ವೀಕೆಂಡ್ನಲ್ಲಿ ಕಿಚ್ಚನ ಖಡಕ್ ಕ್ಲಾಸ್ಗೆ ಕಾದಿದ್ದಾರೆ ವೀಕ್ಷಕರು; ತಪ್ಪು ಮಾಡಿದವರಿಗೆ ಶಿಕ್ಷೆ?
ಕಳಪೆಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಓಪನ್ ಆಗಿ ಚರ್ಚೆ ಮಾಡುವಂತಿಲ್ಲ. ಆದಾಗ್ಯೂ ವಿನಯ್ ಅವರು ಗುಂಪು ಕಟ್ಟಿಕೊಂಡು ಕಳಪೆ ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ವಿನಯ್ ಗೌಡ ಅವರು ‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಎಲ್ಲೆ ಮೀರಿ ನಡೆದುಕೊಂಡಿದ್ದಾರೆ. ಬಳೆ ವಿಚಾರದಿಂದ ಹಿಡಿದು ಏಕವಚನದಲ್ಲಿ ಮಾತನಾಡಿಸುವವರೆಗೆ ಸಾಕಷ್ಟು ಬಾರಿ ತಪ್ಪಿದ್ದಾರೆ. ಆನೆ ನಡೆದಿದ್ದೇ ಹಾದಿ ಎಂದು ಮನಬಂದಂತೆ ವರ್ತಿಸಿದ್ದಾರೆ. ಈ ವೀಕೆಂಡ್ನಲ್ಲಿ ಈ ಎಲ್ಲಾ ವಿಚಾರಗಳು ಚರ್ಚೆಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಸ್ವತಃ ಸುದೀಪ್ ಅಭಿಮಾನಿಗಳೇ ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಹೀಗಾಗಿ, ವೀಕೆಂಡ್ ಎಪಿಸೋಡ್ ಸಾಕಷ್ಟು ಕುತೂಹಲದಿಂದ ಕೂಡುವ ಸಾಧ್ಯತೆ ಇದೆ.
ಬಳೆಯ ವಿಚಾರ
ಪುರುಷರಿಂದ ಮಾತ್ರ ಎಲ್ಲವೂ ಸಾಧ್ಯ, ಮಹಿಳೆಯರ ಕೈಯಿಂದ ಏನೂ ಆಗದು ಎಂಬರ್ಥದಲ್ಲಿ ವಿನಯ್ ಮಾತನಾಡಿದ್ದಾರೆ. ಈ ಕಾರಣದಿಂದಲೇ ಅವರು ‘ಬಳೆ ಹಾಕಿಕೊಂಡವರು’ ಎನ್ನುವ ಪದ ಬಳಕೆ ಮಾಡಿದ್ದಾರೆ. ‘ಗಂಡಸಿನ ರೀತಿ ಆಡು, ಬಳೆ ಹಾಕ್ಕೊಂಡು ಹೆಂಗಸಿನ ರೀತಿ ಆಡಬೇಡ’ ಎಂದಿದ್ದರು ವಿನಯ್. ಇದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರು ಈ ಬಗ್ಗೆ ಅಪಸ್ವರ ತೆಗೆದಿದ್ದಾರೆ.
ಒಳ ಒಪ್ಪಂದ
ಕಳಪೆಯನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಓಪನ್ ಆಗಿ ಚರ್ಚೆ ಮಾಡುವಂತಿಲ್ಲ. ಆದಾಗ್ಯೂ ವಿನಯ್ ಅವರು ಗುಂಪು ಕಟ್ಟಿಕೊಂಡು ಕಳಪೆ ಯಾರಿಗೆ ನೀಡಬೇಕು ಎಂಬುದರ ಕುರಿತು ಚರ್ಚೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಭಾಗ್ಯಶ್ರೀ ಬಗ್ಗೆ ಟೀಕೆ
ಕಳೆದ ವೀಕೆಂಡ್ನಲ್ಲಿ ಭಾಗ್ಯಶ್ರೀ ಅವರು ಎಲಿಮಿನೇಟ್ ಆದರು. ಆದರೆ, ದಸರಾ ಹಬ್ಬಕ್ಕೆ ವೀಕ್ಷಕರು ಯಾರನ್ನೂ ಎಲಿಮಿನೇಟ್ ಮಾಡಬಾರದು ಎಂದು ಕೋರಿದ್ದರಿಂದ ಅವರು ಉಳಿದುಕೊಂಡರು. ಇದನ್ನು ವಿನಯ್ ಟೀಕಿಸಿದ್ದರು. ‘ದಸರಾ ಆಫರ್ನಲ್ಲಿ ಭಾಗ್ಯಶ್ರೀ ಉಳಿದುಕೊಂಡರು’ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ
ಅವಾಚ್ಯ ಶಬ್ದ
ಹಲವು ಕಡೆಗಳಲ್ಲಿ ವಿನಯ್ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಅನೇಕರನ್ನು ಹೀಯಾಳಿಸಿ ಅವರು ಮಾತನಾಡಿದ್ದರು. ಈ ಬಗ್ಗೆಯೂ ಚರ್ಚೆ ಆಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ