AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಅಗ್ನಿ-5; ಅಮೆರಿಕವನ್ನೂ ತಲುಪಬಲ್ಲುದು ಈ ಮಿಸೈಲ್

India's Agni-V, among world's most powerful long-range missiles: ಡಿಆರ್​ಡಿಒ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿ ಬಹಳ ಶಕ್ತಿಶಾಲಿಯಾಗಿದ್ದು 5,000-8,000 ಕಿಮೀ ಶ್ರೇಣಿಯದ್ದಾಗಿದೆ. ವಿಶ್ವದ ಅತ್ಯಂತ ಪ್ರಬಲ ಮಿಸೈಲ್​ಗಳ ಸಾಲಿಗೆ ಇದು ಸೇರ್ಪಡೆಯಾಗುತ್ತದೆ. ಆಗಸ್ಟ್ 20ರಂದು ಇದರ ಯಶಸ್ವಿ ಪರೀಕ್ಷೆಯಾಗಿದ್ದು, ಸದ್ಯದಲ್ಲೇ ವಾಯುಪಡೆಗೆ ಇದು ನಿಯೋಜನೆಗೊಳ್ಳಬಹುದು.

ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಅಗ್ನಿ-5; ಅಮೆರಿಕವನ್ನೂ ತಲುಪಬಲ್ಲುದು ಈ ಮಿಸೈಲ್
ಅಗ್ನಿ-5 ಕ್ಷಿಪಣಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 21, 2025 | 2:02 PM

Share

ನವದೆಹಲಿ, ಆಗಸ್ಟ್ 21: ಒಡಿಶಾದ ಚಂಡೀಪುರದಲ್ಲಿ ನಿನ್ನೆ ಭಾರತ ಅಗ್ನಿ-5 ಕ್ಷಿಪಣಿಯ (Agni-5 Missile) ಯಶಸ್ವಿ ಪರೀಕ್ಷೆ ನಡೆಸಿದೆ. ಇದು ಎಲ್ಲಾ ತಾಂತ್ರಿಕ ಮತ್ತು ಕಾರ್ಯಾತ್ಮಕ ಗುರಿ ಮತ್ತು ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದರೊಂದಿಗೆ ಭಾರತದ ಮಿಲಿಟರಿ ಬತ್ತಳಿಕೆಗೆ ಮಹೋನ್ನತ ಅಸ್ತ್ರವೊಂದು ಜೋಡಿತಗೊಳ್ಳುವುದು ನಿಶ್ಚಿತವಾಗಿದೆ. ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಈ ಕ್ಷಿಪಣಿ ಭಾರತದ ಪಾಲಿಗೆ ಅತಿದೊಡ್ಡ ರಕ್ಷಣಾಸ್ತ್ರವೆನಿಸಿದೆ.

ಡಿಅರ್​ಡಿಒ ಅಭಿವೃದ್ಧಿಪಡಿಸಿರುವ ಅಗ್ನಿ ಸರಣಿಯ ಐದನೇ ಕ್ಷಿಪಣಿಯಾದ ಇದು 5,000 ಕಿಮೀ ದೂರದ ಶ್ರೇಣಿ ಹೊಂದಿದೆ. ಇದೇ ಕ್ಷಿಪಣಿಯನ್ನು 8,000 ಕಿಮೀ ಶ್ರೇಣಿವರೆಗೆ ಹೋಗುವಂತೆ ಅಭಿವೃದ್ಧಪಡಿಸಲು ಅವಕಾಶ ಇದೆ.

ಇದನ್ನೂ ಓದಿ: ಭಾರತದಿಂದ ಒಡಿಶಾದಲ್ಲಿ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿ

ಎಂಐಆರ್​ವಿ ಟೆಕ್ನಾಲಜಿ; ಒಂದೇ ಮಿಸೈಲ್ ಹಲವು ಗುರಿ…

ಅಗ್ನಿ-5 ಕ್ಷಿಪಣಿಯನ್ನು ಎಂಐಆರ್​ವಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಮ್ಮೆ ಮಿಸೈಲ್ ಹಾರಿ ಬಿಟ್ಟರೆ ಇದು ತನ್ನಲ್ಲಿರುವ ವಿವಿಧ ಸಿಡಿತಲೆಗಳನ್ನು ಬಳಸಿ ಒಂದಕ್ಕಿಂತ ಹೆಚ್ಚು ಗುರಿಗಳನ್ನು ಹೊಡೆದುರುಳಿಸಬಲ್ಲುದು. ಅಗ್ನಿ-5 ಕ್ಷಿಪಣಿಯು ಒಟ್ಟು 1.5 ಟನ್ ತೂಕದ ಮೂರು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲುದು. ಮಿಸೈಲ್​ನಲ್ಲಿರುವ ಒಂದೊಂದು ಸಿಡಿತಲೆಯೂ ಕೂಡ ಬೇರ್ಪಟ್ಟು ಪ್ರತ್ಯೇಕ ಟಾರ್ಗೆಟ್ ಅನ್ನು ಅಪ್ಪಳಿಸಬಲ್ಲುದು.

ಭಾರತದ ನ್ಯಾವಿಗೇಶನ್ ಪರಿಕರವಾದ ನ್ಯಾವ್​ಐಸಿ ಹಾಗೂ ಅಮೆರಿಕದ ಜಿಪಿಎಸ್ ನೆಟ್ವರ್ಕ್ ಅನ್ನು ಇದು ಬಳಸುತ್ತದೆ. ಜೊತೆಗೆ ಗೈರೋಸ್ಕೋಪ್ ಆಧಾರಿತ ಸೆನ್ಸಾರ್​ಗಳನ್ನೂ ಇದು ಬಳಸುತ್ತದೆ. ಹೀಗಾಗಿ, ಇದು ನಿಖರವಾಗಿ ತನ್ನ ಗುರಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಭಾರತದ ವಿರುದ್ಧ ಟ್ರಂಪ್ ಕಿವಿಯೂದುತ್ತಿರುವವರು ಯಾರು? ಟ್ರಂಪ್​ಗೆ ಇವರು ಟ್ಯಾರಿಫ್ ಗುರು

ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಿವು…

  1. ರಷ್ಯಾದ ಸತಾನ್-2: 18,000 ಕಿಮೀ ಶ್ರೇಣಿ
  2. ಚೀನಾದ ಡಿಎಫ್-41: 15,000 ಕಿಮೀ ಶ್ರೇಣಿ
  3. ಅಮೆರಿಕದ ಎಲ್​ಜಿಎಂ-35: 15,000 ಕಿಮೀ ಶ್ರೇಣಿ
  4. ಅಮೆರಿಕ, ಬ್ರಿಟನ್​ನ ಟ್ರೈಡೆಂಟ್-2 ಡಿ5: 13,000 ಕಿಮೀ ಶ್ರೇಣಿ
  5. ರಷ್ಯಾದ ಆರ್​ಎಸ್-24 ಯಾರ್ಸ್: 12,000 ಕಿಮೀ ಶ್ರೇಣಿ
  6. ಫ್ರಾನ್ಸ್​ನ ಎಂ51: 10,000 ಕಿಮೀ ಶ್ರೇಣಿ
  7. ರಷ್ಯಾದ ಆರ್-29ಆರ್​ಎಂಯು2.1 ಲೇನರ್: 12,000 ಕಿಮೀ ಶ್ರೇಣಿ
  8. ಅಮೆರಿಕದ ಮೈನೂಟ್​ಮ್ಯಾನ್: 10,000 ಕಿಮೀ ಶ್ರೇಣಿ
  9. ಚೀನಾದ ಜೆಎಲ್-2: 8,000 ಕಿಮೀ ಶ್ರೇಣಿ
  10. ಭಾರತದ ಅಗ್ನಿ-5: 8,000 ಕಿಮೀ ಶ್ರೇಣಿ

ಈ ಮೇಲಿನ ಎಲ್ಲವೂ ಕೂಡ ಎಂಐಆರ್​ವಿ ಟೆಕ್ನಾಲಜಿ ಹೊಂದಿವೆ. ಅಂದರೆ, ಒಂದಕ್ಕಿಂತ ಹೆಚ್ಚು ಟಾರ್ಗೆಟ್​ಗಳನ್ನು ಹೊಡೆಯಬಲ್ಲುವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?