AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Japan-India: ಮೋದಿ ಭೇಟಿ ವೇಳೆ 6 ಲಕ್ಷ ಕೋಟಿ ರೂ ಹೂಡಿಕೆ ಪ್ರಕಟಿಸಲಿದೆ ಜಪಾನ್

Narendra Modi's Japan Visit on Aug 29-31: ಆಗಸ್ಟ್ 29ರಿಂದ ಜಪಾನ್​ಗೆ ನರೇಂದ್ರ ಮೋದಿ ಅವರು 3 ದಿನಗಳ ಭೇಟಿ ಮಾಡುತ್ತಿದ್ದಾರೆ. ಭಾರತ ಮತ್ತು ಜಪಾನ್ ನಡುವಿನ ವಾರ್ಷಿಕ ಸಭೆಯ ಬಳಿಕ ಎರಡೂ ದೇಶಗಳ ಪ್ರಧಾನಿಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಬುಲೆಟ್ ಟ್ರೈನ್ ಪ್ರಾಜೆಕ್ಟ್​ಗಳು ಸೇರಿದಂತೆ ಜಪಾನ್ ಸರ್ಕಾರ 68 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆಗಳನ್ನು ಪ್ರಕಟಿಸಬಹುದು.

Japan-India: ಮೋದಿ ಭೇಟಿ ವೇಳೆ 6 ಲಕ್ಷ ಕೋಟಿ ರೂ ಹೂಡಿಕೆ ಪ್ರಕಟಿಸಲಿದೆ ಜಪಾನ್
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 22, 2025 | 4:13 PM

Share

ಟೋಕಿಯೋ, ಆಗಸ್ಟ್ 22: ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಭೇಟಿ ವೇಳೆ ಮಹತ್ವದ ಘೋಷಣೆ ಆಗುವ ಸಾಧ್ಯತೆ ಇದೆ. ಕ್ಯೂಡೋ ನ್ಯೂಸ್ ಪ್ರಕಟಿಸಿದ ವರದಿ ಪ್ರಕಾರ ನರೇಂದ್ರ ಮೋದಿ (Narendra Modi) ಅವರು ಜಪಾನ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಪಾನ್ ಸರ್ಕಾರ 10 ಟ್ರಿಲಿಯನ್ ಯೆನ್ (ಸುಮಾರು 68 ಬಿಲಿಯನ್ ಡಾಲರ್) ಮೊತ್ತದ ಹೂಡಿಕೆಗಳನ್ನು (Investment) ಪ್ರಕಟಿಸುವ ಸಾಧ್ಯತೆ ಇದೆ. ಭಾರತದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಜಪಾನ್ 6 ಲಕ್ಷ ಕೋಟಿ ರೂ ಮೌಲ್ಯದಷ್ಟು ಹೂಡಿಕೆ ಮಾಡಲು ಯೋಜಿಸಿರುವುದು ತಿಳಿದುಬಂದಿದೆ.

ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಅವರು 2022ರ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಬಂದಿದ್ದಾಗ ಮುಂದಿನ ಐದು ವರ್ಷದಲ್ಲಿ ಜಪಾನ್​ನಿಂದ 5 ಟ್ರಿಲಿಯನ್ ಯೆನ್ ಮೊತ್ತದಷ್ಟು ಹೂಡಿಕೆ ಮಾಡಲಾಗಿತ್ತು. ಈಗ ಅದನ್ನೂ ಒಳಗೊಂಡಂತೆ ಹೂಡಿಕೆಯನ್ನು 10 ಟ್ರಿಲಿಯನ್ ಯೆನ್​ಗೆ ಹೆಚ್ಚಿಸುವ ಘೋಷಣೆ ಆಗಬಹುದು.

ಇದನ್ನೂ ಓದಿ: ಚೀನಾ ನೇತೃತ್ವದ ಆರ್​ಸಿಇಪಿಗೆ ಸೇರಲು ಭಾರತ ಯೋಜನೆ; ಆರು ವರ್ಷದ ಹಿಂದೆ ತೊರೆದಿದ್ದ ಗುಂಪಿಗೆ ಮತ್ತೆ ಸೇರ ಹೊರಟಿರುವುದು ಯಾಕೆ?

ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 29ಕ್ಕೆ ಜಪಾನ್​ಗೆ ಹೋಗಲಿದ್ದಾರೆ. ಮೂರು ದಿನಗವರೆಗೆ ಅವರು ಇರಲಿದ್ದು, ಜಪಾನ್-ಭಾರತ ಸಮಿಟ್​ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆ ಬಳಿಕ ಎರಡೂ ದೇಶಗಳ ಪ್ರಧಾನಿಗಳಿಂದ ಜಂಟಿ ಹೇಳಿಕೆ ಹೊರಡಬಹುದು.

ನರೇಂದ್ರ ಮೋದಿ ಅವರು ಎರಡು ವರ್ಷದ ಬಳಿಕ ಜಪಾನ್​ಗೆ ಹೋಗುತ್ತಿದ್ದಾರೆ. 2023ರ ಮೇನಲ್ಲಿ ಹೋದಾಗ ಜಪಾನ್ ಪ್ರಧಾನಿಯಾಗಿದ್ದವರು ಫುಮಿಯೋ ಕಿಶಿದಾ. ಆಗ ಗ್ರೂಪ್ ಆಫ್ ಸೆವೆನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಈ ಬಾರಿ ಶಿಗೆರು ಇಶಿಬಾ ಅವರು ಪ್ರಧಾನಿಯಾಗಿದ್ದಾರೆ. ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮೋದಿ.

ಇದನ್ನೂ ಓದಿ: ಆನ್​ಲೈನ್ ಗೇಮಿಂಗ್ ಬಿಲ್ 2025; ಡ್ರೀಮ್11ನಂತಹ ಆ್ಯಪ್​ಗಳ ಕತೆ ಏನು? ಇಲ್ಲಿದೆ ಈ ಮಸೂದೆಯ ಮುಖ್ಯಾಂಶಗಳು

ಅತ್ಯಾಧುನಿಕ ಶಿಂಕನ್ಸೆನ್ ಟ್ರೈನ್ ಪ್ರಾಜೆಕ್ಟ್

ನರೇಂದ್ರ ಮೋದಿ ಅವರ ಜಪಾನ್ ಭೇಟಿ ವೇಳೆ ಮುಖ್ಯ ಗಮನ ಇರುವುದು ಮುಂಬೈ ಅಹ್ಮದಾಬಾದ್ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಅನ್ನು ಬೇಗ ಮುಗಿಸುವುದರ ಕುರಿತಾಗಿ. ಹೊಸ ತಲೆಮಾರಿನ ಟ್ರೈನ್ ಮಾಡಲ್ ಎನಿಸಿದ ಇ10 ಸರಣಿಯ ಶಿಂಕನ್ಸೆನ್ ಅನ್ನು ಭಾರತಕ್ಕೆ ನೀಡಲಿದೆ ಜಪಾನ್. ಈ ಅಡ್ವಾನ್ಸ್ಡ್ ರೈಲು ಎರಡೂ ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಬಹುದು. ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಬಾಂಧವ್ಯದ ಗಟ್ಟಿತನಕ್ಕೆ ಇದು ಕನ್ನಡಿ ಹಿಡಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ