AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ಚಿತ್ರರಂಗದ ಖ್ಯಾತ ನಟ ಮದನ್ ಬಾಬ್ ನಿಧನ; ಕ್ಯಾನ್ಸರ್​ನಿಂದ ವಿಧಿವಶ

ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದ ನಟ ಮದನ್ ಬಾಬ್ ಅವರು ಚೈನ್ನೈನಲ್ಲಿ ಶನಿವಾರ (ಆ.3) ನಿಧನರಾದರು. ನಟನೆ ಮಾತ್ರವಲ್ಲದೇ ಸಂಗೀತದಲ್ಲಿ ಕೂಡ ಅವರಿಗೆ ಆಸಕ್ತಿ ಇತ್ತು. ಮದನ್ ಬಾಬ್ ಅವರ ನಿಧನದಿಂದ ತಮಿಳು ಚಿತ್ರಕ್ಕೆ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ. ಹಲವು ಸೆಲೆಬ್ರಿಟಿಗಳು ಕಂಬಿ ಮಿಡಿಯುತ್ತಿದ್ದಾರೆ.

ತಮಿಳು ಚಿತ್ರರಂಗದ ಖ್ಯಾತ ನಟ ಮದನ್ ಬಾಬ್ ನಿಧನ; ಕ್ಯಾನ್ಸರ್​ನಿಂದ ವಿಧಿವಶ
Madhan Bob
ಮದನ್​ ಕುಮಾರ್​
|

Updated on: Aug 03, 2025 | 12:30 PM

Share

ನೂರಾರು ಸಿನಿಮಾಗಳಲ್ಲಿ ಅಭಿನಯಿಸಿ, ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ಮದನ್ ಬಾಬ್ (Madhan Bob) ಅವರು ನಿಧನರಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಮದನ್ ಬಾಬ್ ಅವರಿಗೆ 71 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್​ನಿಂದ (Cancer) ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ. ಚೆನ್ನೈನಲ್ಲಿ ಶನಿವಾರ (ಆಗಸ್ಟ್ 2) ಸಂಜೆ ಅವರು ನಿಧನರಾಗಿದ್ದು, ಅನೇಕ ಸೆಲೆಬ್ರಿಟಿಗಳು ಕಂಬಿನಿ ಮಿಡಿದಿದ್ದಾರೆ. ಮನದ ಬಾಬ್ ಅವರ ಮೂಲ ಹೆಸರು ಎಸ್. ಕೃಷ್ಣಮೂರ್ತಿ. ಚಿತ್ರರಂಗದಲ್ಲಿ ಅವರು ಮದನ್ ಬಾಬ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು.

ಮದನ್ ಬಾಬ್ ಅವರ ನಿಧನದಿಂದ ಚಿತ್ರರಂಗದಲ್ಲಿ ಶೋಕ ಆವರಿಸಿದೆ. ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್, ಸೂರ್ಯ, ವಿಜಯ್ ಮುಂತಾದ ಸ್ಟಾರ್ ಕಲಾವಿದರ ಸಿಮಾಗಳಲ್ಲಿ ಮದನ್ ಬಾಬ್ ನಟಿಸಿದ್ದರು. ಅವರು ನಿಭಾಯಿಸಿದ್ದ ಕಾಮಿಡಿ ಪಾತ್ರಗಳನ್ನು ಅಭಿಮಾನಿಗಳು ತುಂಬ ಇಷ್ಟಪಟ್ಟಿದ್ದರು. ನೂರಾರು ಸಿನಿಮಾಗಳಲ್ಲಿ ಮದನ್ ಬಾಬ್ ಅವರು ಅಭಿನಯಿಸಿದ್ದರು.

ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಮದನ್ ಬಾಬ್ ಅವರು ಕೆಲಸ ಮಾಡಿದ್ದರು. ಟಿವಿ ಕಾಮಿಡಿ ಶೋಗಳಲ್ಲಿ ಜಡ್ಜ್ ಆಗಿ ಅವರು ಕಾಣಿಸಿಕೊಂಡಿದ್ದರು. ಮಲಯಾಳಂ, ತೆಲುಗು ಮತ್ತು ಹಿಂದಿಯ ಕೆಲವು ಸಿನಿಮಾಗಳಲ್ಲಿ ಕೂಡ ಅವರ ನಟಿಸಿದ್ದರು. ಮದನ್ ಬಾಬ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.

ನಟ, ನಿರ್ದೇಶಕ, ನೃತ್ಯ ಸಂಯೋಜಕ ಪ್ರಭುದೇವರ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ನಾವು ಒಟ್ಟಿಗೆ ತೆರೆ ಹಂಚಿಕೊಂಡಿದ್ದೆವು. ಅವರಿಂದಾಗಿ ಸೆಟ್​​ನಲ್ಲಿ ಸಂತಸ ಇರುತ್ತಿತ್ತು. ತಮ್ಮ ಸುತ್ತಮುತ್ತ ಇರುವ ಎಲ್ಲರನ್ನೂ ನಗಿಸುತ್ತಿದ್ದರು. ಅವರ ಕುಟುಂಬಕ್ಕೆ ಸಂತಾಪಗಳು. ಅವರು ಯಾವಾಗಲೂ ನಮ್ಮ ನೆನಪಿನಲ್ಲಿ ಇರುತ್ತಾರೆ’ ಎಂದು ಪ್ರಭುದೇವ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದು: ರಕ್ತ ಕ್ಯಾನ್ಸರ್‌ಗೆ ಕಾರಣವೇನು? ನಿಮ್ಮಲ್ಲಿ ಕ್ಯಾನ್ಸರ್‌ ಸೂಚನೆ ಕಂಡರೆ ಏನು ಮಾಡಬೇಕು?

ಅಭಿನಯ ಮಾತ್ರವಲ್ಲದೇ ಸಂಗೀತದಲ್ಲಿ ಸಹ ಮದನ್ ಬಾಬ್ ಅವರು ಆಸಕ್ತಿ ಹೊಂದಿದ್ದರು. ಅವರು ಕೀಬೋರ್ಟ್ ವಾದಕರಾಗಿದ್ದರು. ಅವರ ನಿಧನದಿಂದ ಕಾಲಿವುಡ್ ಚಿತ್ರರಂಗಕ್ಕೆ ನಷ್ಟ ಉಂಟಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.