ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್​ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ

‘ಬಿಗ್ ಬಾಸ್ ಕನ್ನಡ’ದ ಟಿಆರ್​ಪಿ ಉತ್ತಮವಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ 4.8 ಟಿಆರ್​ಪಿಯನ್ನು ಬಿಗ್ ಬಾಸ್ ಪಡೆದಿದೆ. ಶನಿವಾರ 5.7 ಹಾಗೂ ಭಾನುವಾರ 4.9 ಟಿಆರ್​ಪಿ ಬಿಗ್ ಬಾಸ್​ಗೆ ಸಿಕ್ಕಿದೆ. ಕಳೆದ ವಾರಕ್ಕೆ ಹೋಲಿಸಿದರೆ ಟಿಆರ್​ಪಿಯಲ್ಲಿ ಇಳಿಕೆ ಆಗಿದೆ.

ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್​ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ
ಸೀತಾ ರಾಮ-ಬಿಗ್ ಬಾಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 02, 2023 | 2:06 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭ ಆಗಿ ಒಂದು ತಿಂಗಳು ಕಳೆದಿದೆ. ಸ್ಪರ್ಧಿಗಳ ಮಧ್ಯೆ ಟಫ್ ಸ್ಪರ್ಧೆ ಏರ್ಪಟ್ಟಿದೆ. ಮನೆಯಲ್ಲಿ ಮನರಂಜನೆಗಿಂತ ಕಿತ್ತಾಟವೇ ಜೋರಾಗಿದೆ. ಕಳೆದ ಸೀಸನ್​ಗಳಲ್ಲಿ ನಗು ಉಕ್ಕಿಸುವ ಘಟನೆಗಳು ನಡೆಯುತ್ತಿದ್ದವು. ಆದರೆ, ಈ ಬಾರಿ ಆ ರೀತಿ ಆಗುತ್ತಿಲ್ಲ. ದೊಡ್ಮನೆಯ ಯಾವುದೇ ಮೂಲೆಗೆ ಹೋದರೂ ಜಗಳ ಕೇಳುತ್ತದೆ. ಹಾಗಾದರೆ ಬಿಗ್ ಬಾಸ್ (Bigg Boss) ಎಷ್ಟು ಟಿಆರ್​ಪಿ ಪಡೆದಿದೆ? ಉಳಿದ ಧಾರಾವಾಹಿಗಳ ಪರಿಸ್ಥಿತಿ ಏನಾಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್

‘ಬಿಗ್ ಬಾಸ್ ಕನ್ನಡ’ದ ಟಿಆರ್​ಪಿ ಉತ್ತಮವಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ 4.8 ಟಿಆರ್​ಪಿಯನ್ನು ಬಿಗ್ ಬಾಸ್ ಪಡೆದಿದೆ. ಶನಿವಾರ 5.7 ಹಾಗೂ ಭಾನುವಾರ 4.9 ಟಿಆರ್​ಪಿ ಬಿಗ್ ಬಾಸ್​ಗೆ ಸಿಕ್ಕಿದೆ. ಕಳೆದ ವಾರಕ್ಕೆ ಹೋಲಿಸಿದರೆ ಟಿಆರ್​ಪಿಯಲ್ಲಿ ಇಳಿಕೆ ಆಗಿದೆ.

ಹೊಸ ಧಾರಾವಾಹಿ ಕಥೆ ಏನು?

‘ಬೃಂದಾವನ’ ಧಾರಾವಾಹಿ ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿದೆ. ಈ ಧಾರಾವಾಹಿ ಸಾಧಾರಣ ಟಿಆರ್​ಪಿ ಪಡೆದಿದೆ. ಈ ಧಾರಾವಾಹಿಗೆ 5.2 ಟಿಆರ್​ಪಿ ಸಿಕ್ಕಿದೆ.

ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ?

ಕಳೆದ ಕೆಲವು ತಿಂಗಳಿಂದ ಮೊದಲ ಸ್ಥಾನದಲ್ಲಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ 43ನೇ ವಾರವೂ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಗೆ ಎಲ್ಲಾ ಧಾರಾವಾಹಿಗಿಂತ ಹೆಚ್ಚಿನ ಟಿಆರ್​ಪಿ ಸಿಕ್ಕಿದೆ. ಎರಡನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ. ಈ ಧಾರಾವಾಹಿ ಬಹುತೇಕ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಆದಾಗ್ಯೂ ಇದರ ಟಿಆರ್​ಪಿ ಕಡಿಮೆ ಆಗಿಲ್ಲ.

ಇದನ್ನೂ ಓದಿ: ‘ಒಂದು ವಾರ ಎಲ್ಲಿದ್ರಿ’; ಬಿಗ್ ಬಾಸ್ ಸ್ಪರ್ಧಿಗಳ ಪ್ರಶ್ನೆಗೆ ವರ್ತೂರು ಸಂತೋಷ್ ಉತ್ತರವೇನು?

ಮೂರನೇ ಸ್ಥಾನದಲ್ಲಿ ‘ಸತ್ಯ’, ನಾಲ್ಕನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’ ಹಾಗೂ ‘ಅಮೃತಧಾರೆ’ ಧಾರಾವಾಹಿಗಳು ಇವೆ. ಐದನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಇದೆ. ಟಾಪ್​ ಐದರಿಂದ ‘ಸೀತಾ ರಾಮ’ ಧಾರಾವಾಹಿ ಹೊರಗೆ ಉಳಿದಿದೆ. ಇದಕ್ಕೆ ಬಿಗ್ ಬಾಸ್ ಕಾರಣ ಎಂದು ಹೇಳಲಾಗುತ್ತಿದೆ.  ‘ಸೀತಾ ರಾಮ’ ರಾತ್ರಿ 9:30ಕ್ಕೆ ಪ್ರಸಾರ ಕಾಣುತ್ತದೆ. ಬಿಗ್ ಬಾಸ್ ಪ್ರಸಾರದ ಸಮಯ ಕೂಡ ಇದೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ