AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Y+ ಭದ್ರತೆಯೊಂದಿಗೆ ಲೋಕಲ್ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ಕಂಗನಾ ರಣಾವತ್; ವಿಡಿಯೋ ವೈರಲ್

ಕಂಗನಾ ಅವರು ಅನಾರ್ಕಲಿ ಧರಿಸಿ ಅಂಗಡಿ ಸುತ್ತಾಡಿದ್ದಾರೆ. ಅವರು ಅಂಗಡಿಯಿಂದ ಹೊರ ಬರುವಾಗ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದಾರೆ. ಅಂಗಡಿ ಹೊರ ಭಾಗದಲ್ಲಿ ನಿಂತಿದ್ದ ಐಷಾರಾಮಿ ಕಾರನ್ನು ಏರಿ ಅವರು ಅಲ್ಲಿಂದ ತೆರಳಿದ್ದಾರೆ.

Y+ ಭದ್ರತೆಯೊಂದಿಗೆ ಲೋಕಲ್ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ಕಂಗನಾ ರಣಾವತ್; ವಿಡಿಯೋ ವೈರಲ್
ಕಂಗನಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 03, 2023 | 12:44 PM

Share

ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ ವೈ+ ಕ್ಯಾಟಗರಿಯ ಭದ್ರತೆ ನೀಡಲಾಗಿದೆ. ಅವರು ಎಲ್ಲೇ ಹೋದರು ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿರುತ್ತಾರೆ. ಸೆಲೆಬ್ರಿಟಿ ಆದಮೇಲೆ ಕೆಲವರು ಬೀದಿ ಬದಿಗಳಲ್ಲಿ ಶಾಪಿಂಗ್ ಮಾಡೋಕೆ ಹೆಚ್ಚು ಆದ್ಯತೆ ನೀಡೋದಿಲ್ಲ. ಆದರೆ, ಬಾಲಿವುಡ್​ನ ಕೆಲವೇ ಕೆಲವು ಸೆಲೆಬ್ರಿಟಿಗಳು ಇಷ್ಟು ಸಿಂಪಲ್ ಆಗಿ ಇರುತ್ತಾರೆ. ನಟಿ ಕಂಗನಾ ರಣಾವತ್ ಕೂಡ ಇದೇ ಸಾಲಿನಲ್ಲಿದ್ದಾರೆ. ಕಂಗನಾ ಮುಂಬೈನ ರಸ್ತೆ ಬದಿಯ ಅಂಗಡಿಯಲ್ಲಿ ಶಾಪಿಂಗ್ ನಡೆಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಶಿವಸೇನಾ ನಾಯಕ ಸಂಜಯ್ ರಾವತ್ ಹಾಗೂ ಕಂಗನಾ ಮಧ್ಯೆ ವಾಕ್​ಸಮರ ಏರ್ಪಟ್ಟಿತ್ತು. ತಮಗೆ ಜೀವ ಬೆದರಿಕೆ ಇದೆ ಎಂದು ಕಂಗನಾ ಹೇಳಿಕೊಂಡಿದ್ದರು. ಇದಾದ ಬಳಿಕ ಕಂಗನಾಗೆ ಕೇಂದ್ರ ಸರ್ಕಾರದಿಂದ ವೈ+ ಭದ್ರತೆ ಒದಗಿಸಲಾಯಿತು. ಈಗ ಅವರು ಎಲ್ಲೇ ಹೋದರೂ ಈ ಭದ್ರತೆಯೊಂದಿಗೆ ಓಡಾಟ ನಡೆಸುತ್ತಾರೆ.

ಕಂಗನಾ ಅವರು ಅನಾರ್ಕಲಿ ಧರಿಸಿ ಅಂಗಡಿ ಸುತ್ತಾಡಿದ್ದಾರೆ. ಅವರು ಅಂಗಡಿಯಿಂದ ಹೊರ ಬರುವಾಗ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದಾರೆ. ಅಂಗಡಿ ಹೊರ ಭಾಗದಲ್ಲಿ ನಿಂತಿದ್ದ ಐಷಾರಾಮಿ ಕಾರನ್ನು ಏರಿ ಅವರು ಅಲ್ಲಿಂದ ತೆರಳಿದ್ದಾರೆ. ‘ಐದು ವರ್ಷಗಳ ಬಳಿಕ ಇಲ್ಲಿಗೆ ಶಾಪಿಂಗ್​ಗೆ ಬಂದೆ’ ಎಂದು ಕಂಗನಾ ಸಂತಸ ವ್ಯಕ್ತಪಡಿಸಿದ್ದಾರೆ. ಕಂಗನಾ ರಣಾವತ್ ಅವರು ಭದ್ರತೆಯೊಂದಿಗೆ ಶಾಪಿಂಗ್ ಮಾಡಿದ್ದನ್ನು ಅನೇಕರು ಟೀಕಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಅನೇಕರು ಟೀಕಿಸಿದ್ದಾರೆ.

ಕಂಗನಾ ನಟನೆಯ ‘ತೇಜಸ್’ ಸಿನಿಮಾ ಅಕ್ಟೋಬರ್ 27ರಂದು ರಿಲೀಸ್ ಆಗಿ ಫ್ಲಾಪ್ ಆಗಿದೆ. ಈ ಬೇಸರ ಅವರನ್ನು ಕಾಡುತ್ತಿದೆ. ಹೀಗಾಗಿ ಕಂಗನಾ ರಣಾವತ್ ಅವರು ದ್ವಾರಕಾಗೆ ಭೇಟಿ ನಿಡಿದ್ದರು. ಅಲ್ಲಿನ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ‘ಕೆಲ ದಿನಗಳಿಂದ ನನ್ನ ಮನಸ್ಸು ತುಂಬಾ ನೊಂದಿತ್ತು. ನನಗೆ ದ್ವಾರಕಾಧೀಶನನ್ನು ಭೇಟಿ ಮಾಡಬೇಕು ಎಂದು ಅನಿಸಿತು. ನಾನು ಈ ಶ್ರೀಕೃಷ್ಣನ ನಗರ ದ್ವಾರಕಾಗೆ ಬಂದ ತಕ್ಷಣ, ಇಲ್ಲಿನ ಮಣ್ಣನ್ನು ನೋಡಿ ನನ್ನ ಚಿಂತೆಗಳೆಲ್ಲವೂ ಬಿದ್ದು ಬಿದ್ದುಹೋದಂತೆ ಭಾಸವಾಯಿತು. ನಿನ್ನ ಆಶೀರ್ವಾದ ಹೀಗೆಯೇ ಇರಲಿ’ ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: Kangana Ranaut: ‘ತೇಜಸ್’ ಸಿನಿಮಾ ಫ್ಲಾಪ್ ಆದಮೇಲೆ ಅಪ್ಸೆಟ್ ಆದ ಕಂಗನಾ; ದುಃಖ ತೋಡಿಕೊಂಡ ನಟಿ

‘ತೇಜಸ್’ ಚಿತ್ರಕ್ಕಿಂತ ಮೊದಲು ರಿಲೀಸ್ ಆಗಿದ್ದ ತಮಿಳಿನ ‘ಚಂದ್ರಮುಖಿ 2’ ಚಿತ್ರ ಕೂಡ ಸೋಲು ಕಂಡಿದೆ. ಅದಕ್ಕೂ ಮೊದಲು ರಿಲೀಸ್ ಆದ ಹಲವು ಸಿನಿಮಾಗಳು ಸೋತಿವೆ. ಇದು ಕಂಗನಾ ಬೇಸರಕ್ಕೆ ಕಾರಣ ಆಗಿದೆ. ಸದ್ಯ ಅವರು ‘ಎಮರ್ಜೆನ್ಸಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಕುರಿತು ಈ ಚಿತ್ರ ಇದೆ. ಕಂಗನಾ ಇಂದಿರಾ ಗಾಂಧಿ ಪಾತ್ರ ಮಾಡುತ್ತಿದ್ದಾರೆ. 2024ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Fri, 3 November 23

Follow Us
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ