ನಿವೃತ್ತಿ ಪಡೆಯುವ ಮಾತಾಡಿದ ‘12th ಫೇಲ್​’ ಚಿತ್ರದ ನಟ; ಇದಕ್ಕೆ ಕಾರಣ ಕರೀನಾ ಕಪೂರ್​

‘12th ಫೇಲ್​’ ಸಿನಿಮಾದ ನಟ ವಿಕ್ರಾಂತ್​ ಮಾಸ್ಸಿ ಅವರಿಗೆ ಬೇಡಿಕೆ ಹೆಚ್ಚಿದೆ. ಅನೇಕ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಹಲವು ಸೆಲೆಬ್ರಿಟಿಗಳು ವಿಕ್ರಾಂತ್​ ಮಾಸ್ಸಿ ಅಭಿನಯಕ್ಕೆ ಭೇಷ್​ ಎನ್ನುತ್ತಿದ್ದಾರೆ. ಇಂಥ ಸಮಯದಲ್ಲಿ ಅವರು ನಿವೃತ್ತಿಯ ಬಗ್ಗೆ ಮಾತನಾಡಿದ್ದು ಯಾಕೆ? ಅದಕ್ಕೆ ಕಾರಣ ಆಗಿರುವುದು ನಟಿ ಕರೀನಾ ಕಪೂರ್​ ಖಾನ್​. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ..

ನಿವೃತ್ತಿ ಪಡೆಯುವ ಮಾತಾಡಿದ ‘12th ಫೇಲ್​’ ಚಿತ್ರದ ನಟ; ಇದಕ್ಕೆ ಕಾರಣ ಕರೀನಾ ಕಪೂರ್​
ವಿಕ್ರಾಂತ್​ ಮಾಸ್ಸಿ, ಕರೀನಾ ಕಪೂರ್​ ಖಾನ್​
Follow us
ಮದನ್​ ಕುಮಾರ್​
|

Updated on: Feb 02, 2024 | 6:43 PM

ನಟ ವಿಕ್ರಾಂತ್​ ಮಾಸ್ಸಿ (Vikrant Massey) ಅವರು ‘12th ಫೇಲ್​’ ಸಿನಿಮಾದ ಯಶಸ್ಸಿನಿಂದ ಸಖತ್​ ಫೇಮಸ್​ ಆಗಿದ್ದಾರೆ. ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್​ ಮಾಡಿ, ನಂತರ ಒಟಿಟಿಯಲ್ಲೂ ಅಬ್ಬರಿಸಿದ ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಹೃತಿಕ್​ ರೋಷನ್​, ಜಾನ್ವಿ ಕಪೂರ್​, ಕಂಗನಾ ರಣಾವತ್​ ಮುಂತಾದವರು ‘12th ಫೇಲ್​’ (12th Fail Movie) ಸಿನಿಮಾವನ್ನು ಮನಸಾರೆ ಹೊಗಳಿದ್ದಾರೆ. ಈಗ ನಟಿ ಕರೀನಾ ಕಪೂರ್​ (Kareena Kapoor Khan) ಕೂಡ ಈ ಸಿನಿಮಾವನ್ನು ನೋಡಿ ಇಷ್ಟಪಟ್ಟಿದ್ದಾರೆ. ಇನ್​​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರ ಹೊಗಳಿಕೆಯಿಂದ ನಟ ವಿಕ್ರಾಂತ್​ ಮಾಸ್ಸಿ ಅವರಿಗೆ ಖುಷಿಯಾಗಿದೆ. ಅದೇ ಖುಷಿಯಲ್ಲಿ ಅವರು ನಿವೃತ್ತಿ ಪಡೆಯುವ ಬಗ್ಗೆ ಪ್ರಸ್ತಾಪಿಸಿದ್ದಾರೆ!

ರಿಯಲ್​ ಲೈಫ್​ ಘಟನೆಗಳನ್ನು ಆಧರಿಸಿ ‘12th ಫೇಲ್​’ ಸಿನಿಮಾ ತಯಾರಾಗಿದೆ. ವಿಧು ವಿನೋದ್​ ಚೋಪ್ರಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಕ್ರಾಂತ್​ ಮಾಸ್ಸಿ, ಮೇಧಾ ಶಂಕರ್​ ಅವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತುಂಬ ರಿಯಲಿಸ್ಟಿಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಹಲವರಿಗೆ ‘12th ಫೇಲ್​’ ಸ್ಫೂರ್ತಿ ತುಂಬುತ್ತಿದೆ. ಕರೀನಾ ಕಪೂರ್​ ಖಾನ್​ ಅವರಂತೂ ಸಿಕ್ಕಾಪಟ್ಟೆ ಹೊಗಳಿದ್ದಾರೆ.

ಇದನ್ನೂ ಓದಿ: ‘ಇರ್ಫಾನ್​ ಖಾನ್​ ಅವರ ಸ್ಥಾನವನ್ನು ಈ ನಟ ತುಂಬುತ್ತಾರೆ’; ವಿಕ್ರಾಂತ್​ ಮಾಸ್ಸಿಗೆ ಕಂಗನಾ ಹೊಗಳಿಕೆ

‘12th ಫೇಲ್​ ಸಿನಿಮಾದ ನಿರ್ದೇಶಕ ವಿಧು ವಿನೋದ್​ ಚೋಪ್ರಾ, ನಟರಾದ ವಿಕ್ರಾಂತ್​ ಮಾಸ್ಸಿ, ಮೇಧಾ ಶಂಕರ್​, ಅಂಶುಮಾನ್​ ಪುಷ್ಕರ್​, ಅನಂತ್​ ವಿ. ಜೋಶಿ ಮತ್ತು ಇಡೀ ಪಾತ್ರವರ್ಗದವರು ಲೆಜೆಂಡ್​ಗಳು’ ಎಂದು ಕರೀನಾ ಕಪೂರ್​ ಖಾನ್​ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಮಾತು ಕೇಳಿ ವಿಕ್ರಾಂತ್​ ಮಾಸ್ಸಿ ಅವರಿಗೆ ಖುಷಿ ಆಗಿದೆ. ‘ನಾನು ಈಗ ನಿವೃತ್ತಿ ಪಡೆಯಬಹುದು. ಧನ್ಯವಾದಗಳು ಮೇಡಂ’ ಎಂದು ವಿಕ್ರಾಂತ್​ ಮಾಸ್ಸಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ‘12th ಫೇಲ್​’ ಚಿತ್ರದಿಂದ ಹೆಚ್ಚಿತು ವಿಕ್ರಾಂತ್​ ಮಾಸ್ಸಿ ಜನಪ್ರಿಯತೆ

ಒಂದಷ್ಟು ದಿನಗಳ ಹಿಂದೆ ಕರೀನಾ ಕಪೂರ್​ ಖಾನ್​ ಮತ್ತು ವಿಕ್ರಾಂತ್​ ಮಾಸ್ಸಿ ಅವರು ಜೊತೆಯಾಗಿ ಒಂದು ಸಂದರ್ಶನದಲ್ಲಿ ಭಾಗಿ ಆಗಿದ್ದರು. ಆಗ ಕರೀನಾ ಕಪೂರ್​ ಬಗ್ಗೆ ತಮಗೆ ಇರುವ ಅಭಿಮಾನ ಎಂಥದ್ದು ಎಂಬುದನ್ನು ವಿಕ್ರಾಂತ್​ ಮಾಸ್ಸಿ ವಿವರಿಸಿದ್ದರು. ಈಗ ತಮ್ಮ ಇಷ್ಟದ ನಟಿಯಿಂದಲೇ ಮೆಚ್ಚುಗೆ ಸಿಕ್ಕಿರುವುದಕ್ಕೆ ಅವರಿಗೆ ತುಂಬ ಖುಷಿ ಆಗಿದೆ. ‘12th ಫೇಲ್​’ ಸೂಪರ್​ ಹಿಟ್​ ಆದ ಬಳಿಕ ಅವರ ಬೇಡಿಕೆ ಹೆಚ್ಚಾಗಿದೆ. ಹೊಸ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ. ಅವರ ಮುಂಬರುವ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ ಮೂಡುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್