AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cancer Day 2025: ರಕ್ತ ಕ್ಯಾನ್ಸರ್‌ಗೆ ಕಾರಣವೇನು? ನಿಮ್ಮಲ್ಲಿ ಕ್ಯಾನ್ಸರ್‌ ಸೂಚನೆ ಕಂಡರೆ ಏನು ಮಾಡಬೇಕು?

ಇಂದು ವಿಶ್ವ ಕ್ಯಾನ್ಸರ್‌ ದಿನ, ಕ್ಯಾನ್ಸರ್‌ ನಲ್ಲಿ ಅನೇಕ ವಿಧಗಳು, ಅದರಲ್ಲಿ ಒಂದು ರಕ್ತದ ಕ್ಯಾನ್ಸರ್‌. ಹೆಸರು ಕೇಳಿದರೇನೇ ಭಯ ಹುಟ್ಟಿಸುವ ರೋಗ, ಇದಕ್ಕೆ ಸರಿಯಾದ ಮದ್ದು ಇಲ್ಲದಿದ್ದರೆ ಸಾವು ಖಂಡಿತ, ಇದು ರೋಗಿಯನ್ನು ಮಾನಸಿಕವಾಗಿಯೇ ಕುಗ್ಗಿಸಿಬಿಡುತ್ತದೆ. ಅದಕ್ಕಾಗಿ ಮುನ್ನೆಚ್ಚರಿಕೆಯಿಂದ ಇರಲು ವೈದ್ಯರು ಸಲಹೆ ನೀಡುತ್ತಾರೆ. ರಕ್ತ ಕ್ಯಾನ್ಸರ್‌ಗೆ ಕಾರಣವೇನು? ಕ್ಯಾನ್ಸರ್‌ ಸೂಚನೆ ಕಂಡರೆ ಏನು ಮಾಡಬೇಕು? ಎಂಬ ಬಗ್ಗೆ ಕೆಎಂಸಿ ಆಸ್ಪತ್ರೆ ಬಿ ಆರ್‌ ಅಂಬೇಡ್ಕರ್‌ ವೃತ್ತ ಮಂಗಳೂರು ಇದರ ಕನ್ಸಲ್ಟೆಂಟ್‌ ಹಮೆಟೊಲೊಜಿ ಡಾ. ಪ್ರಶಾಂತ ಬಿ ತಿಳಿಸಿದ್ದಾರೆ.

World Cancer Day 2025: ರಕ್ತ ಕ್ಯಾನ್ಸರ್‌ಗೆ ಕಾರಣವೇನು? ನಿಮ್ಮಲ್ಲಿ ಕ್ಯಾನ್ಸರ್‌ ಸೂಚನೆ ಕಂಡರೆ ಏನು ಮಾಡಬೇಕು?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 04, 2025 | 10:38 AM

Share

ರಕ್ತದ ಕ್ಯಾನ್ಸರ್‌ . ಹೆಸರು ಕೇಳಿದರೇನೇ ಭಯ ಹುಟ್ಟಿಸುವ ರೋಗ ಸರಿಯಾದ ಮದ್ದು ಇಲ್ಲದಿದ್ದರೆ ಸಾವಿಗೆ ಗುರಿ ಮಾಡುವ ಈ ರೋಗ ರೋಗಿಯನ್ನು ಮಾನಸಿಕವಾಗಿಯೇ ಕುಗ್ಗಿಸಿಬಿಡುತ್ತದೆ. ಪ್ರತಿ ವರ್ಷ ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ರಕ್ತದ ಕ್ಯಾನ್ಸರ್‌ ಭಾರತದಲ್ಲಿ ಪತ್ತೆಯಾಗುತ್ತಿದೆ. ಜತೆಗೆ ನಮ್ಮ ದೇಶದಲ್ಲಿ ಸಾವಿಗೆ ಕಾರಣವಾಗುವ 9ನೇ ಸಾಮಾನ್ಯ ಕಾರಣ ಎಂದು ವರದಿಯಾಗುತ್ತದೆ. ಕ್ಯಾನ್ಸರ್‌ಗೆ ನಮ್ಮ ದೇಶ ಮಾತ್ರವಲ್ಲ ಎಲ್ಲಾ ರಾಷ್ಟ್ರಗಳಲ್ಲಿ ಭಯ ಇದ್ದೇ ಇದೆ. ಆದರೆ ರೋಗ ಲಕ್ಷಣಗಳ ಬಗ್ಗೆ ಜೊತೆಗೆ ಜೀವನಶೈಲಿಯನ್ನು ಆರೋಗ್ಯವಾಗಿಟ್ಟುಕೊಳ್ಳುವ ಬಗ್ಗೆ ಅರಿವು ಕಡಿಮೆ. ಚಿಕಿತ್ಸೆಗೆ ಹೆದರಿಯೇ ವೈದ್ಯರ ಬಳಿ ಹೋಗದವರೂ ಇದ್ದಾರೆ. ಆದರೆ ಕೇಳಿ, ಎಷ್ಟು ಬೇಗ ಆರೋಗ್ಯ ಸಮಸ್ಯೆಯನ್ನು ಗುರುತಿಸಿ ವೈದ್ಯರ ಬಳಿ ಪರೀಕ್ಷೆಗೆ ಒಳಪಡುತ್ತೀರೋ ಅಷ್ಟು ಪರಿಣಾಮಕಾರಿಯಾಗಿ ಕ್ಯಾನ್ಸರ್‌ನಿಂದ ಮುಕ್ತವಾಗಬಹುದು.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಬಹುತೇಕ ಆನುವಂಶಿಕವಾಗಿ ಬರುವಂತದ್ದೆ ಆದರೆ ವಯಸ್ಕರಲ್ಲಿ ಪತ್ತೆಯಾಗುವ ಕ್ಯಾನ್ಸರ್‌ಗೆ ನಿಖರ ಕಾರಣ ಹುಡುಕುವುದು ಕಷ್ಟವಾಗುತ್ತದೆ. ರಕ್ತದ ಕ್ಯಾನ್ಸರ್‌ಗೆ ಸಂಬಂಧಿಸಿ ಸಾಕಷ್ಟು ಸೊಮ್ಯಾಟಿಕ್‌ ಮ್ಯೂಟೇಶನ್ಸ್‌ ( ದೈಹಿಕ ರೂಪಾಂತರಗಳು) ಇರುವ ಕಾರಣ ಈ ರೂಪಾಂತರಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಆದರೆ ಈ ರೂಪಾಂತರವನ್ನು ಅರಿತುಕೊಂಡು ವೈದ್ಯಕೀಯ ರಂಗ ನಿಖರವಾಗಿ ಟಾರ್ಗೆಟ್‌ ಮಾಡುವ ಥೆರಪಿಗಳನ್ನು ಅಭಿವೃದ್ಧಿಗೊಳಿಸಿದೆ. ಹೀಗಾಗಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಈಗ ಸಾಕಷ್ಟು ಬದಲಾವಣೆಗಳು ಹಾಗೂ ಕ್ಯಾನ್ಸರ್‌ ಗುಣಪಡಿಸುವ ಪ್ರಮಾಣವೂ ಹೆಚ್ಚಾಗಿದೆ.

ರಕ್ತ ಕ್ಯಾನ್ಸರ್‌ಗೆ ಕಾರಣವೇನು?

ನಿಖರವಾದ ಕಾರಣವಲ್ಲದಿದ್ದರೂ ಬಹುತೇಕ ಪ್ರಕರಣಗಳಲ್ಲಿ ಕಂಡುಬರುವ ಅಂಶಗಳು ವ್ಯಕ್ತಿಯ ಜೀವನಶೈಲಿಗೆ ಅವಲಂಬಿತವಾಗಿದೆ. ಅತಿಯಾದ ಧೂಮಪಾನ, ಅತಿಯಾದ ರೆಡ್‌ ಮೀಟ್‌ ಸೇವನೆ, ವಿಕೀರಣಕ್ಕೆ ಹೆಚ್ಚು ಒಡ್ಡಿಕೊಳ್ಳುವುದು, ಕೆಲವು ವೈರಲ್‌ ಸೋಂಕುಗಳು, ನಾರ್ಕೊಟಿಕ್‌ ವಸ್ತುಗಳ ಬಳಕೆ, ಕೀಟನಾಶಕಗಳು ದೇಹ ಸೇರುವುದು, ಬೊಜ್ಜು, ಅಟೋಇಮ್ಯೂನ್‌ ರೋಗ ( ದೇಹದ ಪ್ರತಿರೋಧಕ ವ್ಯವಸ್ಥೆ ನರಗಳ ಮೇಲೆ ದಾಳಿ ನಡೆಸುವ ಸಮಸ್ಯೆ), ಈ ಮೊದಲೇ ಕಾಡಿದ ಕ್ಯಾನ್ಸರ್‌ಗೆ ನೀಡಿದ ಕೆಲವು ಚಿಕಿತ್ಸೆ..

ಮೊದಲು ನಿಧಾನವಾಗಿ ಯಾವುದೇ ಸೂಚನೆ ಕೊಡದೆ ರಕ್ತ ಕ್ಯಾನ್ಸರ್‌ ದೇಹವನ್ನು ಹಿಂಡಲು ಆರಂಭಿಸುತ್ತದೆ. ಪದೇ ಪದೇ ಸೋಂಕಿಗೆ ಒಳಗಾಗುವುದು, ಪದೇ ಪದೇ ಜ್ವರ ಕಾಣಿಸಿಕೊಳ್ಳುವುದು. ತೂಕದಲ್ಲಿ ದಿಢೀರ್‌ ಇಳಿಕೆ, ರಾತ್ರಿ ಸಮಯದಲ್ಲಿ ಬೆವರು ಹೆಚ್ಚಾಗುವ ಬೆವರು, ಕುತ್ತಿಗೆ, ಕಂಕುಳಲ್ಲಿ ಬಾವು, ದಂತದಲ್ಲಿ ರಕ್ತ, ಚರ್ಮದ ಮೇಲೆ ಕೆಂಪು ನೀಲಿ ಬಣ್ಣದ ಕಲೆ, ರಕ್ತ ಸೋರುವುದು, ಬಿಳಿ ರಕ್ತ ಕಣದಲ್ಲಿ ಏರಿಕೆ , ಹಿಮೋಗ್ಲೋಬಿನ್‌ ಮತ್ತು ಪ್ಲೇಟ್ಲೇಟ್ಸ್‌ ಸಂಖ್ಯೆಯಲ್ಲಿ ಇಳಿಕೆ ಇವು ರಕ್ತ ಕ್ಯಾನ್ಸರ್‌ನ ಸೂಚನೆಯನ್ನು ನೀಡುತ್ತವೆ. ಈ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಕಡೆಗಣಿಸದೇ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಎಂದರೇನು? ತಡೆಗಟ್ಟುವುದು ಹೇಗೆ ತಿಳಿದುಕೊಳ್ಳಿ

ಕ್ಯಾನ್ಸರ್‌ ಸೂಚನೆ ಕಂಡರೆ ಏನು ಮಾಡಬೇಕು?

ಶೀಘ್ರ ಚಿಕಿತ್ಸೆ ಬಿದ್ದಲ್ಲಿ ಕ್ಯಾನ್ಸರ್‌ನ್ನು ಗುಣಪಡಿಸಬಹುದು ಅಥವಾ ತೀವ್ರತೆಯನ್ನು ತಗ್ಗಿಸಬಹುದು. ರಕ್ತ ಕ್ಯಾನ್ಸರ್‌ನಲ್ಲಿ ಕೂಡ ವಿಧವಿದೆ. ಅದಕ್ಕನುಗುಣವಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಲಕ್ಷಣಗಳು ಕಂಡ ಬಳಿಕ ಮೊದಲು ಆತಂಕಗೊಳ್ಳದೇ , ಕ್ಯಾನ್ಸರ್‌ ತಜ್ಞ ವೈದ್ಯರು (ಹೆಮೆಟೊಲಾಜಿಸ್ಟ್‌, ಒನ್ಕೊಲಾಜಿಸ್ಟ್‌) ಕೂಡಲೇ ಸಂಪರ್ಕಿಸುವುದು. ರೋಗಿಯ ಸಂಬಂಧಿಕರು ಈ ಹಂತದಲ್ಲಿ ರೋಗಿಗೆ ಮಾನಸಿಕ ಧೈರ್ಯ ಹೇಳಬೇಕು.

ಲ್ಯುಕೇಮಿಯಾ ಸರಳವಾದ ರಕ್ತ ಪರೀಕ್ಷೆಯಲ್ಲಿಯೇ ಪತ್ತೆಹಚ್ಚಬಹುದು. ಆದರೆ ಲಿಂಫೋಮಾಸ್‌ ಆದಲ್ಲಿ ಕೆಲವು ಕ್ಲಿಷ್ಟಕರವಾದ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.ಟಿಶ್ಶು ಬಯಾಫ್ಸಿ ಅಥವಾ ಲಿಂಫ್‌ ನೋಡ್‌ ಪರೀಕ್ಷೆ ನಡೆಸಲಾಗುತ್ತದೆ. ಸೆಲ್ಯುಲಾರ್‌ ಥೆರಪಿ, ಇಮ್ಯುನೋಥೆರಫಿ , ಕಾರ್‌-ಟಿ ಥೆರಪಿ ಕೂಡ ಮಹತ್ವದ್ದಾಗಿದೆ. ಮುಂದುವರೆದ ಅಧ್ಯಯನದಲ್ಲಿ ರಕ್ತ ಕ್ಯಾನ್ಸರ್‌ ಗುಣಪಡಿಸುವ ಪ್ರಮಾಣ ಈಗ 60%-70% ಕ್ಕೆ ಏರಿಕೆಯಾಗಿದೆ. ಈ ಮೊದಲು 5%-20%ರಷ್ಟು ಮಾತ್ರ ಇತ್ತು.

ಸರಕಾರದ ಸಹಕಾರವೂ ಮುಖ್ಯ : ಕ್ಯಾನ್ಸರ್‌ಗೆ ವೈದ್ಯಕೀಯ ರಂಗದಲ್ಲಿ ಸಾಕಷ್ಟು ಹೊಸ ಚಿಕಿತ್ಸೆಗಳು, ಪರಿಣಾಮಕಾರಿ ಎಂದು ಸಾಬೀತಾಗಿವೆ. ಆದರೆ ಹಲವು ಚಿಕಿತ್ಸೆ ಸಾಮಾನ್ಯ ಜನರಿಗೆ ದುಬಾರಿ ಎನಿಸಿದೆ. ಹೀಗಾಗಿ ಚಿಕಿತ್ಸೆ ಇನ್ನೂ ಪರಿಣಾಮಕಾರಿಯಾಗಲು ಸರಕಾರಗಳು ಚಿಕಿತ್ಸೆಯ, ಔಷಧಿಗಳ ಬೆಲೆಯನ್ನು ತಗ್ಗಿಸಬೇಕು. ಇದು ರೋಗಿಗೆ ಮಾನಸಿಕ ಸ್ಥಯರ್ಯವನ್ನು ನೀಡಬಲ್ಲದು.

ಯುನೈಟೆಡ್‌ ಬಾಯ್‌ ಯುನಿಕ್‌ : ಪ್ರತಿಯೊಬ್ಬ ಕ್ಯಾನ್ಸರ್‌ ರೋಗಿಯೂ ವಿಶೇಷ, ವಿಭಿನ್ನ. ಪ್ರತಿಯೊಬ್ಬರಲ್ಲೂ ಭಿನ್ನವಾದ ಕಥೆಗಳಿವೆ, ಭಿನ್ನವಾದ ಚಿಕಿತ್ಸೆಗೆ ಗುರಿಯಾಗಬೇಕು. ಪ್ರತಿ ರೋಗಿಯ ಪೋಷಕನಲ್ಲೂ ವಿಶೇಷವಾದ ಪ್ರಾರ್ಥನೆ ಇದೆ. ಮಾನಸಿಕ ಬೆಂಬಲ, ಸೂಕ್ತವಾದ ಚಿಕಿತ್ಸೆ, ಸರಿಯಾದ ಆರೈಕೆಯಿಂದ ರೋಗಿ ಗುಣಮುಖವಾಗುವ ಪ್ರಮಾಣ ಅಧಿಕವಾಗುತ್ತದೆ. ಹೀಗಾಗಿ ಈ ಬಾರಿಯ ಕ್ಯಾನ್ಸರ್‌ ಜಾಗೃತಿ ದಿನದ ಧ್ಯೇಯವಾಕ್ಯ ವಿಭಿನ್ನತೆಯಲ್ಲಿ ಒಗ್ಗಟ್ಟು ಎಂದು ಘೋಷಿಸಲಾಗಿದೆ.

ಡಾ. ಪ್ರಶಾಂತ ಬಿ. ಕನ್ಸಲ್ಟೆಂಟ್‌ ಹಮೆಟೊಲೊಜಿ, ಕೆಎಂಸಿ ಆಸ್ಪತ್ರೆ ಬಿ ಆರ್‌ ಅಂಬೇಡ್ಕರ್‌ ವೃತ್ತ ಮಂಗಳೂರು

ಅರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ