ಆನ್ಲೈನ್ ಗೇಮಿಂಗ್ ಬಿಲ್ 2025; ಡ್ರೀಮ್11ನಂತಹ ಆ್ಯಪ್ಗಳ ಕತೆ ಏನು? ಇಲ್ಲಿದೆ ಈ ಮಸೂದೆಯ ಮುಖ್ಯಾಂಶಗಳು
Online Gaming Bill 2025 highlights: ಹೊಸ ಆನ್ಲೈನ್ ಗೇಮಿಂಗ್ ಮಸೂದೆಗೆ ಸಂಸತ್ತು ಅಂಗೀಕರಿಸಿದೆ. ಈ ಬಿಲ್ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಗೇಮಿಂಗ್ ಉದ್ಯಮಕ್ಕೆ ಈ ಮಸೂದೆ ಮಾರಕ ಎಂದು ಕೆಲವರು ಹೇಳಿದರೆ, ಮಸೂದೆಯಿಂದ ಉದ್ಯಮಕ್ಕೆ ಪುಷ್ಟಿ ಸಿಗುತ್ತದೆ ಎಂದು ಕೆಲವರು ಹೇಳುತ್ತಾರೆ. ಇಸ್ಪೋರ್ಟ್ಸ್ನಂತಹ ಗೇಮ್ಗಳು, ಆನ್ಲೈನ್ ಸೋಷಿಯಲ್ ಗೇಮ್ಗಳಿಗೆ ಉತ್ತೇಜನ ಸಿಗುತ್ತದೆ. ಹಣ ಪಾವತಿಸಬೇಕಾದ ಗೇಮ್ಗಳಿಗೆ ನಿಷೇಧ ಹಾಕಬಹುದು.

ನವದೆಹಲಿ, ಆಗಸ್ಟ್ 21: ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಆನ್ಲೈನ್ ಗೇಮಿಂಗ್ ಮಸೂದೆಗೆ (Online Gaming Bill 2025) ಭಾರತದ ಗೇಮಿಂಗ್ ಉದ್ಯಮದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹೊಸ ಕಾನೂನು ದೇಶದ ಗೇಮಿಂಗ್ ಉದ್ಯಮವನ್ನೇ ನಾಶ ಮಾಡುತ್ತೆ ಎಂದು ಕೆಲವರು ಹೇಳಿದ್ಧಾರೆ. ಇನ್ನೂ ಕೆಲವರು ಇದು ಭಾರತವನ್ನು ವಿಶ್ವದ ಗೇಮಿಂಗ್ ಕೇಂದ್ರವಾಗಿ ರೂಪುಗೊಳಿಸಲು ಬೇಕಾದ ಶಕ್ತಿ ಎಂದು ಕರೆದಿದ್ದಾರೆ. ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಮಸೂದೆಯ ಮುಖ್ಯಾಂಶಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಮಸೂದೆಯು ಮಧ್ಯಮ ವರ್ಗ ಹಾಗು ಯುವಕರಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ಗುರುತಿಸಿ ಮಧ್ಯಮ ಹಾದಿ ತುಳಿದಿದೆ.
ಮೂರು ರೀತಿಯ ಆನ್ಲೈನ್ ಗೇಮ್ಗಳು
- ಇ-ಸ್ಪೋರ್ಟ್ಸ್: ಟ್ರೈನಿಂಗ್ ಆಧಾರಿತವಾದುದು. ತಂಡಗಳ ನಡುವೆ ಆಡಲಾಗುವಂಥದ್ದು.
- ಆನ್ಲೈನ್ ಸೋಷಿಯಲ್ ಗೇಮ್ಸ್: ಶೈಕ್ಷಣಿಕ, ಮೋಜು ಮತ್ತು ಸಮುದಾಯ ಆಧಾರಿತವಾದುದು.
- ಆನ್ಲೈನ್ ಮನಿ ಗೇಮ್ಸ್: ಹಣ ಪಾವತಿಸಿ ಆಡುವಂತಹದ್ದು. ತುಂಬಾ ವ್ಯಸನ ಉಂಟು ಮಾಡುವಂಥದ್ದು.
ಸರ್ಕಾರದ ಹೊಸ ಗೇಮಿಂಗ್ ಮಸೂದೆಯು ಇ-ಸ್ಪೋರ್ಟ್ಸ್ ಗೇಮ್ಗಳಿಗೆ ಉತ್ತೇಜನ ನೀಡುತ್ತದೆ. ರಿಯಲ್ ಸ್ಪೋರ್ಟ್ಸ್ ರೀತಿಯಲ್ಲಿ ಇದರಲ್ಲೂ ತಂತ್ರಗಾರಿಕೆ, ಕೌಶಲ್ಯ ಹಾಗೂ ಸಾಂಘಿಕತೆ ಅವಶ್ಯಕತೆ ಇರುತ್ತದೆ. ಈ ಇ-ಸ್ಪೋರ್ಟ್ಸ್ಗೆ ಸರ್ಕಾರ ಕಾನೂನು ಮಾನ್ಯತೆ ನೀಡುತ್ತದೆ. ಇವುಗಳ ಉತ್ತೇಜನಕ್ಕೆ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ.
ಇದನ್ನೂ ಓದಿ: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ
ಇನ್ನು ಎರಡನೆಯದಾದ ಆನ್ಲೈನ್ ಸೋಷಿಯಲ್ ಗೇಮ್ಸ್ ಅನ್ನೂ ಸರ್ಕಾರ ಪ್ರೋತ್ಸಾಹಿಸಲಿದೆ. ಆ್ಯಂಗ್ರಿ ಬರ್ಡ್ಸ್, ಕಾರ್ಡ್ ಗೇಮ್, ಬ್ರೇನ್ ಗೇಮ್ ಇತ್ಯಾದಿ. ಇವು ಮಕ್ಕಳಿಗೆ ಗೇಮ್ಗಳ ಮೂಲಕ ಶಿಕ್ಷಣ ನೀಡುತ್ತವೆ. ಸೃಜನಶೀಲತೆ ಬೆಳೆಸಲು ನೆರವಾಗುತ್ತವೆ. ಮಕ್ಕಳಿಗೆ ಇವು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಸರ್ಕಾರವು ಇಂಥ ಗೇಮ್ಗಳ ರಚನೆಗೆ ಉತ್ತೇಜಿಸುತ್ತದೆ.
ಆನ್ಲೈನ್ ಮನಿ ಗೇಮ್ಗಳ ನಿಷೇಧ
ಹಣದ ಬಳಕೆ (ಬೆಟ್ಟಿಂಗ್ ರೀತಿ) ಆಗುವ ಆನ್ಲೈನ್ ಗೇಮ್ಗಳನ್ನು ನಿಷೇಧಿಸಲು ಈ ಮಸೂದೆ ಅನುವು ಮಾಡಿಕೊಡುತ್ತದೆ. ಇಂಥ ಗೇಮ್ಗಳಿಗೆ ಯುವ ಸಮುದಾಯ ದಾಸರಾಗುತ್ತಿದ್ದಾರೆ. ಈ ಗೇಮ್ಗಳನ್ನು ಆಡುವ ಹೆಚ್ಚಿನ ಜನರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳು ನಾಶಗೊಂಡಿವೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಲಬ್ರಿಟಿಗಳನ್ನು ಬಳಸಿ ರಂಗುರಂಗಿನ ಜಾಹೀರಾತು ಮೂಲಕ ಯುವಕರನ್ನು ಆಕರ್ಷಿಸಿ ಹಣ ಮಾಡಲಾಗುತ್ತಿದೆ. ಇದನ್ನು ಪೂರ್ಣವಾಗಿ ನಿಷೇಧಿಸಲಾಗುತ್ತದೆ.
ಸಚಿವ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಪೋಸ್ಟ್
The Promotion and Regulation of Online Gaming Bill, 2025 passed by the Parliament.
The Bill takes a balanced approach – promoting what’s good, prohibiting what’s harmful for middle-class and youth.
Here’s a quick explainer 👇🧵 pic.twitter.com/q4Pthsrb2V
— Ashwini Vaishnaw (@AshwiniVaishnaw) August 21, 2025
ಆನ್ಲೈನ್ ಮನಿ ಗೇಮ್ಗಳ ವಿರುದ್ಧ ದೇಶಾದ್ಯಂತ ದೂರುಗಳು ಬಂದಿವೆ. ಕೋಟ್ಯಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಮಧ್ಯಮವರ್ಗದವರ ಸೇವಿಂಗ್ಸ್ ಹಣ ಸರ್ವನಾಶವಾಗಿದೆ. ಸರ್ಕಾರವು ಬೇರಾವುದೇ ಹಿತಾಸಕ್ತಿಗಿಂತ ಕುಟುಂಬಗಳ ಸುರಕ್ಷತೆಯನ್ನು ಆಯ್ದುಕೊಂಡಿದೆ ಎಂದು ಸಚಿವ ಎ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಅಗ್ನಿ-5; ಅಮೆರಿಕವನ್ನೂ ತಲುಪಬಲ್ಲುದು ಈ ಮಿಸೈಲ್
ಡ್ರೀಮ್11, ಎಂಪಿಎಲ್ ಇತ್ಯಾದಿ ಗೇಮ್ಗಳು ನಿಷೇಧಗೊಳ್ಳುತ್ತವಾ?
ಡ್ರೀಮ್11 ನಂತರ ಫ್ಯಾಂಟಸಿ ಕ್ರಿಕೆಟ್ ಗೇಮ್ಗಳು ಬಹಳ ಜನಪ್ರಿಯವಾಗಿವೆ. ಇವು ಕೌಶಲ್ಯ ಬಳಕೆಯ ಆಟವೆಂದು ಮೇಲ್ನೋಟಕ್ಕೆ ಪರಿಗಣಿಸಲಾಗಿದೆ. ಸಂಭಾವ್ಯ ತಂಡವನ್ನು ಕಟ್ಟುವುದು, ಆ ತಂಡದಲ್ಲಿರುವವರು ನೈಜ ಆಟದಲ್ಲಿ ಹೇಗೆ ಆಡುತ್ತಾರೆ ಅದರ ಮೇಲೆ ಅಂಕಗಳು ದೊರೆತು ಬಹುಮಾನ ಕೊಡುತ್ತವೆ ಇಂತಹ ಪ್ಲಾಟ್ಫಾರ್ಮ್ಗಳು. ಆದರೆ, ಇವುಗಳಲ್ಲಿ ಪಾಲ್ಗೊಳ್ಳಲು ಎಂಟ್ರಿ ಫೀ ಇರುವುದರಿಂದ ಇವನ್ನು ಮನಿ ಗೇಮ್ಗಳೆಂದು ಪರಿಗಣಿಸಲಾಗಬಹುದು. ಹೀಗಾಗಿ, ಹೊಸ ಆನ್ಲೈನ್ ಗೇಮಿಂಗ್ ಮಸೂದೆ ಜಾರಿಗೆ ಬಂದಲ್ಲಿ ಡ್ರೀಮ್ ಇಲವೆನ್ ಇತ್ಯಾದಿ ಗೇಮ್ಗಳು ನಿಷೇಧಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ರಮ್ಮಿ ಸರ್ಕಲ್ ಇತ್ಯಾದಿ ಕಾರ್ಡ್ ಗೇಮ್ ಆಧಾರಿತ ಆಟಗಳೂ ಕೂಡ ಇದೇ ಕಾರಣಕ್ಕೆ ನಿಷೇಧಗೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:41 pm, Thu, 21 August 25




