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಅದ್ದೂರಿ ಬಜೆಟ್​​ನಲ್ಲಿ ‘ಸಲಾರ್​’ ಮೂಡಿಬಂದಿದೆ. ಇದರ ಟ್ರೇಲರ್​ನಲ್ಲಿ ‘ಉಗ್ರಂ’ ಛಾಯೆ ಕಾಣಿಸಿದೆ. ಮೇಕಿಂಗ್​ ಶೈಲಿ ‘ಕೆಜಿಎಫ್​: ಚಾಪ್ಟರ್​ 2’ ರೀತಿ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಶ್ರುತಿ ಹಾಸನ್​, ಜಗಪತಿ ಬಾಬು, ಪೃಥ್ವಿರಾಜ್​ ಸುಕುಮಾರನ್​ ಮುಂತಾದವರು ನಟಿಸಿದ್ದಾರೆ. ಡಿಸೆಂಬರ್​ 22ರಂದು ‘ಸಲಾರ್​’ ಬಿಡುಗಡೆ ಆಗಲಿದೆ.

‘ಡಂಕಿ’ ಸಿನಿಮಾಗೆ ರಾಜ್​ಕುಮಾರ್ ಹಿರಾನಿ ಅವರು ನಿರ್ದೇಶನ ಮಾಡಿದ್ದಾರೆ. ಕ್ಲಾಸ್​ ಆಗಿ ಈ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಶಾರುಖ್​ ಖಾನ್​ ಜೊತೆ ವಿಕ್ಕಿ ಕೌಶಲ್​, ತಾಪ್ಸಿ ಪನ್ನು ಮುಂತಾದವರು ನಟಿಸಿದ್ದಾರೆ. ಎರಡು ಡಿಫರೆಂಟ್​ ಶೇಡ್​ನಲ್ಲಿ ಶಾರುಖ್​ ಖಾನ್​ ಅವರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 3ನೇ ಗೆಲುವಿಗಾಗಿ ಗೆಟಪ್​ ಬದಲಿಸಿಕೊಂಡ ಶಾರುಖ್​ ಖಾನ್​; ‘ಡಂಕಿ’ ಟ್ರೇಲರ್​ ಹೇಗಿದೆ ನೋಡಿ

ಡಿಸೆಂಬರ್​ 21ರಂದು ಈ ಸಿನಿಮಾ ತೆರೆಕಾಣಲಿದೆ. ಈ ವರ್ಷ ‘ಜವಾನ್​’ ಮತ್ತು ‘ಪಠಾಣ್​’ ಸಿನಿಮಾಗಳಿಂದ ಗೆಲುವು ಕಂಡಿರುವ ಶಾರುಖ್​ ಖಾನ್​ ಅವರು ಈಗ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ