ಸೋಮವಾರದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆದ ‘ಅನಿಮಲ್’; ಊಹೆಗೂ ಮೀರಿ ಕಲೆಕ್ಷನ್
ವೀಕೆಂಡ್ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿದ್ದ ರಣಬೀರ್ ಕಪುರ್ ನಟನೆಯ ‘ಅನಿಮಲ್’ ಸಿನಿಮಾ ವಾರದ ಮೊದಲ ದಿನವಾದ ಸೋಮವಾರ ಭರ್ಜರಿ ಕಮಾಯಿ ಮಾಡಿದೆ. ಈ ಮೂಲಕ ಸಿನಿಮಾ ಗೆದ್ದಿದೆ.
ಸಾಮಾನ್ಯವಾಗಿ ವೀಕೆಂಡ್ನಲ್ಲಿ ಭರ್ಜರಿ ಗಳಿಕೆ ಮಾಡುವ ಸಿನಿಮಾಗಳು ವಾರದ ದಿನಗಳಲ್ಲಿ ಡಲ್ ಹೊಡೆಯುತ್ತವೆ. ಏಕಾಏಕಿ ಕಲೆಕ್ಷನ್ನಲ್ಲಿ ಇಳಿಕೆ ಕಾಣುತ್ತದೆ. ಆದರೆ, ‘ಅನಿಮಲ್’ ಸಿನಿಮಾ (Animal Movie) ಈ ವಿಚಾರವನ್ನು ಸುಳ್ಳು ಮಾಡಿದೆ. ಸೋಮವಾರ (ಡಿಸೆಂಬರ್ 4) ಈ ಚಿತ್ರ 39.9 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸೋಮವಾರದ ಪರೀಕ್ಷೆಯನ್ನಿ ಡಿಸ್ಟಿಂಕ್ಷನ್ನಲ್ಲಿ ಚಿತ್ರ ಪಾಸ್ ಆಗಿದೆ. ಶೀಘ್ರವೇ ಸಿನಿಮಾ 300 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
ಹಿಂದಿ, ಕನ್ನಡ, ತೆಲುಗು ಸೇರಿ ಐದು ಭಾಷೆಗಳಲ್ಲಿ ‘ಅನಿಮಲ್’ ಸಿನಿಮಾ ರಿಲೀಸ್ ಆಗಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಚಿತ್ರಕ್ಕೆ 241 ಕೋಟಿ ರೂಪಾಯಿ ಹರಿದು ಬಂದಿದೆ. ರಣಬೀರ್ ಕಪೂರ್ ಅವರ ವೃತ್ತಿ ಜೀವನಕ್ಕೆ ಅತಿ ದೊಡ್ಡ ಯಶಸ್ಸು ತಂದುಕೊಟ್ಟ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.
ಸ್ಯಾನ್ಸಿಲ್ಕ್ ನೀಡಿರುವ ವರದಿ ಪ್ರಕಾರ ಸೋಮವಾರ ಸಿನಿಮಾಗೆ ಹಿಂದಿ ಅವತರಣಿಕೆಯಿಂದ 36 ಕೋಟಿ ರೂಪಾಯಿ ಹರಿದು ಬಂದಿದೆ. ಉಳಿದ ಭಾಷೆಗಳಿಂದ 3 ಕೋಟಿ ರೂಪಾಯಿ ಕಮಾಯಿ ಆಗಿದೆ. ಇಂದು (ಡಿಸೆಂಬರ್ 5) ಸಿನಿಮಾದ ಗಳಿಕೆ 250 ಕೋಟಿ ರೂಪಾಯಿ ದಾಟಲಿದೆ. ‘ಪಠಾಣ್’, ‘ಜವಾನ್’ ಹಾಗೂ ‘ಗದರ್ 2’ ರೀತಿಯಲ್ಲಿ ಈ ಚಿತ್ರವೂ 500 ಕೋಟಿ ರೂಪಾಯಿ ಕ್ಲಬ್ ಸೇರಿದರೂ ಅಚ್ಚರಿ ಏನಿಲ್ಲ.
‘ಅನಿಮಲ್’ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಒಂದು ವರ್ಗದ ಜನರು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಇನ್ನೊಂದು ವರ್ಗದ ಜನರು ಈ ಚಿತ್ರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸ್ತ್ರೀದ್ವೇಷ ಹಾಗೂ ಪುರುಷತ್ವವನ್ನು ಅತಿಯಾಗಿ ಬಿಂಬಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಅನಿಮಲ್’ ಚಿತ್ರದಲ್ಲಿ ಮಿಂಚಿದ ಬಾಬಿ ಡಿಯೋಲ್; ಆದರೂ ಫ್ಯಾನ್ಸ್ಗೆ ಇದೆ ಬೇಸರ
‘ಅನಿಮಲ್’ ಸಿನಿಮಾಗೆ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದಾರೆ. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ, ಬಾಬಿ ಡಿಯೋಲ್, ಅನಿಲ್ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ