AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿಗೆ ಲೇವಡಿ ಮಾಡಿದ ಎಫೆಕ್ಟ್..! ಮಾಲ್ಡೀವ್ಸ್​ಗೆ 8000 ಹೋಟೆಲ್ ಬುಕಿಂಗ್ಸ್, 2500 ಫ್ಲೈಟ್ ಟಿಕೆಟ್ ರದ್ದು ಮಾಡಿದ ಭಾರತೀಯರು; ಆ ದೇಶದ ಪ್ರವಾಸೋದ್ಯಮ ಹೇಗಿದೆ?

Boycott Maldives Trending: ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಮಾಡಿದ ಫೋಟೋಶೂಟ್ ಬಗ್ಗೆ ಮಾಲ್ಡೀವ್ಸ್​ನ ಸಚಿವರು ಲೇವಡಿ ಮಾಡಿದ ಬಳಿಕ ಭಾರತೀಯರಿಂದ ಬಾಯ್ಕಾಟ್ ಟ್ರೆಂಡ್ ನಡೆದಿದೆ. ಮಾಲ್ಡೀವ್ಸ್​ಗೆ ಭಾರತೀಯರು 8,000 ಹೋಟೆಲ್ ಬುಕಿಂಗ್ಸ್ ಮತ್ತು 2,500 ಫ್ಲೈಟ್ ಟಿಕೆಟ್ ಬುಕಿಂಗ್​ಗಳನ್ನು ರದ್ದು ಮಾಡಿದ್ದಾರೆ. ಪ್ರವಾಸೋದ್ಯಮವು ಮಾಲ್ಡೀವ್ಸ್​ನ ಪ್ರಮುಖ ಆದಾಯವಾಗಿದೆ. ಅಲ್ಲಿನ ಸರ್ಕಾರದ ಶೇ. 40ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತದೆ.

ಮೋದಿಗೆ ಲೇವಡಿ ಮಾಡಿದ ಎಫೆಕ್ಟ್..! ಮಾಲ್ಡೀವ್ಸ್​ಗೆ 8000 ಹೋಟೆಲ್ ಬುಕಿಂಗ್ಸ್, 2500 ಫ್ಲೈಟ್ ಟಿಕೆಟ್ ರದ್ದು ಮಾಡಿದ ಭಾರತೀಯರು; ಆ ದೇಶದ ಪ್ರವಾಸೋದ್ಯಮ ಹೇಗಿದೆ?
ಮಾಲ್ಡೀವ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 07, 2024 | 5:20 PM

ನವದೆಹಲಿ, ಜನವರಿ 7: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಭೇಟಿ (Narendra Modi visit to Lakshadweep) ಬಗ್ಗೆ ಮಾಲ್ಡೀವ್ಸ್​ನ ಕಿರಿಯ ಸಚಿವೆ ಮಾರಿಯಂ ಶಿಯುನಾ (Mariyam Shiuna) ಲೇವಡಿ ಮಾಡಿದ ಘಟನೆ ಬೇರೆ ಸ್ವರೂಪ ಪಡೆದುಕೊಂಡಂತಿದೆ. ಈ ಬೆಳವಣಿಗೆ ಬೆನ್ನಲ್ಲೇ ಭಾರತೀಯರು ಮಾಲ್ಡೀವ್ಸ್ ಪ್ರವಾಸಕ್ಕೆಂದು ಮಾಡಿದ್ದ 8,000 ಹೋಟೆಲ್ ಬುಕಿಂಗ್ಸ್ ಮತ್ತು 2,500 ಫ್ಲೈಟ್ ಟಿಕೆಟ್​ಗಳನ್ನು ರದ್ದು ಮಾಡಿದ್ದಾರೆ. ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಎಂಬ ಅಭಿಯಾನ ಶುರುವಾಗಿದೆ. ಇದರ ಪರಿಣಾಮವಾಗಿ ಎಂಬಂತೆ ಹಲವು ಭಾರತೀಯರು ತಮ್ಮ ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿದ್ದಾರೆ.

ಈ ಬಾಯ್ಕಾಟ್ ಟ್ರೆಂಡ್ ಆರಂಭವಾಗುತ್ತಿದ್ದಂತೆಯೇ ಮಾಲ್ಡೀವ್ಸ್ ಸರ್ಕಾರ ಸ್ಪಷ್ಟನೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿದೇಶೀ ನಾಯಕರ ಮೇಲೆ ವ್ಯಕ್ತವಾಗುವ ಅಭಿಪ್ರಾಯಗಳು ಅವರ ವೈಯಕ್ತಿಕವಾದುದಾಗಿರುತ್ತವೆ. ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯ ಆಗಿರುವುದಿಲ್ಲ. ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುವುದಿಲ್ಲ, ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Boycott Maldives: ಪ್ರಧಾನಿ ಮೋದಿಯ ಲಕ್ಷದ್ವೀಪ ಭೇಟಿ ಲೇವಡಿ ಮಾಡಿದ ಮಾಲ್ಡೀವ್ಸ್​ ಸಚಿವ, ಭಾರತೀಯರು ಮಾಡಿದ್ದೇನು?

ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಲಕ್ಷದ್ವೀಪಕ್ಕೆ ಭೇಟಿ ನೀಡಿ ಸ್ನಾರ್​ಕೆಲಿಂಗ್ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿದ್ದರು. ಒಂದಷ್ಟು ಫೋಟೋಶೂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು. ಮಾಲ್ಡೀವ್ಸ್​​ಗೆ ಪರ್ಯಾಯವಾಗಿ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ದಿಗೊಳಿಸಲು ಸರ್ಕಾರದ ಗಮನ ಹರಿದಿರಬಹುದು ಎಂಬಂತೆ ಹಲವರು ವ್ಯಾಖ್ಯಾನಿಸಿದ್ದಾರೆ.

ಇದರ ಬೆನ್ನಲ್ಲೇ ಮಾಲ್ಡೀವ್ಸ್​ನ ಕೆಲ ಸಚಿವರು ಸೇರಿದಂತೆ ಬಹಳ ಮಂದಿ ನರೇಂದ್ರ ಮೋದಿಯ ಲಕ್ಷದ್ವೀಪ ಭೇಟಿ ಬಗ್ಗೆ ಅವಹೇಳನ ಮಾಡಿದ್ದಾರೆ. ಮಾಲ್ಡೀವ್ಸ್​ನ ಯುವ ಸಬಲೀಕರಣದ ಕಿರಿಯ ಸಚಿವೆ ಮಾರಿಯಮ್ ಶುಯುನಾ ಅವರು ನರೇಂದ್ರ ಮೋದಿಯನ್ನು ಕ್ಲೌನ್ (ವಿದೂಷಕ) ಎಂದು ಜರೆದಿದ್ದು ಮಾತ್ರವಲ್ಲ ಇಸ್ರೇಲ್​ನ ಕೈಗೊಂಬೆ ಎಂಬಂತೆ ಟೀಕಿಸಿದ್ದಾರೆ.

Boycott Maldives Trending: Indians Cancel More than 8,000 hotel bookings, 2,500 flight tickets

ಮಾಲ್ಡೀವ್ಸ್ ಸಚಿವೆ ಮಾರಿಯಂ ಶಿಯುನಾ ಮತ್ತು ನರೇಂದ್ರ ಮೋದಿ

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಸಚಿವರ ಅವಹೇಳನಕಾರಿ ಹೇಳಿಕೆ, ಈ ವಿಚಾರದಿಂದ ಅಂತರ ಕಾಯ್ದುಕೊಂಡ ಮಾಲ್ಡೀವ್ಸ್​ ಸರ್ಕಾರ

ಅಲ್ಲಿನ ಒಬ್ಬ ಸಂಸದ ಜಾಹೀದ್ ರಮೀಜ್ ಅವರು ಲಕ್ಷದ್ವೀಪವನ್ನು ಕೊಳೆಗೇರಿಗೆ ಹೋಲಿಸಿದ್ದಾರೆ. ‘ಲಕ್ಷದ್ವೀಪದ ಮೂಲಕ ಮಾಲ್ಡೀವ್ಸ್ ಎದುರು ಪ್ರವಾಸೋದ್ಯಮಕ್ಕೆ ಸ್ಪರ್ಧಿಸುತ್ತೇನೆಂದು ಭಾವಿಸುವುದು ಭ್ರಮೆ. ನಾವು ಕೊಡುವಂತಹ ಸೇವೆ ಅವರಿಗೆ ಕೊಡಲು ಆಗುತ್ತದಾ? ಇಷ್ಟು ಸ್ವಚ್ಛತೆ ಅವರಿಂದ ಸಾಧ್ಯವಾ? ರೂಮ್​ಗಳಲ್ಲಿ ಖಾಯಂ ಆಗಿ ದುರ್ವಾಸನೆ ಇರುತ್ತದೆ,’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ರಮೀಜ್ ಬರೆದಿದ್ದಾರೆ.

ಮಾಲ್ಡೀವ್ಸ್​ಗೆ ಪ್ರವಾಸೋದ್ಯಮ ಪ್ರಮುಖ ಆದಾಯ ಮೂಲ

ಮಾಲ್ಡೀವ್ಸ್ ದೇಶಕ್ಕೆ ಅದರ ಪ್ರವಾಸೋದ್ಯಮ ಪ್ರಮುಖ ಆದಾಯ ಮೂಲವಾಗಿದೆ. 2023ರ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಪ್ರವಾಸೋದ್ಯಮದಿಂದ ಬಂದ ಆದಾಯ 883.4 ಮಿಲಿಯನ್ ಡಾಲರ್ ಇದೆ. ಎಪತ್ತರ ದೇಶದಲ್ಲಿ ಮೂರು ಇದ್ದ ರೆಸಾರ್ಟ್​ಗಳ ಸಂಖ್ಯೆ ಈಗ 170ಕ್ಕೆ ಏರಿದೆ. ಅಲ್ಲಿನ ರೆಸಾರ್ಟ್​ಗಳನ್ನು ಬಹಳ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಮಾಲ್ಡೀವ್ಸ್​ನ ಜಿಡಿಪಿಗೆ ಪ್ರವಾಸೋದ್ಯಮದಿಂದ ಬರುವ ಕೊಡುಗೆ ಶೇ. 17ರಷ್ಟಿದೆ. ಸರ್ಕಾರ ಶೇ. 40ರಷ್ಟು ಆದಾಯ ತಂದುಕೊಡುತ್ತದೆ. ಸರ್ಕಾರ ಗಳಿಸುವ ಫಾರೀನ್ ಕರೆನ್ಸಿ ಆಸ್ತಿಯಲ್ಲಿ ಪ್ರವಾಸೋದ್ಯಮದಿಂದಲೇ ಶೇ. 70ರಷ್ಟು ಬರುತ್ತದೆ.

ಇದನ್ನೂ ಓದಿ: ರಾಜಸ್ಥಾನದ ಈ ನಗರಗಳಿಂದ ಅಯೋಧ್ಯೆಗೆ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಚಿಂತನೆ

ಮಾಲ್ಡೀವ್ಸ್​ನ ಪ್ರವಾಸಿಗರಲ್ಲಿ ಚೀನೀಯರ ಸಂಖ್ಯೆ ಹೆಚ್ಚು. ಅವರನ್ನು ಬಿಟ್ಟರೆ ಭಾರತೀಯ ಪ್ರವಾಸಿಗರೇ ಹೆಚ್ಚು ಬರುತ್ತಾರೆ. ಪ್ರವಾಸೋದ್ಯಮಕ್ಕೆ ಬರುವ ಆದಾಯದಲ್ಲಿ ಭಾರತೀಯರ ಕೊಡುಗೆ ಶೇ. 10ರಷ್ಟು ಇದೆ. ಹೀಗಾಗಿ, ಭಾರತೀಯರು ಬಾಯ್ಕಾಟ್ ಮಾಡಿದರೆ ಮಾಲ್ಡೀವ್ಸ್​ಗೆ ಒಂದಷ್ಟು ನಷ್ಟವಂತೂ ಖಚಿತ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ