AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

750 ರೂಪಾಯಿಯಲ್ಲಿ ಮದುವೆ, ಮಗು ಹುಟ್ಟಿದಾಗ ಅಸಮಾಧಾನ; ಇದು ನಾನಾ ಪಾಟೇಕರ್ ಜೀವನದ ಕಥೆ

ನಾನಾ ಪಾಟೇಕರ್ ಅವರಿಗೆ ಕಷ್ಟದ ಕಾಲವದು. ಮನೆಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ಜೀಬ್ರಾ ಕ್ರಾಸಿಂಗ್‌ಗೆ ಬಣ್ಣ ಬಳಿದು ಅವರು ಹಣ ಸಂಪಾದಿಸುತ್ತಿದ್ದರು. ಅದರಿಂದ ಮನೆ ನಡೆದುಕೊಂಡು ಹೋಗುತ್ತಿತ್ತು. ಆದಾಗ್ಯೂ, ಅವರು ನಟನೆಗೆ ಕಾಲಿಡಬೇಕು ಎಂದು ಪಣತೊಟ್ಟರು.

750 ರೂಪಾಯಿಯಲ್ಲಿ ಮದುವೆ, ಮಗು ಹುಟ್ಟಿದಾಗ ಅಸಮಾಧಾನ; ಇದು ನಾನಾ ಪಾಟೇಕರ್ ಜೀವನದ ಕಥೆ
ನಾನಾ ಪಾಟೇಕರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jan 03, 2024 | 8:16 AM

Share

ನಟ ನಾನಾ ಪಾಟೇಕರ್ (Nana Patekar) ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಜೀವನದಲ್ಲಿ ಮುಂದೆ ಬರಲು ಯಾರಿಂದಲೂ ಸಹಾಯ ಪಡೆಯದ ನಟರಲ್ಲಿ ನಾನಾ ಪಾಟೇಕರ್ ಕೂಡ ಒಬ್ಬರು. ನಾನಾ ರೀತಿಯ ಕಷ್ಟ ಸನ್ನಿವೇಶಗಳನ್ನು ಮೆಟ್ಟಿ ನಿಂತು ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ವೃತ್ತಿ ಜೀವನ ಆರಂಭಿಸಿದಾಗ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳು ಬಂದವು. ಅವರು ಅನೇಕ ಬಾರಿ ನಿಷ್ಠುರವಾಗಿ ಕಂಡಿದಿದ್ದೆ. ಅವರ ಮದುವೆ ಆಗಿದ್ದು ಸಖತ್ ಫನ್ನಿ ಆಗಿದೆ.

ನಾನಾ ಪಾಟೇಕರ್ ಅವರಿಗೆ ಕಷ್ಟದ ಕಾಲವದು. ಮನೆಯಲ್ಲಿ ಪರಿಸ್ಥಿತಿ ಹದಗೆಟ್ಟಿತ್ತು. ಜೀಬ್ರಾ ಕ್ರಾಸಿಂಗ್‌ಗೆ ಬಣ್ಣ ಬಳಿದು ಅವರು ಹಣ ಸಂಪಾದಿಸುತ್ತಿದ್ದರು. ಅದರಿಂದ ಮನೆ ನಡೆದುಕೊಂಡು ಹೋಗುತ್ತಿತ್ತು. ಆದಾಗ್ಯೂ, ಅವರು ನಟನೆಗೆ ಕಾಲಿಡಬೇಕು ಎಂದು ಪಣತೊಟ್ಟರು. ಹೀಗಾಗಿ ರಂಗಭೂಮಿಯತ್ತ ಮುಖ ಮಾಡಿದರು. ಅವರು ರಂಗಭೂಮಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಷ್ಟರಲ್ಲಿ ನೀಲಕಂಠಿ ಅವರನ್ನು ಭೇಟಿಯಾದರು. ನೀಲಕಂಠಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ನಟನೆಯನ್ನೂ ಮಾಡುತ್ತಿದ್ದರು.  ಆಗ ನೀಲಕಂಠಿಯವರ ಮಾಸಿಕ ವೇತನ 2500 ರೂಪಾಯಿ ಮತ್ತು ನಾನಾ ಪಾಟೇಕರ್ ಒಂದು ಪ್ರದರ್ಶನಕ್ಕೆ ಪಡೆಯುತ್ತಿದ್ದ ಸಂಭಾವನೆ 50 ರೂಪಾಯಿ.

ನಾನಾ ಮತ್ತು ನೀಲಕಂಠಿ ಮದುವೆಯಾಗಲು ನಿರ್ಧರಿಸಿದರು. 1978ರಲ್ಲಿ 750 ರೂಪಾಯಿಗೆ ಮದುವೆಯಾದರು. ಮದುವೆ ಪಾರ್ಟಿಗೆ ಖರ್ಚು ಮಾಡಿದ್ದು ಕೇವಲ 24 ರೂಪಾಯಿ. ನೀಲಕಂಠಿ ಉತ್ತಮ ಕಲಾವಿದೆ ಕೂಡ ಹೌದು. ಅವರ ಅಭಿನಯಕ್ಕಾಗಿ ಅವರು ಹಲವು ಪ್ರಶಸ್ತಿ ಪಡೆದಿದ್ದಾರೆ. ಮದುವೆಯ ನಂತರ ನೀಲಕಂಠಿ ಸಿನಿಮಾ ಮಾಡುವುದನ್ನು ನಿಲ್ಲಿಸಿದರು.

ನೀಲಕಂಠಿ ಪ್ರೆಗ್ನೆಂಟ್ ಆದರು. ಈ ಶುಭ ಸಮಾಚಾರ ಕೇಳಿದ ನಾನಾಗೆ ಖುಷಿ ಆಗಿತ್ತು. ಆದರೆ, ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ನೋಡಿ ಅವರು ಗಾಬರಿಯಾದರು. ಏಕೆಂದರೆ ನವಜಾತ ಶಿಶುವಿನ ತುಟಿಗಳು ಹುಟ್ಟುವಾಗಲೇ ಭಾಗಶಃ ಸೀಳಿದ್ದವು. ಇದರಿಂದಾಗಿ ಮಗುವಿನ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದವು. ನಾನಾಗೂ ಮಗುವನ್ನು ಕಂಡರೆ ಅಷ್ಟಕ್ಕಷ್ಟೇ. ಮಗುವಿನ ಮುಖ ನೋಡಿದಾಗೆಲ್ಲ ನಾನಾ ನೊಂದುಕೊಳ್ಳುತ್ತಿದ್ದರು. ಕೆಲವು ದಿನಗಳ ನಂತರ, ಅವರು ತಾಯಿ ಮತ್ತು ಮಗುವನ್ನು ಮನೆಗೆ ಕರೆತಂದರು. ನಾನಾ ಅವರು ಮಗನ ಜೊತೆ ಆಟವಾಡುತ್ತಿರಲಿಲ್ಲ, ಅವನತ್ತ ಗಮನ ಹರಿಸುತ್ತಿರಲಿಲ್ಲ.

ಇದನ್ನೂ ಓದಿ: ‘ಇನ್ಮುಂದೆ ಹೀಗೆ ಮಾಡಲ್ಲ, ಕ್ಷಮಿಸಿ’: ಅಭಿಮಾನಿಗೆ ಹೊಡೆದು ಕ್ಷಮೆ ಕೇಳಿದ ನಾನಾ ಪಾಟೇಕರ್​

ಒಮ್ಮೆ ಮನೆಯವರೆಲ್ಲ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಮನೆಯಲ್ಲಿ ನಾನಾ ಮತ್ತು ಮಗು ಮಾತ್ರ ಇತ್ತು. ಸ್ವಲ್ಪ ಸಮಯದ ನಂತರ ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು. ನಾನಾ ಎದ್ದು ಮಗುವಿನ ಬಳಿ ಹೋದರು. ಅವನು ಮಗುವಿನ ಕಣ್ಣುಗಳಲ್ಲಿದ್ದ ನೀರು ನೋಡಿದರು. ಅದು ಅವರಲ್ಲಿದ್ದ ತಂದೆಯನ್ನು ಎಚ್ಚರಿಸಿತು. ಆ ಬಳಿಕ ಅವರು ತಪ್ಪನ್ನು ಅರಿತುಕೊಂಡರು. ಆದರೆ ಈ ಮಗು ಹೆಚ್ಚು ದಿನ ಬದುಕಲಿಲ್ಲ. ಮಗು ಎರಡೂವರೆ ವರ್ಷದವನಿದ್ದಾಗ ತೀರಿಹೋಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:41 am, Wed, 3 January 24

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು