ಪೂನಂ ಪಾಂಡೆ ಸಾವಿನ ವಿಚಾರದಲ್ಲಿ ಸುಳ್ಳು ಹೇಳಿದ್ರಾ ಮ್ಯಾನೇಜರ್? ಅಲ್ಲಿ ಆಗಿದ್ದೇ ಬೇರೆ..

ಪೂನಂ ಪಾಂಡೆ ಅವರು ಫೆಬ್ರವರಿ 1ರ ತಡರಾತ್ರಿ ಏಕಾಏಕಿ ಪ್ರಜ್ಞೆತಪ್ಪಿ ಬಿದ್ದರು. ನಂತರ ಮೃತಪಟ್ಟರು. ಅವರಿಗೆ ಗರ್ಭಕಂಠ ಕ್ಯಾನ್ಸರ್ ಇತ್ತು ಎಂದು ಪಾರುಲ್ ಚಾವ್ಲಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ಪೂನಂ ಸಾವಿನ ವಿಚಾರದಲ್ಲಿ ಅವರು ಸುಳ್ಳು ಹೇಳಿರಬಹುದು ಎಂದು ಊಹಿಸಲಾಗುತ್ತಿದೆ.

ಪೂನಂ ಪಾಂಡೆ ಸಾವಿನ ವಿಚಾರದಲ್ಲಿ ಸುಳ್ಳು ಹೇಳಿದ್ರಾ ಮ್ಯಾನೇಜರ್? ಅಲ್ಲಿ ಆಗಿದ್ದೇ ಬೇರೆ..
ಪೂನಂ
Follow us
ರಾಜೇಶ್ ದುಗ್ಗುಮನೆ
|

Updated on:Feb 03, 2024 | 12:02 PM

ಪೂನಂ ಪಾಂಡೆ (Poonam Pandey) ಸಾವಿನ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕೆಲವರು ಅವರ ಸಾವು ಸುಳ್ಳು ಎಂದು ಹೇಳಿದರೆ ಇನ್ನೂ ಕೆಲವರು ಅವರು ಸತ್ತಿದ್ದು ನಿಜ ಎನ್ನುತ್ತಿದ್ದಾರೆ. ಮ್ಯಾನೇಜರ್ ಪಾರುಲ್ ಚಾವ್ಲಾ ಅವರು ಪೂನಂ ಮೃತಪಟ್ಟಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಎಂದು ಹೇಳಿದ್ದರು. ಆದರೆ, ಈಗ ಬೇರೆಯದೇ ಸುದ್ದಿ ಕೇಳಿ ಬರುತ್ತಿದೆ. ಪೂನಂ ಸತ್ತಿದ್ದು ಉತ್ತರ ಪ್ರದೇಶದಲ್ಲಿ ಅಲ್ಲವೇ ಅಲ್ಲವಂತೆ. ಅವರು ಮೃತಪಟ್ಟಿದ್ದು ಪುಣೆಯಲ್ಲಿ ಎಂದು ಹೇಳಲಾಗುತ್ತಿದೆ.

ಫೆಬ್ರವರಿ 1ರ ತಡರಾತ್ರಿ ಪೂನಂ ಅವರು ಏಕಾಏಕಿ ಪ್ರಜ್ಞೆತಪ್ಪಿ ಬಿದ್ದರು. ಅವರಿಗೆ ಗರ್ಭಕಂಠ ಕ್ಯಾನ್ಸರ್ ಇತ್ತು ಎಂದು ಪಾರುಲ್ ಚಾವ್ಲಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ಪೂನಂ ಸಾವಿನ ವಿಚಾರದಲ್ಲಿ ಅವರು ಸುಳ್ಳು ಹೇಳಿರಬಹುದು ಎಂದು ಊಹಿಸಲಾಗುತ್ತಿದೆ. ‘ಲಾಕಪ್’ ಶೋನಲ್ಲಿ ಪೂನಂ ಜೊತೆ ಸ್ಪರ್ಧಿಸಿದ್ದ ಶಿವಂ ಶರ್ಮಾ ಅವರು ಬೇರೆಯದೇ ಹೇಳಿಕೆ ನೀಡಿದ್ದಾರೆ. ಪೂನಂ ಶವ ಪುಣೆಯಲ್ಲಿದೆ ಎಂದು ಹೇಳಿದ್ದಾರೆ.

ಶಿವಂ ಶರ್ಮಾ ಅವರು ಪೂನಂ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ‘ನಾವು ಸಾಕಷ್ಟು ಸಮಯ ಒಟ್ಟಿಗೆ ಕಳೆದಿದ್ದೆವೆ. ನನ್ನ ಕಣ್ಮುಂದೆ ಆ ನೆನಪುಗಳು ಹಾದು ಹೋದವು. ಅವರ ಸಾವಿಗೆ ಕ್ಯಾನ್ಸರ್ ಕಾರಣ ಎಂಬುದನ್ನು ನಂಬೋಕೆ ಆಗುತ್ತಿಲ್ಲ. ಕ್ಯಾನ್ಸರ್​ನಿಂದ ಏಕಾಏಕಿ ಸತ್ತವರ ಬಗ್ಗೆ ನಾನು ಕೇಳಿಲ್ಲ. ಅವರಿಗೆ ಕ್ಯಾನ್ಸರ್​ನ ಯಾವುದೇ ಲಕ್ಷಣ ಇರಲಿಲ್ಲ. ಇದರ ಬಗ್ಗೆ ಅವರು ಹೇಳಿಕೊಂಡಿರಲಿಲ್ಲ’ ಎಂದಿದ್ದಾರೆ ಶಿವಂ.

‘ಪೂನಂ ಶವ ಪುಣೆಯಲ್ಲೇ ಇದೆ ಎಂದು ನನ್ನ ಗೆಳೆಯನೋರ್ವ ಹೇಳಿದ್ದಾನೆ. ಅವರ ಕುಟುಂಬ ಕಾನ್ಪುರದಲ್ಲಿದೆ. ಅವರ ಕುಟುಂಬದವರು ಅಂತ್ಯ ಸಂಸ್ಕಾರಕ್ಕೆ ಯಾವ ರೀತಿಯಲ್ಲಿ ಪ್ಲ್ಯಾನ್ ಮಾಡಿಕೊಂಡಿವೆ ಅನ್ನೋದು ಗೊತ್ತಿಲ್ಲ. ಅವರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ನಾನು ಕೋರಿಕೊಳ್ಳುತ್ತೇನೆ’ ಎಂದು ಶಿವಂ ಹೇಳಿದ್ದಾರೆ.

ಇದನ್ನೂ ಓದಿ: ‘ಎಲ್ಲರಿಗೂ ಶಾಕಿಂಗ್ ನ್ಯೂಸ್ ಕೊಡ್ತಿನೀ’ ಎಂದಿದ್ದ ನಟಿ ಪೂನಂ ಪಾಂಡೆ

ಶಿವಂ ಅವರ ಹೇಳಿಕೆಯಿಂದ ಸಾಕಷ್ಟು ಗೊಂದಲ ಮೂಡಿದೆ. ಪೂನಂ ಮ್ಯಾನೇಜರ್ ಹೇಳಿದ್ದು ನಿಜವೋ ಅಥವಾ ಶಿವಂ ಹೇಳುತ್ತಿರುವುದು ನಿಜವೋ ಎನ್ನುವ ಪ್ರಶ್ನೆ ಮೂಡಿದೆ. ಪೂನಂ ಸಾವಿಗೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಈ ಸುದ್ದಿ ಸುಳ್ಳಾಗಲಿ ಎಂದು ಕೆಲವರು ಪ್ರಾರ್ಥಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:50 am, Sat, 3 February 24

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ