Cancer
ಕ್ಯಾನ್ಸರ್ ಎನ್ನುವುದು ಅಸಹಜ ಜೀವಕೋಶದ ಬೆಳವಣಿಗೆಯನ್ನು ಒಳಗೊಂಡಿರುವ ರೋಗಗಳ ಗುಂಪಾಗಿದ್ದು, ಇದು ದೇಹದ ಇತರ ಭಾಗಗಳಿಗೆ ಆಕ್ರಮಣ ಮಾಡುವ ಅಥವಾ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಗೆಡ್ಡೆಗಳ ಮೂಲಕ ಕ್ಯಾನ್ಸರ್ ನಮ್ಮ ದೇಹವನ್ನು ಆವರಿಸಿಕೊಳ್ಳುತ್ತದೆ. ಕ್ಯಾನ್ಸರ್ ರೋಗ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಅದನ್ನು ಗುಣಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಜನರಿಗೆ ಕ್ಯಾನ್ಸರ್ ರೋಗಲಕ್ಷಣದ ಬಗ್ಗೆ ಜನರಿಗೆ ಹೆಚ್ಚಿನ ತಿಳಿವಳಿಕೆ ಇರದಿರುವುದು ಒಂದು ಮುಖ್ಯ ಕಾರಣ. ಕ್ಯಾನ್ಸರ್ನ ಸಂಭವನೀಯ ರೋಗಲಕ್ಷಣಗಳು ಗಡ್ಡೆ, ಅಸಹಜ ರಕ್ತಸ್ರಾವ, ದೀರ್ಘಕಾಲದ ಕೆಮ್ಮು, ಅತಿಯಾಗಿ ತೂಕ ಇಳಿಯುವುದು, ಮಲವಿಸರ್ಜನೆಯಲ್ಲಿ ಸಮಸ್ಯೆ ಇತ್ಯಾದಿ. 100 ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್‌ಗಳು ಮನುಷ್ಯರ ಮೇಲೆ ಪರಿಣಾಮ ಬೀರುತ್ತವೆ.ತಂಬಾಕು ಸೇವನೆಯು ಸುಮಾರು 22%ರಷ್ಟು ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಕಾರಣವಾಗಿದೆ.