‘ಸಾವರ್ಕರ್’ ಸಿನಿಮಾ ಪ್ರೋಮೋ ಬಿಡುಗಡೆ, ನಾಯಕಿ ಬಿಗ್​ಬಾಸ್ ಚೆಲುವೆ

Vinayak Damodar savarkar: ಸಾವರ್ಕರ್ ಸ್ವಾತಂತ್ರ್ಯ ವೀರ ಸೇನಾನಿಯೋ ಅಥವಾ ಹೇಡಿಯೋ ಎಂಬ ಬಗ್ಗೆ ಬಿಜೆಪಿ-ಕಾಂಗ್ರೆಸ್ ನಡುವೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಸಾರ್ವಕರ್ ಜೀವನ ಕುರಿತ ಸಿನಿಮಾದ ಪ್ರೋಮೋ ಬಿಡುಗಡೆ ಆಗಿದೆ.

‘ಸಾವರ್ಕರ್’ ಸಿನಿಮಾ ಪ್ರೋಮೋ ಬಿಡುಗಡೆ, ನಾಯಕಿ ಬಿಗ್​ಬಾಸ್ ಚೆಲುವೆ
Follow us
ಮಂಜುನಾಥ ಸಿ.
|

Updated on: Jan 30, 2024 | 11:33 PM

‘ವಿನಾಯಕ ದಾಮೋದರ್ ಸಾವರ್ಕರ್’ ಕೆಲವರಿಗೆ ಹೀರೋ, ಕೆಲವರಿಗೆ ಹೇಡಿ. ಸಾವರ್ಕರ್ (Savarkar) ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವವರ ಸಂಖ್ಯೆ ಹಿಂದಿಗಿಂತಲೂ ಹೆಚ್ಚಿದೆ. ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಸಾವರ್ಕರ್ ಕುರಿತಾಗಿ ಆದಷ್ಟು ಚರ್ಚೆ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಆಗಿರುವುದು ಅನುಮಾನ. ಏನೇ ಆಗಲಿ, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ. ಇದೀಗ ಅವರ ಹೆಸರಿನಲ್ಲಿ ಸಿನಿಮಾ ಸೆಟ್ಟೇರಿದೆ. ಸರಣಿ ಬಯೋಪಿಕ್​ಗಳನ್ನು ಮಾಡುತ್ತಲೇ ಬರುತ್ತಿರುವ ಹಿಂದಿ ಚಿತ್ರರಂಗ ಸಾರ್ವಕರ್ ಜೀವನವನ್ನು ತೆರೆಗೆ ತರಲು ಸಜ್ಜಾಗಿದೆ.

ಕಳೆದ ಕೆಲ ತಿಂಗಳಿನಿಂದಲೂ ಸಾರ್ವಕರ್ ಕುರಿತ ಸಿನಿಮಾ ಚರ್ಚೆ ಚಾಲ್ತಿಯಲ್ಲಿತ್ತು. ಇಂದು (ಜನವರಿ 30) ಮಹಾತ್ಮಾ ಗಾಂಧಿಯವರ ನಿಧನ ದಿನದಂದು ‘ಸ್ವತಂತ್ರ್ಯ ವೀರ್ ಸಾರ್ವಕರ್’ ಸಿನಿಮಾ ಘೋಷಣೆ ಮಾಡಲಾಗಿದೆ. ಪ್ರೋಮೋನಲ್ಲಿಯೂ ಗಾಂಧಿ ಅವರ ಉಲ್ಲೇಖವಿದೆ. ‘ಸ್ವಾತಂತ್ರ್ಯ ಹೋರಾಟದ ಇಬ್ಬರು ನಾಯಕರು. ಒಬ್ಬರನ್ನು ಮೆರೆಸಲಾಯಿತು, ಇನ್ನೊಬ್ಬರನ್ನು ಇತಿಹಾಸದಿಂದಲೇ ಕಿತ್ತೊಗೆಯಲಾಯಿತು’ ಎಂಬ ಒಕ್ಕಣೆಯೊಟ್ಟಿಗೆ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಪ್ರೋಮೋನಲ್ಲಿ ಸಹ ಮೊದಲಿಗೆ ಗಾಂಧಿಯವರ ರೇಖಾಚಿತ್ರ ಮೂಡುತ್ತದೆ. ಅದೇ ಚಿತ್ರದಿಂದ ಸಾರ್ವಕರ್ ಚಿತ್ರ ಒಡೆದು ಮುಂದೆ ಬರುತ್ತದೆ. ಹೀಗೊಂದು ಪ್ರೋಮೋವನ್ನು ಚಿತ್ರತಂಡ ಹಂಚಿಕೊಂಡಿದೆ. ಪ್ರೋಮೋನಲ್ಲಿ ‘ನನಗೆ ಗಾಂಧಿಯ ಮೇಲೆ ದ್ವೇಷವಿಲ್ಲ, ಅಹಿಂಸೆಯ ಮೇಲೆ ಕೋಪವಿದೆ’ ಎಂಬ ಡೈಲಾಗ್ ಸಹ ಇದೆ.

ಇದನ್ನೂ ಓದಿ:ಸಾವರ್ಕರ್ ವಿಚಾರದಲ್ಲಿ ಸ್ಪೀಕರ್ ಯುಟಿ ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಎಸ್​ಡಿಪಿಐ ಮುಖಂಡ ಅರೆಸ್ಟ್

ಸಾರ್ವಕರ್ ಪಾತ್ರದಲ್ಲಿ ರಣ್​ದೀಪ್ ಹೂಡ ನಟಿಸಿದ್ದಾರೆ. ಅವರ ಲುಕ್ ಝಲಕ್ ಅನ್ನು ಪ್ರೋಮೋನಲ್ಲಿ ನೀಡಲಾಗಿದ್ದು, ಸಾವರ್ಕರ್ ಪಾತ್ರಕ್ಕೆ ಸೂಕ್ತವಾಗಿ ಒಪ್ಪಿದ್ದಾರೆ. ಸಿನಿಮಾಕ್ಕೆ ನಾಯಕಿಯಾಗಿ ಬಿಗ್​ಬಾಸ್ ಚೆಲುವೆ ಅಂಕಿತಾ ಲೋಕಂಡೆಯನ್ನು ಆಯ್ಕೆ ಮಾಡಲಾಗಿದೆ. ಬಿಗ್​ಬಾಸ್ ಹಿಂದಿ ಸೀಸನ್ 17ರಲ್ಲಿ ಪಾಲ್ಗೊಂಡು ಫಿನಾಲೆ ದಿನ ಎಲಿಮಿನೇಟ್ ಆಗಿ ಹೊರಬಂದ ಅಂಕಿತಾ, ಸಾರ್ವಕರ್ ಸಿನಿಮಾಕ್ಕೆ ನಾಯಕಿ.

‘ಸ್ವತಂತ್ರ್ಯ ವೀರ್ ಸಾರ್ವಕರ್’ ಸಿನಿಮಾ ಕೆಲ ದಿನಗಳ ಹಿಂದೆ ಘೋಷಣೆಯಾಗಿತ್ತು, ಆರಂಭದಲ್ಲಿ ಈ ಸಿನಿಮಾವನ್ನು ಮಹೇಶ್ ಮಂಜ್ರೇಕರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದ ಸಿನಿಮಾದಿಂದ ಅವರು ಹೊರಗೆ ಉಳಿದಿದ್ದು, ನಟ ರಣ್​ದೀಪ್ ಹೂಡಾ ಅವರೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಮಾರ್ಚ್ 22ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್