‘ಮಕ್ಕಳಿಗೆ ಒಳ್ಳೆಯದನ್ನು ಕಲಿಸಿ’; ಮಗ ಮಾಡಿದ ತಪ್ಪಿಗೆ ಕರೀನಾಗೆ ಕ್ಲಾಸ್

ಕಳೆದ ಕೆಲವು ವರ್ಷಗಳಲ್ಲಿ ಪಾಪರಾಜಿ ಸಂಸ್ಕೃತಿ ಸಾಕಷ್ಟು ಬೆಳೆದು ನಿಂತಿದೆ. ಜಿಮ್, ರೆಸ್ಟೋರೆಂಟ್ ಮುಂತಾದ ಸ್ಥಳಗಳಲ್ಲಿ ಸೆಲೆಬ್ರಿಟಿಗಳನ್ನು ಪಾಪರಾಜಿಗಳು ಅನುಸರಿಸುತ್ತಾರೆ. ಇದರಿಂದ ಅವರಿಗೆ ಕಿರಿಕಿರಿ ಆದ ಉದಾಹರಣೆ ಇದೆ. ಈಗ ಇದಕ್ಕೆ ಹೊಸ ಉದಾಹರಣೆ ಕರೀನಾ ಕಪೂರ್. ಮಗ ಮಾಡಿದ ತಪ್ಪಿಗೆ ಅವರಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ.

‘ಮಕ್ಕಳಿಗೆ ಒಳ್ಳೆಯದನ್ನು ಕಲಿಸಿ’; ಮಗ ಮಾಡಿದ ತಪ್ಪಿಗೆ ಕರೀನಾಗೆ ಕ್ಲಾಸ್
ಕರೀನಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 31, 2024 | 12:15 PM

ಕಳೆದ ಕೆಲವು ವರ್ಷಗಳಲ್ಲಿ ಪಾಪರಾಜಿ ಸಂಸ್ಕೃತಿ ಸಾಕಷ್ಟು ಬೆಳೆದಿದೆ. ಇದರಿಂದ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ಎಲ್ಲೇ ಹೋದರೂ ಕ್ಯಾಮೆರಾ ಕಣ್ಣಿಗೆ ಬೀಳುತ್ತಾರೆ. ಜಿಮ್, ಮಾರ್ಕೆಟ್, ರೆಸ್ಟೋರೆಂಟ್ ಮುಂತಾದ ಸ್ಥಳಗಳಲ್ಲಿ ಸೆಲೆಬ್ರಿಟಿಗಳನ್ನು ಪಾಪರಾಜಿಗಳು ಅನುಸರಿಸುತ್ತಾರೆ. ಅವರ ವೀಡಿಯೊಗಳು ಹಾಗೂ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಾರೆ. ಇದರಿಂದ ಅನೇಕ ಸೆಲೆಬ್ರಿಟಿಗಳು ಟ್ರೋಲ್​ಗೆ ಒಳಗಾಗಿದ್ದಿದೆ. ನಟಿ ಕರೀನಾ ಕಪೂರ್ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಕರೀನಾ (Kareena Kapoor) ಇತ್ತೀಚೆಗೆ ತನ್ನ ಇಬ್ಬರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ನೆಟ್ಟಿಗರು ಅವರ ಪುಟ್ಟ ಮಗ ಜೆಹ್‌ನ ವರ್ತನೆಯನ್ನು ಇಷ್ಟಪಡಲಿಲ್ಲ. ಹೀಗಾಗಿ ಕರೀನಾ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಪಾಪರಾಜಿ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ಕರೀನಾ ತನ್ನ ಇಬ್ಬರು ಮಕ್ಕಳೊಂದಿಗೆ ಕಾರಿನಿಂದ ಇಳಿಯುತ್ತಿರುವುದು ಕಾಣಿಸಿದೆ. ಒಂದು ಕಡೆ ಜೆಹ್ ಇದ್ದರೆ ಆತನ ಹಿಂದಿನಿಂದ ತೈಮೂರ್ ಹೋಗುತ್ತಿದ್ದಾನೆ. ಈ ವೇಳೆ ಜೆಹ್ ಕೋಪಗೊಂಡಿದ್ದಾನೆ. ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಕಾಗದದ ಮುದ್ದೆಯನ್ನು ನೆಲದ ಮೇಲೆ ಎಸೆದಿದ್ದಾನೆ. ನಂತರ ಅದನ್ನು ಅಲ್ಲಿಯೇ ಬಿಟ್ಟು ಒಳಗೆ ಹೋಗಿದ್ದಾನೆ. ಅವನ ಹಿಂದೆ ನಿಂತ ಕರೀನಾ ಇದನ್ನು ನೋಡುತ್ತಾರೆ, ಆದರೆ ಮಗನಿಗೆ ಏನನ್ನೂ ಹೇಳಲಿಲ್ಲ. ಇವರ ಜೊತೆ ಬಂದ ಸಹಾಯಕಿ ಕಾಗದದ ಬಂಡಲ್ ಅನ್ನು ಎತ್ತಿಕೊಳ್ಳುತ್ತಾರೆ. ಆಗಲೂ ಕರೀನಾ ಏನನ್ನೂ ಹೇಳುವುದಿಲ್ಲ. ಹೀಗಾಗಿ ಮಕ್ಕಳಿಗೆ ಶಿಸ್ತು ಕಲಿಸಲು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕರೀನಾ ಕಪೂರ್ ತಮ್ಮ ಕೂದಲ ಆರೈಕೆಗೆ ಏನು ಬಳಸುತ್ತಾರೆ ಗೊತ್ತಾ?

‘ಇವಳು ಯಾವ ತಾಯಿ? ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸುವುದಿಲ್ಲ. ಆ ಪೇಪರ್ ಎತ್ತಲು ಮಗನಿಗೆ ಹೇಳಬೇಕಿತ್ತು’ ಎಂದು ಒಬ್ಬರು ಬರೆದಿದ್ದಾರೆ. ‘ನಡವಳಿಕೆಗಳು ದೈನಂದಿನ ಅಭ್ಯಾಸಗಳ ಭಾಗವಾಗಿರಬೇಕು ಮತ್ತು ಮಕ್ಕಳಿಗೆ ಕಲಿಸಬೇಕು. ಈ ಶಿಷ್ಟಾಚಾರ ಗೊತ್ತಿಲ್ಲದ ಮೂವರನ್ನು ಈ ವಿಡಿಯೋದಲ್ಲಿ ನೋಡುತ್ತಿದ್ದೇನೆ’ ಎಂದು ಮತ್ತೊಬ್ಬ ಹೇಳಿದ್ದಾರೆ. ಇದರಲ್ಲಿ ಕೆಲವರು ಜೆಹ್ ಅವರ ಪರ ನಿಂತಿದ್ದಾರೆ. ‘ಮಕ್ಕಳ ಮನಸ್ಥಿತಿ ನಿರಂತರವಾಗಿ ಬದಲಾಗುತ್ತಿರುತ್ತದೆ. ಅವನು ಬೆಳೆದಂತೆ, ಅವನು ಕಲಿಯುತ್ತಾನೆ. ಚಿಕ್ಕ ಮಕ್ಕಳ ಬಗ್ಗೆ ಇಂತಹ ಅಭಿಪ್ರಾಯಗಳನ್ನು ಹೇಳಬೇಡಿ’ ಎಂದು ಕೆಲವರು ಹೇಳಿದ್ದಾರೆ.

View this post on Instagram

A post shared by Voompla (@voompla)

ಕರೀನಾ ಮತ್ತು ಸೈಫ್ ಮದುವೆಯಾಗಿ ದಶಕಗಳ ಮೇಲಾಗಿದೆ. ಅವರಿಬ್ಬರೂ 16 ಅಕ್ಟೋಬರ್ 2012ರಂದು ವಿವಾಹವಾದರು. ನಂತರ 2016ರಲ್ಲಿ ಕರೀನಾ ತೈಮೂರ್‌ಗೆ ಜನ್ಮ ನೀಡಿದ್ದರು. ಫೆಬ್ರವರಿ 2021ರಲ್ಲಿ, ಕರೀನಾ ಎರಡನೇ ಬಾರಿಗೆ ತಾಯಿಯಾದರು. ಅವರ ಪುಟ್ಟ ಮಗನ ಹೆಸರು ಜೆಹ್. ಈ ದಂಪತಿ ಮಕ್ಕಳ ಜೊತೆ ಆಗಾಗ ವಿದೇಶಕ್ಕೆ ತೆರಳುತ್ತಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಕರೀನಾ ಸಖತ್ ಚ್ಯೂಸಿ ಆಗಿದ್ದಾರೆ. ಅವರು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ನಾಯಕಿ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:09 pm, Wed, 31 January 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್