Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್, ದರ್ಶನ್, ಯಶ್ ಫ್ಯಾನ್ಸ್ ಕೂಡ ನನಗಾಗಿ ಪ್ರಾರ್ಥನೆ ಮಾಡಿದ್ದರು: ಶಿವಣ್ಣ

ಸುದೀಪ್, ದರ್ಶನ್, ಯಶ್ ಫ್ಯಾನ್ಸ್ ಕೂಡ ನನಗಾಗಿ ಪ್ರಾರ್ಥನೆ ಮಾಡಿದ್ದರು: ಶಿವಣ್ಣ

ಮದನ್​ ಕುಮಾರ್​
|

Updated on: Mar 05, 2025 | 9:12 PM

ನಟ ಶಿವರಾಜ್​ಕುಮಾರ್​ ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಆಪರೇಷನ್ ಆದ ಬಳಿಕ ಅವರು ‘ಟಿವಿ9’ ಜತೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶಿವಣ್ಣ ಅವರು ಆದಷ್ಟು ಬೇಗ ಗುಣಮುಖರಾಗಲಿ ಅಂತ ಬೇರೆ ನಟರ ಫ್ಯಾನ್ಸ್ ಕೂಡ ಪ್ರಾರ್ಥನೆ ಮಾಡಿದ್ದರು. ಆ ಬಗ್ಗೆ ಶಿವರಾಜ್​ಕುಮಾರ್​ ಮಾತನಾಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್​   ಅವರು ಕ್ಯಾನ್ಸರ್ ಜಯಿಸಿ ಬಂದಿದ್ದಾರೆ. ಸರ್ಜರಿ ಬಳಿಕ ಅವರು ಟಿವಿ9 ಜೊತೆ ಮಾತನಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಿವಣ್ಣ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು. ಅಭಿಮಾನಿಗಳು ಎಂದರೆ ಕೇವಲ ಶಿವರಾಜ್​ಕುಮಾರ್​ ಅವರ ಅಭಿಮಾನಿಗಳು ಮಾತ್ರವಲ್ಲ. ಸುದೀಪ್, ದರ್ಶನ್, ಯಶ್, ಗಣೇಶ್, ಧ್ರುವ ಸರ್ಜಾ, ದುನಿಯಾ ವಿಜಯ್ ಮುಂತಾದ ಹೀರೋಗಳ ಫ್ಯಾನ್ಸ್ ತಮಗಾಗಿ ಪ್ರಾರ್ಥಿಸಿದ್ದರು ಎಂದು ಶಿವಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.