ದುಬೈ ಬುರ್ಜ್ ಖಲೀಫಾ ಮೇಲೆ ಸಿಸಿಎಲ್ ಪ್ರೋಮೋ; ಇತರ ಸ್ಟಾರ್ಸ್ ಜೊತೆ ಪೋಸ್​ ಕೊಟ್ಟ ಸುದೀಪ್   

ಪ್ರೋಮೋ ಬಿಡುಗಡೆ ವೇಳೆ ಕಿಚ್ಚ ಸುದೀಪ್ ಹೈಲೈಟ್ ಆಗಿದ್ದಾರೆ. ತೆಲುಗು ನಟ ಸುಧೀರ್ ಬಾಬು, ಬೆಂಗಾಲಿ ನಟ ಜಿಸ್ಸು ಸೇನ್‌ಗುಪ್ತಾ, ಸೋನು ಸೂದ್, ಮಲಯಾಳಂ ಚಿತ್ರರಂಗದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ ಸಿಸಿಎಲ್​ನ ಎಂಟೂ ತಂಡಗಳ ನಾಯಕರು, ಆಟಗಾರರು ಪೋಸ್ ಕೊಟ್ಟಿದ್ದಾರೆ.  

ದುಬೈ ಬುರ್ಜ್ ಖಲೀಫಾ ಮೇಲೆ ಸಿಸಿಎಲ್ ಪ್ರೋಮೋ; ಇತರ ಸ್ಟಾರ್ಸ್ ಜೊತೆ ಪೋಸ್​ ಕೊಟ್ಟ ಸುದೀಪ್   
ಸಿಸಿಎಲ್ ಟೀಂ
Follow us
ರಾಜೇಶ್ ದುಗ್ಗುಮನೆ
|

Updated on:Feb 03, 2024 | 11:08 AM

ಸಿನಿಮಾ ರಂಗಕ್ಕೂ ಕ್ರಿಕೆಟ್ ಲೋಕಕ್ಕೂ  ಒಳ್ಳೆಯ ಕನೆಕ್ಷನ್ ಇದೆ. ಈಗ ಭಾರತದ ವಿವಿಧ ಚಿತ್ರರಂಗದ ಪ್ರಮುಖ ಸೆಲೆಬ್ರಿಟಿಗಳು ಕ್ರಿಕೆಟ್ ಆಡಲು ರೆಡಿ ಆಗಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ (ಸಿಸಿಎಲ್) 10ನೇ ಆವೃತ್ತಿಗೆ ದಿನಗಣನೆ ಆರಂಭ ಆಗಿದೆ. ಫೆಬ್ರವರಿ 23ರಂದು ಸಿಸಿಎಲ್​ಗೆ ಚಾಲನೆ ಸಿಗಲಿದೆ. ಇದರ ಪ್ರೋಮೋ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ರಿಲೀಸ್ ಮಾಡಲಾಗಿದೆ. ಕಿಚ್ಚ ಸುದೀಪ್ (Kichcha Sudeep)​, ಬಾಲಿವುಡ್ ನಟ ಸೊಹೈಲ್ ಖಾನ್, ತಮಿಳು ನಟ ಆರ್ಯ ಮೊದಲಾದವರು ಪೋಸ್​ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಪ್ರೋಮೋ ರಿಲೀಸ್ ವೇಳೆ ಕಿಚ್ಚ ಸುದೀಪ್ ಹೈಲೈಟ್ ಆಗಿದ್ದಾರೆ. ತೆಲುಗು ನಟ ಸುಧೀರ್ ಬಾಬು, ಬೆಂಗಾಲಿ ನಟ ಜಿಸ್ಸು ಸೇನ್‌ಗುಪ್ತಾ, ಸೋನು ಸೂದ್, ಮಲಯಾಳಂ ಚಿತ್ರರಂಗದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ ಸಿಸಿಎಲ್​ನ ಎಂಟೂ ತಂಡಗಳ ನಾಯಕರು, ಆಟಗಾರರು ಪೋಸ್ ಕೊಟ್ಟಿದ್ದಾರೆ.

ಈ ಮೊದಲು ಕಿಚ್ಚ ಸುದೀಪ್ ಅವರ ಸಿನಿಮಾ ಪೋಸ್ಟರ್ ಬುರ್ಜ್ ಖಲೀಫಾದಲ್ಲಿ ರಿಲೀಸ್ ಆಗಿತ್ತು. ಈಗ ಅವರು ಕ್ರಿಕೆಟ್ ಕಾರಣಕ್ಕೆ ಮತ್ತೆ ಇಲ್ಲಿಗೆ ಭೇಟಿ ನೀಡಿದ್ದಾರೆ. ಇದರಿಂದ ಅವರ ಸಂತಸ ಹೆಚ್ಚಿದೆ. ಫೆಬ್ರವರಿ 23ರಂದು ಸಿಸಿಎಲ್ ಆರಂಭ ಆಗಲಿದೆ. ಮಾರ್ಚ್ 17ರವರೆಗೆ ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ  16 ಪಂದ್ಯಗಳು ನಡೆಯಲಿವೆ. ಮಾರ್ಚ್ 10ರವರೆಗೆ ಲೀಗ್ ಪಂದ್ಯಗಳು ಇರಲಿವೆ. ಮೊದಲ ಪಂದ್ಯ ಯುಎಇಯ ಶಾರ್ಜಾದಲ್ಲಿ ನಡೆಯಲಿದೆ. ಮೊದಲ ಪಂದ್ಯ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ಮಧ್ಯೆ ನಡೆಯಲಿದೆ.

ಇದನ್ನೂ ಓದಿ: ಬಿಗ್​ಬಾಸ್ 10 ಸ್ಪರ್ಧಿಗಳೊಟ್ಟಿಗೆ ಕಿಚ್ಚ ಸುದೀಪ್ ಪಾರ್ಟಿ: ಇಲ್ಲಿವೆ ಚಿತ್ರಗಳು

ಜಿಯೋ ಸಿನಿಮಾದಲ್ಲಿ ಈ ಬಾರಿಯ ಸಿಸಿಎಲ್ ಪ್ರಸಾರ ಕಾಣಲಿದೆ. ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಪಂದ್ಯ ನಡೆಯಲಿದೆ. ಬೆಂಗಳೂರು, ಹೈದರಾಬಾದ್, ಚಂಡೀಗಢ, ತಿರುವನಂತಪುರ ಮತ್ತು ವಿಶಾಖಪಟ್ಟಣದಲ್ಲಿ ಮ್ಯಾಚ್​ಗಳನ್ನು ಆಯೋಜನೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ಮಾತ್ರ ಪಂದ್ಯಗಳು ನಡೆಯಲಿವೆ

ತಂಡಗಳ ಹೆಸರು..

 ಕರ್ನಾಟಕ ಬುಲ್ಡೋಜರ್ಸ್

ಮುಂಬೈ ಹೀರೋಸ್

ಕೇರಳ ಸ್ಟ್ರೈಕರ್ಸ್

ತೆಲುಗು ವಾರಿಯರ್ಸ್

ಬೆಂಗಾಲ್ ಟೈಗರ್ಸ್

ಭೋಜ್ಪುರಿ ದಬಾಂಗ್ಸ್

ಚೆನ್ನೈ ರೈನೋಸ್

ಪಂಜಾಬ್ ದಿ ಶೇರ್

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:40 am, Sat, 3 February 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ