AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tariff brain: ಭಾರತದ ವಿರುದ್ಧ ಟ್ರಂಪ್ ಕಿವಿಯೂದುತ್ತಿರುವವರು ಯಾರು? ಟ್ರಂಪ್​ಗೆ ಇವರು ಟ್ಯಾರಿಫ್ ಗುರು

Peter Navarro, the brain behind Trump's tariff policy: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ವಿರೋಧಿ ಸುಂಕ ನೀತಿಯ ಹಿಂದಿನ ವ್ಯಕ್ತಿ ಅವರ 'ಟ್ಯಾರಿಫ್ ಗುರು' ಪೀಟರ್ ನವರೊ. ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಅಗ್ರೆಸಿವ್ ಅರ್ಥಶಾಸ್ತ್ರಜ್ಞ ಪೀಟರ್ ನವರೋ ಅವರು ಟ್ರಂಪ್​ರ ಆಪ್ತ ಸಲಹೆಗಾರರಾಗಿದ್ದಾರೆ. ಭಾರತದ ಮೇಲಿನ ಶೇ 50 ಸುಂಕ ಮತ್ತು 'ಅಮೆರಿಕಾ ಫಸ್ಟ್' ನೀತಿಗಳ ಹಿಂದಿನ ಮಾಸ್ಟರ್ ಮೈಂಡ್ ನವರೊ ಎಂದು ಪರಿಗಣಿಸಲಾಗಿದೆ. ಪೀಟರ್ ನವರೊ ಯಾರು ಮತ್ತು ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಹೇಗೆ ಹತ್ತಿರವಾದರು ಎಂಬ ವಿವರ ಇಲ್ಲಿದೆ.

Tariff brain: ಭಾರತದ ವಿರುದ್ಧ ಟ್ರಂಪ್ ಕಿವಿಯೂದುತ್ತಿರುವವರು ಯಾರು? ಟ್ರಂಪ್​ಗೆ ಇವರು ಟ್ಯಾರಿಫ್ ಗುರು
ಡೊನಾಲ್ಡ್ ಟ್ರಂಪ್, ಪೀಟರ್ ನವರೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2025 | 4:28 PM

Share

Who is Peter Navarro?: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯ ಟಾರ್ಗೆಟ್ ಆಗಿರುವುದು ಪ್ರಮುಖವಾಗಿ ಭಾರತವೇ. ಟ್ರಂಪ್ ಅವರ ಹುಚ್ಚುತನದ ತೀರ್ಮಾನಗಳ ಹಿಂದೆ ಯಾರಿದ್ದಾರೆ? ಭಾರತದ ಮೇಲೆ ಭಾರೀ ಸುಂಕ ವಿಧಿಸಲು ಟ್ರಂಪ್ ಅವರನ್ನು ಪ್ರಚೋದಿಸುತ್ತಿರುವವರು ಯಾರು? ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಗುರುವಿನ ಹೆಸರು ಪೀಟರ್ ನವರೋ (Peter Navarro). ಈ ಹೆಸರನ್ನು ನೀವು ಬಾರಿ ಬಾರಿ ಕೇಳುತ್ತಿರಬಹುದು. ಭಾರತದ ವ್ಯಾಪಾರ ನೀತಿಯನ್ನು ಮತ್ತು ರಷ್ಯಾದ ತೈಲವನ್ನು ಭಾರತ ಖರೀದಿಸುತ್ತಿರುವುದನ್ನು ಬಹಳ ಕಠಿಣ ಶಬ್ದಗಳಲ್ಲಿ ಆಕ್ಷೇಪಿಸುತ್ತಿರುವ ವ್ಯಕ್ತಿ ಈತನೇ. ಭಾರತದ ಮೇಲೆ ಶೇ. 50ರಷ್ಟು ಸುಂಕ ಹಾಕಬೇಕೆನ್ನುವ ನಿರ್ಧಾರದ ಹಿಂದೆ ಪೀಟರ್ ನವರೋ ಇದ್ದಾರೆ. ಈ ವ್ಯಕ್ತಿ ಭಾರತ ಮಾತ್ರವಲ್ಲ, ಕೆನಡಾ, ಚೀನಾ ಮೊದಲಾದ ದೇಶಗಳನ್ನು ಗುರಿಯಾಗಿಸಿಕೊಂಡೂ ಇವರು ವಾಗ್ದಾಳಿಗಳನ್ನು ಮಾಡುತ್ತಾ ಬಂದಿದ್ದಾರೆ. ಪೀಟರ್ ನವರೋ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಪ್ರಭಾವಿಸುವ ಹಾಗು ಒಂದು ದೇಶದ ಆರ್ಥಿಕ ಮತ್ತು ಹಣಕಾಸು ನೀತಿಯನ್ನು ತೀರಾ ದೊಡ್ಡದಾಗಿ ಬದಲಿಸುವ ಮಟ್ಟಕ್ಕೆ ಹೇಗೆ ಬಂದರು ಎನ್ನುವ ಮಾಹಿತಿ ಇಲ್ಲಿದೆ.

ಪೀಟರ್ ನವರೋ ಯಾರು?

ಪೀಟರ್ ನವರೊ ಒಬ್ಬ ಅಮೇರಿಕನ್ ಅರ್ಥಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕುತೂಹಲವೆಂದರೆ, ಆರಂಭದಲ್ಲಿ ಪೀಟರ್ ನವರೋ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾಗಿದ್ದರು. ಈಗ ಅವರ ನಿಲುವು ಬದಲಾಗಿದೆ. ಅಮೆರಿಕ ಫಸ್ಟ್ ಎನ್ನುವ ಉದ್ದೇಶದಲ್ಲಿ ರೂಪಿಸಲಾಗುವ ವ್ಯಾಪಾರ ನೀತಿಯ ಸಮರ್ಥಕರಾಗಿದ್ದಾರೆ. ಸದ್ಯ, ಟ್ರಂಪ್ ಅವರ ಅತ್ಯಂತ ಆಪ್ತ ಸಲಹೆಗಾರ ಎಂದರೆ ಈತನೇ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ವಿವಿಧ ದೇಶಗಳ ಮೇಲೆ ಟ್ಯಾರಿಫ್ ವಿಧಿಸುವ ನಿರ್ಧಾರದ ಹಿಂದಿನ ಮೆದುಳು ಪೀಟರ್ ನವರೋನದ್ದೇ.

ಇದನ್ನೂ ಓದಿ: ಒಂದೇ ಒಂದು ನಿಷೇಧವು ಭಾರತದ ಡಿಜಿಟಲ್ ಆರ್ಥಿಕತೆಯನ್ನೇ ಸ್ಥಗಿತಗೊಳಿಸಬಹುದು: ಗೌತಮ್ ಅದಾನಿ ಎಚ್ಚರಿಕೆಯ ಕರೆಗಂಟೆ

ಟ್ರಂಪ್ ಮೊದಲ ಅವಧಿಯಲ್ಲೂ ನವರೋಗೆ ಪ್ರಮುಖ ಹುದ್ದೆ

ಟ್ರಂಪ್ ಅವರ ಮೊದಲ ಅವಧಿಯಲ್ಲಿ (2017-2021), ಪೀಟರ್ ನವರೊ ಅವರು ಶ್ವೇತಭವನದಲ್ಲಿ ರಾಷ್ಟ್ರೀಯ ವ್ಯಾಪಾರ ಮಂಡಳಿಯ ನಿರ್ದೇಶಕರಾಗಿದ್ದರು. ಈಗ ಅವರ ಎರಡನೇ ಅವಧಿಯಲ್ಲಿ, ಅವರು ವ್ಯಾಪಾರ ಮತ್ತು ಉತ್ಪಾದನೆಯ ಹಿರಿಯ ಸಲಹೆಗಾರರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ನವರೊ ಅವರನ್ನು ಟ್ರಂಪ್ ಅವರ ಟ್ಯಾರಿಫ್ ನೀತಿಗಳ ಮಾಸ್ಟರ್ ಮೈಂಡ್ ಎಂದು ಕರೆಯಲಾಗುತ್ತದೆ. ಅವರು ಅಮೆರಿಕ ಫಸ್ಟ್ ನೀತಿಯ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ ನವರೋ.

ಟ್ರಂಪ್‌ಗೆ ಪೀಟರ್ ನವರೋ ಹತ್ತಿರವಾಗಿದ್ದು ಹೇಗೆ?

ET ವರದಿಯ ಪ್ರಕಾರ, ಡೊನಾಲ್ಡ್ ಟ್ರಂಪ್ ಮತ್ತು ಪೀಟರ್ ನವರೊ ಅವರನ್ನು ಒಟ್ಟಿಗೆ ತರುವಲ್ಲಿ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ (Jared Kushner) ಪ್ರಮುಖ ಪಾತ್ರ ವಹಿಸಿದ್ದಾರೆ. ನವರೊ ಅವರ “ಡೆತ್ ಬೈ ಚೀನಾ” (Death by China) ಪುಸ್ತಕವನ್ನು ಓದಿದ ನಂತರ ಅದರಿಂದ ಜೇರೆಡ್ ತುಂಬಾ ಪ್ರಭಾವಿತರಾದರು. ಕುಶ್ನರ್ ಅವರನ್ನು ಸಂಪರ್ಕಿಸಿ ಟ್ರಂಪ್ ಪರ ಪ್ರಚಾರ ಮಾಡಲು ಆಹ್ವಾನಿಸಿದರು. ಟ್ರಂಪ್ ಅವರ ಮೊದಲ ಅವಧಿಯಲ್ಲಿ, ಅವರನ್ನು ವ್ಯಾಪಾರ ಸಲಹೆಗಾರರನ್ನಾಗಿ ಮಾಡಲಾಯಿತು. ನವರೊ ಅವರ ಆಕ್ರಮಣಕಾರಿ ನೀತಿ ಶೈಲಿಯಿಂದಾಗಿ, ಸಹೋದ್ಯೋಗಿಗಳೊಂದಿಗೆ ತಿಕ್ಕಾಟ ಇದ್ದೇ ಇದೆ.

ಇದನ್ನೂ ಓದಿ: ಭಾರತಕ್ಕೆ ರಸಗೊಬ್ಬರ, ವಿರಳ ಭೂಖನಿಜ, ಟನಲ್ ಮೆಷಿನ್​ಗಳನ್ನು ಕೊಡಲು ಒಪ್ಪಿದ ಚೀನಾ; ವಾಹನ, ಕೃಷಿ, ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಕ್ಕೆ ಪುಷ್ಟಿ

25% ಹೆಚ್ಚುವರಿ ಸುಂಕ

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕರಾರು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಟ್ರೇಡ್ ಡೀಲ್ ಮಾಡಿಕೊಳ್ಳದಕ್ಕೆ ಭಾರತಕ್ಕೆ ಶೇ. 25ರಷ್ಟು ಸುಂಕ ಪ್ರಕಟಿಸಿದ್ದ ಟ್ರಂಪ್ ಅವರು, ರಷ್ಯಾದ ತೈಲ ಖರೀದಿಸುತ್ತಿರುವ ಕಾರಣಕ್ಕೆ ಭಾರತದ ಮೇಲೆ ಹೆಚ್ಚುವರಿ ಶೇ. 25 ಸುಂಕ ಪ್ರಕಟಿಸಿದ್ದರೆ. ಇದರೊಂದಿಗೆ ಭಾರತದ ಮೇಲೆ ಅಮೆರಿಕ ಶೇ. 50 ಟ್ಯಾರಿಫ್ ಹಾಕಿದಂತಾಗಿದೆ.

ಭಾರತದ ಸರಕುಗಳ ರಫ್ತಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಈಗ ಶೇ. 50 ಸುಂಕ ಹಾಕಿರುವುದು ಭಾರತದ ಹಲವು ರಫ್ತುದಾರರಿಗೆ ಆಘಾತವಾಗಬಹುದು. ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಕ್ಕೂ ಧಕ್ಕೆಯಾಗಿದೆ. ಅಮೆರಿಕ ಈ ಏಕಪಕ್ಷೀಯ ಕ್ರಮದ ಮೂಲಕ ಭಾರತವನ್ನು ರಷ್ಯಾದಿಂದ ದೂರ ಮಾಡುವ ಗುರಿ ಹೊಂದಿರಬಹುದು ಎನ್ನುವ ಅಭಿಪ್ರಾಯಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ