Poonam Pandey: ಸುಳ್ಳು ಸುದ್ದಿಯಲ್ಲೂ ದಾಖಲೆ ಬರೆದ ಪೂನಂ ಪಾಂಡೆ; ಇಲ್ಲಿದೆ ವಿವರ..
ಬಾಲಿವುಡ್ ನಟಿ ಪೂನಂ ಪಾಂಡೆ ಅವರ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಆ ಉದ್ದೇಶಕ್ಕಾಗಿ ಅವರು ಹಿಡಿದ ಹಾದಿ ಸರಿಯಿಲ್ಲ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಸಹ ಪೂನಂ ಅವರನ್ನು ಖಂಡಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ಪೂನಂ ಪಾಂಡೆ ಅವರು ತಲೆ ಕೆಡಿಸಿಕೊಂಡಿಲ್ಲ. ತಮ್ಮ ಕೆಲಸವನ್ನು ಅವರು ಈಗಲೂ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಅತಿ ಹೆಚ್ಚು ಚರ್ಚೆಗೆ ಒಳಗಾದ ಸೆಲೆಬ್ರಿಟಿ ಎಂದರೆ ಅದು ಪೂನಂ ಪಾಂಡೆ. ಫೆಬ್ರವರಿ 2ರಂದು ಪೂನಂ ಪಾಂಡೆ (Poonam Pandey) ನಿಧನರಾದರು ಎಂಬ ಸುದ್ದಿ ಹರಡಿತ್ತು. ಆದರೆ ಅದು ಸುಳ್ಳು ಎಂಬುದು ಮರುದಿನವೇ ಗೊತ್ತಾಯಿತು. ಸ್ವತಃ ಪೂನಂ ಪಾಂಡೆ ಅವರು ವಿಡಿಯೋ ಹಂಚಿಕೊಳ್ಳುವ ಮೂಲಕ ‘ನಾನು ಬದುಕಿದ್ದೇನೆ’ (Poonam Pandey Alive) ಎಂಬ ಸಂದೇಶ ರವಾನಿಸಿದರು. ಅವರು ಇಷ್ಟೆಲ್ಲ ಮಾಡಿದ್ದು ಪ್ರಚಾರಕ್ಕಾಗಿ. ಹಾಗಂತ ಸ್ವಂತ ಪ್ರಚಾರಕ್ಕಾಗಿ ಅಲ್ಲ. ಬದಲಿಗೆ, ಗರ್ಭಕಂಠದ ಕ್ಯಾನ್ಸರ್ (Cervical Cancer) ಬಗ್ಗೆ ಜಾಗೃತಿ ಮೂಡಿಸುವುದು ಅವರ ಉದ್ದೇಶ ಆಗಿತ್ತು. ಆ ವಿಚಾರದಲ್ಲಿ ಪೂನಂ ಪಾಂಡೆ ದಾಖಲೆ ಬರೆದಿದ್ದಾರೆ. ಆ ಕುರಿತು ಇಲ್ಲಿದೆ ವಿವರ..
ಪೂನಂ ಪಾಂಡೆ ನಿಧನಕ್ಕೆ ಗರ್ಭಕಂಠದ ಕ್ಯಾನ್ಸರ್ ಕಾರಣ ಎಂದು ಸುದ್ದಿ ಹರಡಿಸಲಾಗಿತ್ತು. ಅಲ್ಲಿಯವರೆಗೂ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ಆದರೆ ಪೂನಂ ಪಾಂಡೆಯ ಸಾವಿನ ಬಗ್ಗೆ ಫೇಕ್ ನ್ಯೂಸ್ ಹೊರಬಿದ್ದ ಬಳಿಕ ಗೂಗಲ್ನಲ್ಲಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಸರ್ಚ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿತು. ಆ ವಿಚಾರದಲ್ಲಿ ಪೂನಂ ಪಾಂಡೆ ದಾಖಲೆ ಮಾಡಿದ್ದಾರೆ.
ಇದನ್ನೂ ಓದಿ: ಪೂನಂ ಪಾಂಡೆ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕೆ ಕೇಸ್ ದಾಖಲು
ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಈ ಮೊದಲು ಹೆಚ್ಚೇನೂ ಸುದ್ದಿ ಆಗುತ್ತಿರಲಿಲ್ಲ. ಆದರೆ ಪೂನಂ ಪಾಂಡೆ ಅವರ ಕಾರಣದಿಂದ ಒಂದೇ ದಿನದಲ್ಲಿ ಸಾವಿರಕ್ಕೂ ಅಧಿಕ ಸುದ್ದಿಗಳ ಹೆಡ್ಲೈನ್ನಲ್ಲಿ ‘ಗರ್ಭಕಂಠದ ಕ್ಯಾನ್ಸರ್’ ಪದವನ್ನು ಬಳಕೆ ಮಾಡಲಾಯಿತು. ಭಾರತದಲ್ಲಿ ಈ ರೀತಿ ಆಗಿದ್ದು ಇತಿಹಾಸದಲ್ಲೇ ಮೊದಲು. ಅದು ಕೂಡ ಒಂದು ದಾಖಲೆ. ಈ ಮಾಹಿತಿಯನ್ನು ಸ್ವತಃ ಪೂನಂ ಪಾಂಡೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಪೂನಂ ಪಾಂಡೆ ಅವರ ಉದ್ದೇಶ ಒಳ್ಳೆಯದೇ ಆಗಿದ್ದರೂ ಕೂಡ ಅವರು ತುಳಿದ ಹಾದಿ ಸರಿಯಿಲ್ಲ ಎಂದು ಎಲ್ಲರೂ ಟೀಕಿಸುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಹಲವು ಸೆಲೆಬ್ರಿಟಿಗಳು ಅವರನ್ನು ಖಂಡಿಸಿದ್ದಾರೆ. ಆದರೆ ಈ ಟೀಕೆಗಳಿಗೆಲ್ಲ ಪೂನಂ ಪಾಂಡೆ ತಲೆ ಕೆಡಿಸಿಕೊಂಡಿಲ್ಲ. ಸಾಮಾಜಿಕ ಕಳಕಳಿಯಿಂದ ತಾವು ಈ ಕೆಲಸ ಮಾಡಿರುವುದಾಗಿ ಅವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಂದಷ್ಟು ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಪೂನಂ ಪಾಂಡೆ ಅವರ ವೃತ್ತಿಬದುಕು ಮತ್ತು ಖಾಸಗಿ ಜೀವನದಲ್ಲಿ ಅನೇಕ ಕಾಂಟ್ರವರ್ಸಿಗಳಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ