ಸಖತ್ ಸುದ್ದಿ ಆಗಿತ್ತು ಈ ಸ್ಟಾರ್​ ಕಿಡ್​​ಗಳ ಲವ್​ ಅಫೇರ್​ ವಿಚಾರ..

ಜಾನ್ವಿ ಕಪೂರ್ ಅವರಿಂದ ಹಿಡಿದು ಸುಹಾನಾ ಖಾನ್​ವರೆಗೆ ಅನೇಕ ಸೆಲೆಬ್ರಿಟಿಗಳು ಲವ್​ ಅಫೇರ್​ ಮೂಲಕ ಸುದ್ದಿ ಆಗಿದ್ದಿದೆ. ಇದರಲ್ಲಿ ಕೆಲವರು ಬ್ರೇಕಪ್ ಮಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.  

ಸಖತ್ ಸುದ್ದಿ ಆಗಿತ್ತು ಈ ಸ್ಟಾರ್​ ಕಿಡ್​​ಗಳ ಲವ್​ ಅಫೇರ್​ ವಿಚಾರ..
ಸಖತ್ ಸುದ್ದಿ ಆಗಿತ್ತು ಈ ಸ್ಟಾರ್​ ಕಿಡ್​​ಗಳ ಲವ್​ ಅಫೇರ್​ ವಿಚಾರ..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 06, 2023 | 10:03 AM

ಸ್ಟಾರ್ ನಟ, ನಟಿಯರಿಗೆ ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಮಂದಿ ಹಿಂಬಾಲಕರು ಇರುತ್ತಾರೆ. ಅದೇ ರೀತಿ ಸೆಲೆಬ್ರಿಟಿ ಮಕ್ಕಳನ್ನು ಫಾಲೋ ಮಾಡುವವರ ಸಂಖ್ಯೆಯೂ ದೊಡ್ಡದಿರುತ್ತದೆ. ಅವರು ಏನು ಮಾಡುತ್ತಾರೆ, ಯಾರ ಜೊತೆ ಸುತ್ತಾಟ ನಡೆಸುತ್ತಾರೆ ಎನ್ನುವ ಕುರಿತು ಫ್ಯಾನ್ಸ್ ಗಮನ ಇಡುತ್ತಾರೆ. ಜಾನ್ವಿ ಕಪೂರ್ ಅವರಿಂದ ಹಿಡಿದು ಸುಹಾನಾ ಖಾನ್​ವರೆಗೆ (Suhaana Khan) ಅನೇಕ ಸೆಲೆಬ್ರಿಟಿಗಳು ಲವ್​ ಅಫೇರ್​ ಮೂಲಕ ಸುದ್ದಿ ಆಗಿದ್ದಿದೆ. ಆ ಬಗ್ಗೆ ಇಲ್ಲಿದೆ ವಿವರ.

ಸುಹಾನಾ ಖಾನ್ ಹಾಗೂ ಅಗಸ್ತ್ಯ ನಂದ

ಶಾರುಖ್ ಖಾನ್ ಅವರ ಮೊದಲ ಮಗಳು ಸುಹಾನಾ ಖಾನ್ ಅವರು ಈಗ ನಟನೆಗೆ ಕಾಲಿಡುತ್ತಿದ್ದಾರೆ. ಅವರ ನಟನೆಯ ‘ದಿ ಆರ್ಚೀಸ್’ ಸಿನಿಮಾ ರಿಲೀಸ್ ಆಗುವುದರಲ್ಲಿದೆ. ಅವರು ಅಮಿತಾಭ್ ಬಚ್ಚನ್ ಮೊಮ್ಮೊಗ ಅಗಸ್ತ್ಯ ನಂದ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಅನೇಕ ಪಾರ್ಟಿಗಳಲ್ಲಿ ಇವರು ಒಟ್ಟಿಗೆ ಕಾಣಿಸಿಕೊಂಡಿದ್ದಿದೆ.

ಶಯಾನಾ ಕಪೂರ್ ಹಾಗೂ ಕರಣ್ ಕೊಟಾರಿ

ಸಂಜಯ್ ಕಪೂರ್ ಮಗಳು ಶಯಾನಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಮುಂಬೈ ಮೂಲದ ಉದ್ಯಮಿ ಕರಣ್ ಕೊಟಾರಿ ಜೊತೆ ಸುತ್ತುತ್ತಿದ್ದಾರೆ ಎನ್ನಲಾಗಿದೆ. ಇಬ್ಬರೂ ಲಾಸ್​ ಏಂಜಲೀಸ್​ನ ವಿಶ್ವವಿದ್ಯಾಲಯದಲ್ಲಿ ಭೇಟಿ ಆದರು. ಅಲ್ಲಿಯೇ ಇವರ ಮಧ್ಯೆ ಪ್ರೀತಿ ಮೂಡಿದೆ.

ಜಾನ್ವಿ ಕಪೂರ್-ಶಿಖರ್ ಪಹಾರಿಯಾ

ಶ್ರೀದೇವಿ ಹಾಗೂ ಬೋನಿ ಕಪೂರ್ ಮಗಳು ಜಾನ್ವಿ ಕಪೂರ್ ಅವರು ಶಿಖರ್ ಪಹಾರಿಯ ಜೊತೆ ಪ್ರೀತಿಯಲ್ಲಿದ್ದಾರೆ. ಇವರು ತಿರುಪತಿಗೆ ಒಟ್ಟಾಗಿ ಭೇಟಿ ನೀಡಿದ್ದರು. ಈ ಮೂಲಕ ಸುದ್ದಿ ಆಗಿದ್ದರು. ಇಬ್ಬರೂ ವಿದೇಶದಲ್ಲಿ ಒಟ್ಟಾಗಿ ಸಮಯ ಕಳೆದಿದ್ದಿದೆ. ಶೀಘ್ರವೇ ಜಾನ್ವಿ ಮದುವೆ ಆದರೂ ಅಚ್ಚರಿ ಏನಿಲ್ಲ.

ನವ್ಯಾ ನವೇಲಿ ನಂದ ಹಾಗೂ ಸಿದ್ದಾಂತ್ ಚತುರ್ವೇದಿ

ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದ ಹಾಗೂ ಗಲ್ಲಿ ಬಾಯ್ ನಟ ಸಿದ್ದಾಂತ್ ಚತುರ್ವೇದಿ ಒಟ್ಟಾಗಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಇವರು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಈ ಸುದ್ದಿ ಹರಿದಾಡಲು ಕಾರಣರಾದರು.

ಇರಾ ಖಾನ್ ಹಾಗೂ ನೂಪುರ್ ಶಿಖಾರೆ

ಆಮಿರ್ ಖಾನ್ ಮಗಳು ಇರಾ ಖಾನ್ ಅವರು ತಮ್ಮ ಡೇಟಿಂಗ್ ವಿಚಾರ ಮುಚ್ಚಿಟ್ಟಿಲ್ಲ. ಅವರು ನೂಪುರ್ ಶಿಖಾರೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದನ್ನು ಅವರೇ ಅಧಿಕೃತ ಮಾಡಿದರು. ಇಬ್ಬರೂ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಜನವರಿಯಲ್ಲಿ ಇವರ ಮದುವೆ ನಡೆಯಲಿದೆ.

ನಿಸಾ ದೇವಗನ್ ಹಾಗೂ ವೇದಾಂತ್ ಮಹಾಜನ್

ಅಜಯ್ ದೇವಗನ್ ಮಗಳು ಬೋಲ್ಡ್ ಡ್ರೆಸ್​ಗಳನ್ನು ಹಾಕಿ ಆಗಾಗ ಸುದ್ದಿ ಆಗುತ್ತಾರೆ. ಅವರು ಲಂಡನ್ ಮೂಲದ ಉದ್ಯಮಿ ವೇದಾಂತ್ ಮಹಾಜನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಂತೆ. 2022ರಲ್ಲಿ ಇಬ್ಬರೂ ಒಟ್ಟಾಗಿ ಸ್ಪೇನ್​ನಲ್ಲಿ ಸುತ್ತಾಟ ನಡೆಸಿದ್ದರು.

ಆಲಿಯಾ ಕಶ್ಯಪ್ ಹಾಗು ಶೇನ್ ಗ್ರೆಗೊಯಿರ್

ನಿರ್ದೇಶಕ ಅನುರಾಗ್ ಕಶ್ಯಪ್ ಮಗಳು ಆಲಿಯಾ ಕಶ್ಯಪ್ ಅವರು ಶೇನ್ ಗ್ರೆಗೊಯಿರ್ ಜೊತೆ ಮೂರು ವರ್ಷಗಳಿಂದ ಸುತ್ತಾಡುತ್ತಿದ್ದಾರೆ. ಇಬ್ಬರೂ ಡೇಟಿಂಗ್ ಆ್ಯಪ್ ಸಹಾಯದಿಂದ ಭೇಟಿ ಆದರು. ಇಬ್ಬರ ಮಧ್ಯೆ ಒಳ್ಳೆಯ ಬಂಧ ಬೆಳೆದಿದೆ.

ಅಂಶುಲಾ ಕಪೂರ್ ಹಾಗೂ ರೋಹನ್ ಟಕ್ಕರ್

ಅರ್ಜುನ್ ಕಪೂರ್ ಸಹೋದರಿ ಅಂಶುಲಾ ಕಪೂರ್ ಅವರು ಚಿತ್ರಬರಹಗಾರ ರೋಶನ್ ಠಕ್ಕರ್ ಜೊತೆ ಸುತ್ತಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರು ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.

ಆರ್ಯನ್ ಖಾನ್ ಹಾಗೂ ನೋರಾ ಫತೇಹಿ

ಆರ್ಯನ್ ಖಾನ್ ಅವರು ನೋರಾ ಫತೇಹಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದರೆ ಆ ವಿಚಾರವನ್ನು ಯಾರೆಂದರೆ ಯಾರೂ ನಂಬಲು ಸಾಧ್ಯವಿಲ್ಲ. ಇವರು ಕೆಲವು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಮೂಲಕ ಇವರು ಸುದ್ದಿ ಆಗಿದ್ದರು. ಆದರೆ, ಈ ವಿಚಾರದಲ್ಲಿ ಯಾವುದೇ ಸತ್ಯ ಇಲ್ಲ ಎನ್ನಲಾಗಿದೆ. ಇಬ್ಬರ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇದೆ.

ಇದನ್ನೂ ಓದಿ: ಆದಿತ್ಯ ರಾಯ್ ಕಪೂರ್-ಅನನ್ಯಾ ಪಾಂಡೆ ಮದುವೆ ಆದ್ರೆ ಇವರ ಒಟ್ಟೂ ಆಸ್ತಿ ಎಷ್ಟು ಕೋಟಿ ರೂಪಾಯಿ ಆಗುತ್ತೆ?

ಅನನ್ಯಾ ಪಾಂಡೆ ಹಾಗೂ ಆದಿತ್ಯ ರಾಯ್ ಕಪೂರ್

ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಅವರು ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರು ಹಲವು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಆದರೆ, ಇವರು ಈ ವಿಚಾರವನ್ನು ಒಪ್ಪಿಲ್ಲ. ಈ ಮೊದಲು ಅನನ್ಯಾ ಪಾಂಡೆ ಅವರು ಕಾರ್ತಿಕ್ ಆರ್ಯನ್ ಜೊತೆ ಕ್ಲೋಸ್ ಆಗಲು ಪ್ರಯತ್ನಿಸಿದ್ದರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:24 am, Wed, 6 December 23

Daily Devotional: ನಮಃ ಮಂತ್ರಾಕ್ಷರದ ಅರ್ಥ ಮತ್ತು ಮಹತ್ವ ತಿಳಿಯಿರಿ
Daily Devotional: ನಮಃ ಮಂತ್ರಾಕ್ಷರದ ಅರ್ಥ ಮತ್ತು ಮಹತ್ವ ತಿಳಿಯಿರಿ
Daily horoscope: ವೃಷಭ ರಾಶಿಯವರಿಗೆ ಇಂದು ಧನಯೋಗ
Daily horoscope: ವೃಷಭ ರಾಶಿಯವರಿಗೆ ಇಂದು ಧನಯೋಗ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್