AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿ ಮೂಸಿದರೆ ಮನುಷ್ಯರ ಕಾಯಿಲೆ ಪತ್ತೆ; ಬೆಂಗಳೂರಿನ ಸ್ಟಾರ್ಟಪ್​ನಿಂದ ಹೊಸ ರೋಗಪತ್ತೆ ಸಾಧನ ಆವಿಷ್ಕಾರ

Bengaluru startup Dognosis uses dogs to detect diseases in humans: ನಿಮ್ಮ ದೇಹದಲ್ಲಿರುವ ರೋಗಗಳನ್ನು ನಾಯಿಗಳು ಗುರುತಿಸಬಲ್ಲವು. ಅವುಗಳಿಗೆ ಅಂಥ ತೀಕ್ಷ್ಣ ವಾಸನಾ ಗ್ರಹಿಕೆ ಸಾಮರ್ಥ್ಯ ಇದೆ. ಬೆಂಗಳೂರಿನ ಡಾಗ್ನಾಸಿಸ್ ಎನ್ನುವ ಸ್ಟಾರ್ಟಪ್​ವೊಂದು ಈ ಶ್ವಾನ ಶಕ್ತಿ ಬಳಸಿ ಹೊಸ ಡಯಾಗ್ನಾಸಿಸ್ ವಿಧಾನ ಆವಿಷ್ಕರಿಸಿದ್ಧಾರೆ. ವಿಶೇಷ ತರಬೇತಿ ಪಡೆದ ಶ್ವಾನದ ಹಾಗೂ ಎಐ ತಂತ್ರಜ್ಞಾನದ ನೆರವಿನಿಂದ ರೋಗ ಪತ್ತೆ ಮಾಡುತ್ತದೆ ಡಾಗ್ನಾಸಿಸ್.

ನಾಯಿ ಮೂಸಿದರೆ ಮನುಷ್ಯರ ಕಾಯಿಲೆ ಪತ್ತೆ; ಬೆಂಗಳೂರಿನ ಸ್ಟಾರ್ಟಪ್​ನಿಂದ ಹೊಸ ರೋಗಪತ್ತೆ ಸಾಧನ ಆವಿಷ್ಕಾರ
ನಾಯಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 22, 2025 | 3:27 PM

Share

ಬೆಂಗಳೂರು, ಆಗಸ್ಟ್ 22: ನಾಯಿ ಹಲವು ನಿಸರ್ಗದತ್ತ ವಿಶೇಷ ಶಕ್ತಿಗಳನ್ನು ಹೊಂದಿರುವ ಪ್ರಾಣಿ. ಇದರ ವಾಸನಾ ಗ್ರಹಿಕೆ ಸಾಮರ್ಥ್ಯ ಮನುಷ್ಯರ ಅರಿವಿಗೆ ನಿಲುಕುವುದು ಕಷ್ಟ. ಒಬ್ಬ ವ್ಯಕ್ತಿಯನ್ನು ಆತನ ವಾಸನೆಯಿಂದಲೇ ಇದು ಗುರುತು ಹಿಡಿಯಬಲ್ಲಷ್ಟು ನೈಸರ್ಗಿಕವಾದ ಪವರ್​ಫುಲ್ ಸೆನ್ಸಾರ್ (Canine Olfactory power) ಹೊಂದಿರುತ್ತದೆ. ಅಪರಾಧ ಪ್ರಕರಣಗಳಲ್ಲಿ ಕೊಲೆಗಾರರನ್ನು ಹಿಡಿಯಲು ನಾಯಿಯನ್ನು ಬಳಸುತ್ತಾರೆ. ಬಾಂಬ್​ಗಳು, ಮೃತದೇಹಗಳು, ಮಾದಕದ್ರವ್ಯಗಳು ಇತ್ಯಾದಿಯನ್ನು ಪತ್ತೆ ಮಾಡಲು ನಾಯಿಯನ್ನು ಬಳಸಲಾಗುತ್ತದೆ. ಬೆಂಗಳೂರಿನ ಸ್ಟಾರ್ಟಪ್​ವೊಂದು ನಾಯಿಯ ಈ ವಾಸನಾ ಗ್ರಹಿಕೆ ಸಾಮರ್ಥ್ಯವನ್ನು ರೋಗಪತ್ತೆಗೆ (cancer detection) ಬಳಸುತ್ತಿದೆ. ಈ ಸ್ಟಾರ್ಟಪ್ ಹೆಸರು ಡಾಗ್ನಾಸಿಸ್ (Dognosis).

ಡಾಗ್ನಾಸಿಸ್ ಕಂಪನಿಯು ನಾಯಿಯ ವಿಶೇಷ ವಾಸನಾ ಗ್ರಹಿಕೆಯ ಶಕ್ತಿ ಜೊತೆಗೆ ಎಐ ತಂತ್ರಜ್ಞಾನ ನೆರವಿನಿಂದ ಮನುಷ್ಯರಲ್ಲಿರುವ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಯನ್ನು ಪತ್ತೆ ಮಾಡಲು ಬಳಸುತ್ತಿದೆ. ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಇದರಿಂದ ಪತ್ತೆ ಮಾಡಬಹುದು. ಕ್ಯಾನ್ಸರ್ ಮಾತ್ರವಲ್ಲ, ಕೋವಿಡ್, ಕ್ಷಯ ಇತ್ಯಾದಿ ರೋಗಗಳನ್ನೂ ನಾಯಿ ಮೂಲಕ ಪತ್ತೆ ಮಾಡಬಲ್ಲುದು ಡಾಗ್ನಾಸಿಸ್​ನ ಯಂತ್ರ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಬಿಲ್ 2025; ಡ್ರೀಮ್11ನಂತಹ ಆ್ಯಪ್​ಗಳ ಕತೆ ಏನು? ಇಲ್ಲಿದೆ ಈ ಮಸೂದೆಯ ಮುಖ್ಯಾಂಶಗಳು

ನಾಯಿಗೆ ಹೇಗೆ ಗೊತ್ತಾಗುತ್ತೆ ರೋಗ? ಇಲ್ಲಿದೆ ಎಐ ಪ್ರಯೋಗ

ರೋಗ ತಪಾಸಣೆ ಮಾಡಬೇಕಾದ ವ್ಯಕ್ತಿಗೆ 10 ನಿಮಿಷ ಮಾಸ್ಕ್ ಹಾಕಲಾಗುತ್ತದೆ. ಈ ವೇಳೆ ಆತನ ಉಸಿರಾಟದ ಮೂಲಕ ಮಾಸ್ಕ್​ಗೆ ವಿವಿಧ ರಾಸಾಯನಿಕಗಳು ಅಂಟಿಕೊಳ್ಳುತ್ತವೆ. ಈ ಮಾಸ್ಕ್ ಅನ್ನು ಡಾಗ್ನಾಸಿಸ್ ಲ್ಯಾಬ್​ಗೆ ಕಳುಹಿಸಲಾಗುತ್ತದೆ.

ಈ ಡಾಗ್ನಾಸಿಸ್ ಲ್ಯಾಬ್​ನಲ್ಲಿ ವಿಶೇಷ ತರಬೇತಿ ಪಡೆದ ಶ್ವಾನಗಳಿರುತ್ತವೆ. ಮಾಸ್ಕ್ ಸ್ಯಾಂಪಲ್ ಅನ್ನು ಈ ಶ್ವಾನದಿಂದ ಮೂಸಿಸಲಾಗುತ್ತದೆ. ಹೀಗೆ ಮೂಸುವ ನಾಯಿಗೆ ಡಾಗ್​ಸೆನ್ಸ್ ಎನ್ನುವ ಇಇಜಿ ಹೆಡ್​ಸೆಟ್​ಗಳನ್ನು ಹಾಕಲಾಗಿರುತ್ತದೆ. ಮಾಸ್ಕ್ ಸ್ಯಾಂಪಲ್ ಅನ್ನು ಆ ನಾಯಿ ಮೂಸಿದಾಗ ಅದರ ಮಿದುಳಿಂದ ಬರುವ ನ್ಯೂರಲ್ ಸಿಗ್ನಲ್​ಗಳನ್ನು ಈ ಹೆಡ್​ಸೆಟ್​ಗಳು ಸೆರೆ ಹಿಡಿಯುತ್ತವೆ.

ಬಳಿಕ, ಡಾಗ್​ಒಎಸ್ ಎನ್ನುವ ಎಐ ಪ್ಲಾಟ್​ಫಾರ್ಮ್​ಗೆ ಈ ಇಇಜಿ ದತ್ತಾಂಶವನ್ನು ಕಳುಹಿಸಲಾಗುತ್ತದೆ. ಈ ಇಂಟೆಲಿಜೆಂಟ್ ತಂತ್ರಾಂಶವು ದತ್ತಾಂಶವನ್ನು ಸಮರ್ಪಕವಾಗಿ ವಿಶ್ಲೇಷಿಸಿ, ಆ ಸ್ಯಾಂಪಲ್​ನಲ್ಲಿ ಕ್ಯಾನ್ಸರ್​ಕಾರಕ ಅಣುಗಳಿವೆಯಾ, ಅಥವಾ ಬೇರಾವುದೇ ರೋಗದ ಕಣಗಳಿವೆಯಾ ಎಂದು ಗುರುತಿಸುತ್ತದೆ.

ಇದನ್ನೂ ಓದಿ: ಕಿಂಡ್ರಿಲ್​ನಿಂದ ಬೆಂಗಳೂರಿನಲ್ಲಿ ಎಐ ಲ್ಯಾಬ್; ಭಾರತದಲ್ಲಿ 2.25 ಬಿಲಿಯನ್ ಡಾಲರ್ ಹೂಡಿಕೆ

ಆಕಾಶ್ ಕುಲಗೋಡ್ ಸ್ಥಾಪಿತ ಕಂಪನಿ ಡಾಗ್ನಾಸಿಸ್

ಕಾಗ್ನೈಟಿವ್ ಸೈಂಟಿಸ್ಟ್ ಆದ ಆಕಾಶ್ ಕುಲಗೋಡ್ (Akash Kulgod) ಹಾಗೂ ಮಾಜಿ ಇಸ್ರೇಲೀ ಕಮಾಂಡರ್ ಇಟಮರ್ ಬಿಟನ್ (Itamar Bitan) ಎನ್ನುವವರು ಡಾಗ್ನಾಸಿಸ್ ಕಂಪನಿಯ ಸ್ಥಾಪಕರಾಗಿದ್ದಾರೆ. ಇವರ ಸ್ಟಾರ್ಟಪ್​ನಲ್ಲಿ ನ್ಯೂರೋಸೈನ್ಸ್, ಎಂಜಿನಿಯರಿಂಗ್, ಕ್ಲಿನಿಕಲ್ ಆಪರೇಷನ್ಸ್, ಸಾಫ್ಟ್​ವೇರ್ ಕ್ಷೇತ್ರಗಳ ಹತ್ತಾರು ಇನ್ನೋವೇಟರ್​ಗಳ ತಂಡ ಕೆಲಸ ಮಾಡುತ್ತಿದೆ.

Dogs can sniff you and detect diseases, Bengaluru startup develops new diagnosis method

ಆಕಾಶ್ ಕುಲಗೋಡ್ ಹಾಗೂ ಇಟಮರ್ ಬಿಟನ್

ಉಸಿರಾಟ, ಮೂತ್ರ ಮತ್ತು ಬೆವರುಗಳಲ್ಲಿರುವ ರಾಸಾಯನಿಕ ಬದಲಾವಣೆಗಳನ್ನು ನಾಯಿಗಳು ಗುರುತಿಸಬಲ್ಲುವು ಎಂದು ಬಹಳಷ್ಟು ಸಂಶೋಧನೆಗಳು ದೃಢಪಡಿಸಿವೆ. ಇದರ ಆಧಾರವಾಗಿ ಡಾಗ್ನಾಸಿಸ್ ತಪಾಸಣೆ ವಿಧಾನವನ್ನು ಆವಿಷ್ಕರಿಸಲಾಗಿದೆ. ವರದಿ ಪ್ರಕಾರ, ಡಾಗ್ನಾಸಿಸ್ ಸುಮಾರು 10 ವಿಧದ ಕ್ಯಾನ್ಸರ್​ಗಳನ್ನು ಶೇ. 98ರಷ್ಟು ನಿಖರವಾಗಿ ಗುರುತಿಸಬಲ್ಲುದಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ