ಒಂದೇ ಫ್ರೇಮ್​ನಲ್ಲಿ ಸೂರ್ಯ, ಅಮಿತಾಭ್​, ಅಕ್ಷಯ್​ ಕುಮಾರ್​; ಏನ್​ ಸಮಾಚಾರ?

81ನೇ ವಯಸ್ಸಿನಲ್ಲಿ ಕೂಡ ಅಮಿತಾಭ್​ ಬಚ್ಚನ್​ ಅವರು ಹದಿಹರೆಯದ ಯುವಕನಂತೆ ಆ್ಯಕ್ಟೀವ್​ ಆಗಿದ್ದಾರೆ. ಸೂರ್ಯ ಮತ್ತು ಅಕ್ಷಯ್​ ಕುಮಾರ್​ ಜೊತೆ ಅವರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಆ ಸಂದರ್ಭದ ಫೋಟೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್​ ಆಗಿದೆ.

ಒಂದೇ ಫ್ರೇಮ್​ನಲ್ಲಿ ಸೂರ್ಯ, ಅಮಿತಾಭ್​, ಅಕ್ಷಯ್​ ಕುಮಾರ್​; ಏನ್​ ಸಮಾಚಾರ?
ಅಮಿತಾಭ್​ ಬಚ್ಚನ್​, ಅಕ್ಷಯ್​ ಕುಮಾರ್​, ಸೂರ್ಯ
Follow us
ಮದನ್​ ಕುಮಾರ್​
|

Updated on:Jan 15, 2024 | 11:00 AM

ಬಾಲಿವುಡ್​ ನಟರಾದ ಅಮಿತಾಭ್​ ಬಚ್ಚನ್​, ಅಕ್ಷಯ್​ ಕುಮಾರ್​ ಹಾಗೂ ದಕ್ಷಿಣದ ಸ್ಟಾರ್​ ಕಲಾವಿದ ಸೂರ್ಯ (Suriya) ಅವರು ಒಂದೆಡೆ ಸೇರಿದ್ದಾರೆ. ಅವರು ಮೂವರು ಒಂದೇ ಫ್ರೇಮ್​ನಲ್ಲಿ ಇರುವ ಫೋಟೋ ವೈರಲ್​ ಆಗಿದೆ. ಈ ಫೋಟೋವನ್ನು ಸ್ವತಃ ಅಮಿತಾಭ್​ ಬಚ್ಚನ್​ (Amitabh Bachchan) ಅವರು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ತಕ್ಷಣ ಅಭಿಮಾನಿಗಳಿಗೆ ಖುಷಿ ಆಗಿದೆ. ಈ ಮೂವರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆದರೆ ಅಸಲಿ ವಿಚಾರ ಅದಲ್ಲ. ಒಂದು ಜಾಹೀರಾತಿನ ಸಲುವಾಗಿ ಅಮಿತಾಭ್​ ಬಚ್ಚನ್​, ಸೂರ್ಯ ಮತ್ತು ಅಕ್ಷಯ್​ ಕುಮಾರ್​ (Akshay Kumar) ಅವರು ಒಂದೆಡೆ ಸೇರಿದ್ದಾರೆ.

‘ಇಂಡಿಯನ್​ ಸ್ಟ್ರೀಟ್​ ಪ್ರೀಮಿಯರ್​ ಲೀಗ್​’ ಶೀಘ್ರದಲ್ಲೇ ಆರಂಭ ಆಗಲಿದೆ. ಇದರಲ್ಲಿ ಆಟ ಆಡಲಿರುವ ತಂಡಗಳ ಮಾಲಿಕತ್ವವನ್ನು ಸೆಲೆಬ್ರಿಟಿಗಳು ಪಡೆದುಕೊಂಡಿದ್ದಾರೆ. ಆ ಕಾರಣದಿಂದ ಅಕ್ಷಯ್​ ಕುಮಾರ್​, ಅಮಿತಾಭ್​ ಬಚ್ಚನ್​, ಸೂರ್ಯ ಮುಂತಾದ ನಟರು ಇದರ ಜಾಹೀರಾತಿನಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್​ ನಟ ಹೃತಿಕ್ ರೋಷನ್​ ಕೂಡ ಇದರ ಜಾಹೀರಾತು ಶೂಟಿಂಗ್​ಗೆ ಬಂದಿದ್ದರು. ಆದರೆ ಗ್ರೂಪ್​ ಫೋಟೋ ತೆಗೆದುಕೊಳ್ಳುವುದಕ್ಕೂ ಮುನ್ನ ಹೃತಿಕ್​ ರೋಷನ್​ ಅವರು ಬೇರೆ ಕೆಲಸದ ಸಲುವಾಗಿ ಅಲ್ಲಿಂದ ಹೊರಟು ಹೋದರು.

ಅಕ್ಷಯ್​ ಕುಮಾರ್​ ಮತ್ತು ಸೂರ್ಯ ಜೊತೆ ಫೋಟೋ ತೆಗೆದುಕೊಂಡಿದ್ದು ಅಮಿತಾಭ್​ ಬಚ್ಚನ್​ ಅವರಿಗೆ ಖುಷಿ ನೀಡಿದೆ. ‘ಹೃತಿಕ್ ರೋಷನ್​ ಬೇಗ ಈ ಶೂಟಿಂಗ್​ ಮುಗಿಸಿ ಹೊರಟುಹೋದರು. ನಾನು ನಮ್ಮ ಚಿತ್ರೀಕರಣಕ್ಕೆ ಸಿದ್ಧವಾದೆವು. ದಕ್ಷಿಣ ಭಾರತದ ನಟ ಸೂರ್ಯ ಅವರನ್ನು ಭೇಟಿಯಾಗಿದ್ದಕ್ಕೆ ಸಂತೋಷ ಆಗಿದೆ’ ಎಂದು ಅವರು ಹೇಳಿದ್ದಾರೆ. ಅಲ್ಲದೇ ಸೂರ್ಯ ಅವರ ಸಿನಿಮಾ ಮತ್ತು ಹಾಡುಗಳನ್ನು ಕೂಡ ಅಮಿತಾಭ್​ ಬಚ್ಚನ್​ ಹೊಗಳಿದ್ದಾರೆ.

ಇದನ್ನೂ ಓದಿ: ‘ನನ್ನ ಗುರು ಜೊತೆ ಮತ್ತೆ ಕೆಲಸ ಮಾಡುತ್ತಿದ್ದೇನೆ’: ಅಮಿತಾಭ್​ ಬಗ್ಗೆ ರಜನಿಕಾಂತ್​ ಗೌರವದ ಮಾತು

ಅಮಿತಾಭ್​ ಬಚ್ಚನ್​ ಅವರ ಕೈಗೆ ಗಾಯ ಆಗಿದೆ. ಕೈಗೆ ಬ್ಯಾಂಡೇಜ್​ ಹಾಕಿಕೊಂಡೇ ಅವರು ‘ಕೌನ್​ ಬನೇಗ ಕರೋಡ್​ಪತಿ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈಗ ‘ಇಂಡಿಯನ್​ ಸ್ಟ್ರೀಟ್​ ಪ್ರೀಮಿಯರ್​ ಲೀಗ್​’ ಜಾಹೀರಾತು ಶೂಟಿಂಗ್​ಗೂ ಅವರು ಬ್ಯಾಂಡೇಜ್​ ಹಾಕಿಕೊಂಡು ಬಂದಿದ್ದಾರೆ. ತಮ್ಮ ಕೈಗೆ ಏನಾಗಿದೆ ಎಂಬುದನ್ನು ಅವರು ಅಕ್ಷಯ್​ ಕುಮಾರ್​ಗೆ ವಿವರಿಸಿದ್ದಾರೆ. ಆ ಸಂದರ್ಭದ ಫೋಟೋವನ್ನು ಅವರು ತಮ್ಮ ಬ್ಲಾಗ್​ನಲ್ಲಿ ಹಂಚಿಕೊಂಡಿದ್ದಾರೆ. 81ನೇ ವಯಸ್ಸಿನಲ್ಲಿ ಕೂಡ ಅಮಿತಾಭ್​ ಬಚ್ಚನ್​ ಅವರು ಹದಿಹರೆಯದ ಯುವಕನಂತೆ ಆ್ಯಕ್ಟೀವ್​ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:43 am, Mon, 15 January 24

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್