ರಕ್ಕಮ್ಮನ ಖಾಸಗಿ ವಿಡಿಯೋ ಲೀಕ್​ ಮಾಡ್ತೀನಿ ಅಂತ ಬೆದರಿಕೆ ಹಾಕಿದ ಸುಕೇಶ್​ ಚಂದ್ರಶೇಖರ್​

ಸುಕೇಶ್​ ಚಂದ್ರಶೇಖರ್​ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕ್ಲೋಸ್​ ಆಗಿದ್ದರು. ಆದರೆ ಅವರಿಬ್ಬರ ಸಂಬಂಧ ರಹಸ್ಯವಾಗಿ ಉಳಿದುಕೊಂಡಿತ್ತು. ಸುಕೇಶ್​ ಚಂದ್ರಶೇಖರ್​ ಬಂಧನದ ಬಳಿಕ ವಿಚಾರಣೆ ವೇಳೆ ಅನೇಕ ಸತ್ಯಗಳು ಹೊರಬಂದವು. ಈಗ ಖಾಸಗಿ ವಿಡಿಯೋ ಲೀಕ್​ ಮಾಡುವುದಾಗಿ ಸುಕೇಶ್​ ಬೆದರಿಸಿದ್ದಾನೆ. ಅದಕ್ಕೆ ಕಾರಣ ಕೂಡ ಇದೆ.

ರಕ್ಕಮ್ಮನ ಖಾಸಗಿ ವಿಡಿಯೋ ಲೀಕ್​ ಮಾಡ್ತೀನಿ ಅಂತ ಬೆದರಿಕೆ ಹಾಕಿದ ಸುಕೇಶ್​ ಚಂದ್ರಶೇಖರ್​
ಜಾಕ್ವೆಲಿನ್​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​
Follow us
ಮದನ್​ ಕುಮಾರ್​
|

Updated on: Jan 05, 2024 | 6:11 PM

‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ರಕ್ಕಮ್ಮನ ಪಾತ್ರ ಮಾಡಿ ಕನ್ನಡದ ಪ್ರೇಕ್ಷಕರಿಗೆ ಪರಿಚಯಗೊಂಡ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ (Jacqueline Fernandez) ಅವರು ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ‘ರಾ.. ರಾ… ರಕ್ಕಮ್ಮ’ ಹಾಡು ಹಿಂದಿ ಪ್ರೇಕ್ಷಕರಿಗೂ ಇಷ್ಟ. ಈ ರಕ್ಕಮ್ಮನಿಗೆ ಈಗ ಸಂಕಷ್ಟ ಹೆಚ್ಚುತ್ತಿದೆ. 200 ಕೋಟಿ ರೂಪಾಯಿ ವಂಚನೆ ಕೇಸ್​ನಲ್ಲಿ ಜೈಲು ಸೇರಿರುವ ಸುಕೇಶ್​ ಚಂದ್ರಶೇಖರ್​ (Sukesh Chandrashekhar) ಕಡೆಯಿಂದ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಬೆದರಿಕೆ ಬಂದಿದೆ. ನಟಿಯ ಖಾಸಗಿ ವಿಡಿಯೋವನ್ನು ಲೀಕ್ (Video Leak)​ ಮಾಡುವುದಾಗಿ ಸುಕೇಶ್​ ಚಂದ್ರಶೇಕರ್​ ಬೆದರಿಕೆ ಹಾಕಿದ್ದಾನೆ.

ಸುಕೇಶ್​ ಚಂದ್ರಶೇಖರ್​ ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕ್ಲೋಸ್​ ಆಗಿದ್ದರು. ಆದರೆ ಅವರಿಬ್ಬರ ಸಂಬಂಧ ರಹಸ್ಯವಾಗಿ ಉಳಿದುಕೊಂಡಿತ್ತು. ಸುಕೇಶ್​ ಚಂದ್ರಶೇಖರ್​ ಬಂಧನದ ಬಳಿಕ ವಿಚಾರಣೆ ವೇಳೆ ಅನೇಕ ಸತ್ಯಗಳು ಹೊರಬಂದವು. ಜಾಕ್ವೆಲಿನ್​ ಫರ್ನಾಂಡಿಸ್​ ಮತ್ತು ಸುಕೇಶ್​ ಚಂದ್ರಶೇಖರ್​ ಆಪ್ತವಾಗಿರುವ ಫೋಟೋಗಳು ಲೀಕ್​ ಆದವು. ಈಗ ವಿಡಿಯೋ ಲೀಕ್​ ಮಾಡುವುದಾಗಿ ಸುಕೇಶ್​ ಬೆದರಿಸಿದ್ದಾನೆ. ಅದಕ್ಕೆ ಕಾರಣ ಕೂಡ ಇದೆ.

ಇದನ್ನೂ ಓದಿ: ‘ಆಕೆಯ ಬಣ್ಣ ಬಯಲು ಮಾಡ್ತೀನಿ’: ಜೈಲಿನಿಂದಲೇ ಎಚ್ಚರಿಕೆ ಸಂದೇಶ ನೀಡಿದ ಸುಕೇಶ್​ ಚಂದ್ರಶೇಖರ್​

ಕೆಲವೇ ದಿನಗಳ ಹಿಂದೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕೋರ್ಟ್​ನಲ್ಲಿ ಒಂದು ಮನವಿ ಸಲ್ಲಿಸಿದ್ದರು. ಸುಕೇಶ್​​ಗೆ ಸಂಬಂಧಿಸಿದ ಕೇಸ್​ನಲ್ಲಿ ತಮ್ಮ ಹೆಸರನ್ನು ಕೈ ಬಿಡಬೇಕು ಎಂದು ಅವರು ಕೋರಿದ್ದರು. ಈ ವಿಷಯ ಗೊತ್ತಾದ ಬಳಿಕ ಸುಕೇಶ್​ ಚಂದ್ರಶೇಖರ್​ಗೆ ಕೋಪ ಬಂದಿದೆ. ಇಷ್ಟು ದಿನಗಳ ಕಾಲ ಜಾಕ್ವೆಲಿನ್​ ಬಗ್ಗೆ ಪ್ರೀತಿಯ ಮಾತುಗಳನ್ನು ಆಡುತ್ತಿದ್ದ ಆತ ಈಗ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಸಂದೇಶ ರವಾನಿಸುತ್ತಿದ್ದಾನೆ.

ಇದನ್ನೂ ಓದಿ: ‘ಜೈಲಿನಿಂದ ಬೇಗ ಬರ್ತೀನಿ ಬೇಬಿ’: ಜಾಕ್ವೆಲಿನ್​ ಜನ್ಮದಿನಕ್ಕೆ ಕೈ ಬರಹದ ಪ್ರೇಮಪತ್ರ ರವಾನಿಸಿದ ಸುಕೇಶ್​ ಚಂದ್ರಶೇಖರ್​

ತಮ್ಮ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ನಡುವೆ ವಿನಿಮಯ ಆದ ವಾಟ್ಸಪ್​ ಸಂದೇಶಗಳನ್ನು ಆತ ಲೀಕ್​ ಮಾಡಿದ್ದಾನೆ. ಇದು ಬರೀ ಟೀಸರ್​ ಮಾತ್ರ. ನೂರಾರು ಚಾಟ್​ಗಳು, ಖಾಸಗಿ ವಿಡಿಯೋಗಳು, ವಾಯ್ಸ್​ ರೆಕಾರ್ಡಿಂಗ್ಸ್​ ಇವೆ. ಇದನ್ನು ತನಿಖಾಧಿಕಾರಿಗಳಿಗೆ ನೀಡದ ಹೊರತು ಬೇರೆ ಯಾವುದೇ ಆಯ್ಕೆ ತನ್ನ ಬಳಿ ಈಗ ಉಳಿದಿಲ್ಲ ಎಂದು ಸುಕೇಶ್​ ಚಂದ್ರಶೇಖರ್​ ಹೇಳಿರುವುದಾಗಿ ವರದಿ ಆಗಿದೆ. ಒಂದು ವೇಳೆ ಆ ರೀತಿಯ ವಿಡಿಯೋಗಳು ಲೀಕ್​ ಆದರೆ ಜಾಕ್ವೆಲಿನ್​ ಫರ್ನಾಂಡಿಸ್​ ಅವರಿಗೆ ಕಿರಿಕಿರಿ ಹೆಚ್ಚಾಗಲಿದೆ. ನಟಿಗೆ ಈಗಾಗಲೇ ಆತ ಅನೇಕ ಲೆಟರ್​ಗಳನ್ನು ಬರೆಯುವ ಮೂಲಕ ಸುದ್ದಿ ಆಗಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ