‘ಫೈಟರ್’ ಚಿತ್ರದಲ್ಲಿ ನಟಿಸಲು ಈ ಕಲಾವಿದರು ಪಡೆದಿದ್ದಾರೆ ಭರ್ಜರಿ ಸಂಭಾವನೆ; ಇಲ್ಲಿದೆ ವಿವರ

ಸಿದ್ದಾರ್ಥ್ ಸರಿಯಾಗಿ ಒಂದು ವರ್ಷ ಬಿಟ್ಟು ‘ಫೈಟರ್​’ನ ಜನರ ಮುಂದೆ ಇಡುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಚಿತ್ರಕ್ಕೆ ಕಲಾವಿದರು ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.

‘ಫೈಟರ್’ ಚಿತ್ರದಲ್ಲಿ ನಟಿಸಲು ಈ ಕಲಾವಿದರು ಪಡೆದಿದ್ದಾರೆ ಭರ್ಜರಿ ಸಂಭಾವನೆ; ಇಲ್ಲಿದೆ ವಿವರ
‘ಫೈಟರ್’ ಚಿತ್ರದಲ್ಲಿ ನಟಿಸಲು ಈ ಕಲಾವಿದರು ಪಡೆದಿದ್ದಾರೆ ಭರ್ಜರಿ ಸಂಭಾವನೆ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 03, 2024 | 11:44 AM

ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಫೈಟರ್’ ಸಿನಿಮಾ ಜನವರಿ 25 ರಂದು ಥಿಯೇಟರ್‌ಗೆ ಬರಲಿದೆ. ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗುತ್ತಿದೆ. ಚಿತ್ರದ ಟೀಸರ್ ಹಾಗೂ ಪೋಸ್ಟರ್ ಈಗಾಗಲೇ ಗಮನ ಸೆಳೆದಿವೆ. ‘ವಾರ್’, ‘ಪಠಾಣ್’​ ಅಂಥ ಸೂಪರ್ ಹಿಟ್ ಆ್ಯಕ್ಷನ್ ಚಿತ್ರಗಳನ್ನು ನೀಡಿರುವ ಸಿದ್ದಾರ್ಥ್ ಆನಂದ್ ಅವರು ‘ಫೈಟರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಜೆಟ್ ಸುಮಾರು 250 ಕೋಟಿ ಎಂದು ಹೇಳಲಾಗುತ್ತಿದೆ. ಹೃತಿಕ್, ದೀಪಿಕಾ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಈ ಚಿತ್ರಕ್ಕೆ ಸೆಲೆಬ್ರಿಟಿಗಳು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ.

ಸಿದ್ದಾರ್ಥ್ ಆನಂದ್ ಅವರು ಕಳೆದ ವರ್ಷ ‘ಪಠಾಣ್’ ಸಿನಿಮಾ ನಿರ್ದೇಶನ ಮಾಡಿ ಗೆದ್ದರು. ಶಾರುಖ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರ ಕಳೆದ ವರ್ಷ ಜನವರಿ 25ರಂದು ರಿಲೀಸ್ ಆಗಿತ್ತು. ಈಗ ಸಿದ್ದಾರ್ಥ್ ಸರಿಯಾಗಿ ಒಂದು ವರ್ಷ ಬಿಟ್ಟು ‘ಫೈಟರ್​’ನ ಜನರ ಮುಂದೆ ಇಡುತ್ತಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಚಿತ್ರಕ್ಕೆ ಕಲಾವಿದರು ಪಡೆದ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.

ಹೃತಿಕ್ ರೋಷನ್

ಹೃತಿಕ್ ರೋಷನ್ ಅವರು ಇತ್ತೀಚೆಗೆ ಆ್ಯಕ್ಷನ್ ಸಿನಿಮಾ ಮಾಡಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹೃತಿಕ್ ರೋಷನ್ ಅವರು ‘ಫೈಟರ್’ ಚಿತ್ರಕ್ಕೆ 50 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಹೃತಿಕ್ ರೋಷನ್​ಗೆ ‘ವಾರ್’ ಸಿನಿಮಾ ಬಳಿಕ ಬೇಡಿಕೆ ಹೆಚ್ಚಿದೆ. ಕಳೆದ ವರ್ಷ ರಿಲೀಸ್ ಆದ ಅವರ ನಟನೆಯ ‘ವಿಕ್ರಮ್ ವೇದ’ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರಕ್ಕೂ ಅವರು 50 ಕೋಟಿ ರೂಪಾಯಿ ಪಡೆದಿದ್ದರು. ಹೃತಿಕ್ ಅವರು ‘ಫೈಟರ್’ ಚಿತ್ರಕ್ಕಾಗಿ ಶುಲ್ಕ ಹೆಚ್ಚಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಸಿನಿಮಾ ಹಿಟ್ ಆಗಿ ದೊಡ್ಡ ಕಲೆಕ್ಷನ್ ಮಾಡಿದರೆ ಅದರಲ್ಲಿ ಹೃತಿಕ್ ಪಾಲು ಪಡೆಯಬಹುದು.

ದೀಪಿಕಾ ಪಡುಕೋಣೆ

ಮದುವೆ ಬಳಿಕ ಅನೇಕ ನಟಿಯರು ಚಿತ್ರರಂಗದಿಂದ ದೂರ ಇದ್ದಾರೆ. ಇನ್ನೂ ಕೆಲವರು ವಿವಾಹದ ಬಳಿಕ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ದೀಪಿಕಾ ಹಾಗಲ್ಲ. ಮದುವೆ ಬಳಿಕವೂ ಸಿನಿಮಾ ಮಾಡುತ್ತಿದ್ದಾರೆ ಮತ್ತು ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 2023 ಅವರಿಗೆ ಸಾಕಷ್ಟು ಆಶಾದಾಯಕವಾಗಿತ್ತು. ಅವರ ನಟನೆಯ ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾಗಳು ಗೆದ್ದಿವೆ. 2024ರ ಆರಂಭದಲ್ಲಿ ‘ಫೈಟರ್’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ. ಈ ಚಿತ್ರಕ್ಕೆ ಅವರು ಪಡೆದ ಸಂಭಾವನೆ 16 ಕೋಟಿ ರೂಪಾಯಿ ಎನ್ನಲಾಗಿದೆ. ‘ಪಠಾಣ್’ ಚಿತ್ರದ ಮೂಲಕ ಸಂಚಲನ ಸೃಷ್ಟಿಸಿರುವ ದೀಪಿಕಾ ಅವರು ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಅನಿಲ್ ಕಪೂರ್

‘ಅನಿಮಲ್’ ಚಿತ್ರದ ಮೂಲಕ ಭಾರೀ ಸದ್ದು ಮಾಡಿದ ಅನಿಲ್ ಕಪೂರ್‌ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಫೈಟರ್’ ಚಿತ್ರದಲ್ಲಿ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅನಿಲ್ ಕಪೂರ್ ಈ ಪಾತ್ರಕ್ಕಾಗಿ 7-10 ಕೋಟಿ ಚಾರ್ಜ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ಅನಿಲ್ ಕಪೂರ್ ಹೃತಿಕ್ ಮತ್ತು ದೀಪಿಕಾ ಅವರ ಸೀನಿಯರ್ ಪಾತ್ರವನ್ನು ಮಾಡಿದ್ದಾರೆ. ಅಂದರೆ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಪಾತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ. ಡಿಸೆಂಬರ್ 1ರಂದು ‘ಅನಿಮಲ್’ ರಿಲೀಸ್ ಆಗಿತ್ತು.

ಕರಣ್ ಸಿಂಗ್ ಗ್ರೋವರ್

ಕಳೆದ ಕೆಲವು ವರ್ಷಗಳಲ್ಲಿ ಕರಣ್ ಸಿಂಗ್ ಗ್ರೋವರ್ ಅವರು ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಧಾರಾವಾಹಿ ಹಾಗೂ ವೆಬ್ ಸೀರಿಸ್​ಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಕರಣ್ ಕೈಗೆ ಈ ಬಿಗ್ ಬಜೆಟ್ ಚಿತ್ರ ಸಿಕ್ಕಿದೆ. ಈ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸಲು 1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಅಕ್ಷಯ್ ಒಬೆರಾಯ್

ಚಿತ್ರದಲ್ಲಿ ಅಕ್ಷಯ್ ಒಬೆರಾಯ್ ಸ್ಕ್ವಾಡ್ರನ್ ಲೀಡರ್ ಬಶೀರ್ ಖಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದ್ದಾರೆ. ಅವರು ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಕ್ಷಯ್ ಸುಮಾರು 1 ಕೋಟಿ ರೂಪಾಯಿ ಪಡೆದಿದ್ದಾರೆ.

ಇದನ್ನೂ ಓದಿ: ಮಿತಿ ಇಲ್ಲದ ದೀಪಿಕಾ ಪಡುಕೋಣೆ ಗ್ಲಾಮರ್​; ಹೃತಿಕ್​ ಡ್ಯಾನ್ಸ್ ಖದರ್​

ಹೃತಿಕ್, ದೀಪಿಕಾ ಮತ್ತು ಕರಣ್ ಸಿಂಗ್ ಗ್ರೋವರ್ ಮಾತ್ರವಲ್ಲದೆ ಇನ್ನೂ ಹಲವು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ‘ಶೇರ್ ಖುಲ್ ಗಯೇ..’ ಸಾಂಗ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರದ ನಿರ್ದೇಶಕ ಸಿದ್ದಾರ್ಥ್ ಆನಂದ್ ಕೂಡ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ