‘ಅರ್ಜುನ್ ರೆಡ್ಡಿ’ ಸಿನಿಮಾ ನೋಡಿ ಸಂದೀಪ್​ಗೆ ಮೆಸೇಜ್ ಮಾಡಿದ್ದ ರಣಬೀರ್; ಇದನ್ನು ಅವರು ನೋಡಲೇ ಇಲ್ಲ

‘ಒಂದೊಮ್ಮೆ ರಣಬೀರ್ ಕಪೂರ್ ಕಳುಹಿಸಿದ್ದ ಮೆಸೇಜ್​ನ ಸಂದೀಪ್ ನೋಡಿದ್ದರೆ, ಆ ಬಳಿಕ ಅವರು ಮಾತನಾಡಿದ್ದರೆ ‘ಕಬೀರ್ ಸಿಂಗ್’ ಸಿನಿಮಾದಲ್ಲಿ ಶಾಹಿದ್ ಕಪೂರ್ ಬದಲಿಗೆ ರಣಬೀರ್​ಗೆ ಆಫರ್ ನೀಡುತ್ತಿದ್ದಿರೇ’ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಇಲ್ಲ ಎನ್ನುವ ಉತ್ತರ ಸಂದೀಪ್ ಕಡೆಯಿಂದ ಬಂದಿದೆ. ‘ರಣಬೀರ್ ಕಪೂರ್​ಗೆ ರಿಮೇಕ್ ಸಿನಿಮಾಗಳಲ್ಲಿ ನಟಿಸೋಕೆ ಇಷ್ಟವಿರಲಿಲ್ಲ. ಅದು ನನಗೆ ಗೊತ್ತಿತ್ತು’ ಎಂದಿದ್ದಾರೆ.

‘ಅರ್ಜುನ್ ರೆಡ್ಡಿ’ ಸಿನಿಮಾ ನೋಡಿ ಸಂದೀಪ್​ಗೆ ಮೆಸೇಜ್ ಮಾಡಿದ್ದ ರಣಬೀರ್; ಇದನ್ನು ಅವರು ನೋಡಲೇ ಇಲ್ಲ
ಸಂದೀಪ್ ರೆಡ್ಡಿ ವಂಗ, ರಣಬೀರ್​ ಕಪೂರ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Feb 04, 2024 | 3:26 PM

ಬಾಲಿವುಡ್​ ನಟ ರಣಬೀರ್ ಕಪೂರ್ (Ranbir Kapoor) ಹಾಗೂ ತೆಲುಗು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಮೊದಲ ಬಾರಿಗೆ ಒಂದಾಗಿದ್ದು ಅನಿಮಲ್’ (Animal) ಸಿನಿಮಾಗಾಗಿ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದ್ದು ಬರೋಬ್ಬರಿ 900 ಕೋಟಿ ರೂಪಾಯಿ. ಈ ಸಿನಿಮಾ ಒಂದು ವರ್ಗದ ಜನರಿಗೆ ಇಷ್ಟ ಆಗಿಲ್ಲ. ಇನ್ನೂ ಕೆಲವರು ಚಿತ್ರವನ್ನು ಟೀಕೆ ಮಾಡಿದ್ದಾರೆ. ಸಿನಿಮಾದಲ್ಲಿ ಸ್ತ್ರೀದ್ವೇಷ ಇದೆ, ಹೆಣ್ಣುಮಕ್ಕಳನ್ನು ಕೀಳಾಗಿ ನೋಡಲಾಗಿದೆ ಎಂದು ಅನೇಕರು ಟೀಕೆ ಮಾಡಿದ್ದರು. ಆದರೆ, ರಣಬೀರ್ (Ranbir Kapoor) ಮಾತ್ರ ಸಂದೀಪ್ ಕೆಲಸವನ್ನು ಭರ್ಜರಿಯಾಗಿ ಮೆಚ್ಚಿಕೊಂಡಿದ್ದಾರೆ. ‘ಅರ್ಜುನ್ ರೆಡ್ಡಿ’ ಸಿನಿಮಾ ನೋಡಿದಾಗಲೇ ಸಂದೀಪ್ ಕೆಲಸ ರಣಬೀರ್​ಗೆ ಇಷ್ಟ ಆಗಿತ್ತು. ಈ ಬಗ್ಗೆ ಅವರು ಮೆಸೇಜ್ ಮಾಡಿ ಹೇಳಿದ್ದರು. ಆದರೆ, ಈ ಮೆಸೇಜ್​ನ ಸಂದೀಪ್ ನೋಡಿರಲೇ ಇಲ್ಲ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

‘ದೈನಿಕ್ ಭಾಸ್ಕರ್​’ಗೆ ನೀಡಿದ ಸಂದರ್ಶನದಲ್ಲಿ ಸಂದೀಪ್ ರೆಡ್ಡಿ ವಂಗ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ಅವರು ಹೇಗೆ ರಣಬೀರ್ ಕಪೂರ್ ಕಳುಹಿಸಿದ ಮೆಸೇಜ್​ನ ಮಿಸ್ ಮಾಡಿಕೊಂಡರು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಈಗ ಎಲ್ಲರೂ ವಾಟ್ಸಾಪ್​ ಬಳಕೆ ಮಾಡುತ್ತಾರೆ. ಇದರಿಂದ ಟೆಕ್ಸ್ಟ್​ ಮೆಸೇಜ್ ನೋಡುವವರ ಸಂಖ್ಯೆ ಕಡಿಮೆ. ಸಂದೀಪ್​ಗೆ ಆದ ಸಮಸ್ಯೆ ಕೂಡ ಇದೇ. ‘ರಣಬೀರ್ ಕಪೂರ್ ಅವರು ನನಗೆ ಮೆಸೇಜ್ ಮಾಡಿದ್ದರು. ವಾಟ್ಸಾಪ್ ಬಂದ ಬಳಿಕ ಮೆಸೇಜ್ ಬಾಕ್ಸ್ ನೋಡುವ ಅಭ್ಯಾಸ ತಪ್ಪೇ ಹೋಗಿತ್ತು. ರಣಬೀರ್ ಕಪೂರ್ ಭೇಟಿ ಆದಾಗ ಈ ವಿಚಾರ ಹೇಳಿಕೊಂಡಿದ್ದರು. ರಣಬೀರ್ ರೀತಿ ನಾನು ಅನಿಲ್ ಕಪೂರ್ ಅವರ ಮೆಸೇಜ್​ನ ಕೂಡ ಮಿಸ್ ಮಾಡಿಕೊಂಡಿದ್ದೆ’ ಎಂದು ಸಂದೀಪ್ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ‘ಹೋಗಿ ಆಮಿರ್​ನ ಪ್ರಶ್ನೆ ಮಾಡಲಿ’; ತಮ್ಮ ಸಿನಿಮಾ ಟೀಕಿಸಿ ಕಿರಣ್ ರಾವ್​​ಗೆ ‘ಅನಿಮಲ್’ ನಿರ್ದೇಶಕನ ಉತ್ತರ

‘ಒಂದೊಮ್ಮೆ ರಣಬೀರ್ ಕಪೂರ್ ಕಳುಹಿಸಿದ್ದ ಮೆಸೇಜ್​ನ ಸಂದೀಪ್ ನೋಡಿದ್ದರೆ, ಆ ಬಳಿಕ ಅವರು ಮಾತನಾಡಿದ್ದರೆ ‘ಕಬೀರ್ ಸಿಂಗ್’ ಸಿನಿಮಾದಲ್ಲಿ ಶಾಹಿದ್ ಕಪೂರ್ ಬದಲಿಗೆ ರಣಬೀರ್​ಗೆ ಆಫರ್ ನೀಡುತ್ತಿದ್ದಿರೇ’ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಇಲ್ಲ ಎನ್ನುವ ಉತ್ತರ ಸಂದೀಪ್ ಕಡೆಯಿಂದ ಬಂದಿದೆ. ‘ರಣಬೀರ್ ಕಪೂರ್​ಗೆ ರಿಮೇಕ್ ಸಿನಿಮಾಗಳಲ್ಲಿ ನಟಿಸೋಕೆ ಇಷ್ಟವಿರಲಿಲ್ಲ. ಅದು ನನಗೆ ಗೊತ್ತಿತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾದ ನಟಿ ತೃಪ್ತಿ ದಿಮ್ರಿ ಬಾಯ್​ಫ್ರೆಂಡ್​ ಫೋಟೋ ವೈರಲ್​

ರಣಬೀರ್ ಕಪೂರ್ ಅವರ ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್ ಮೊದಲಾದವರು ನಟಿಸಿದ್ದಾರೆ. ಎಲ್ಲರ ನಟನೆಯನ್ನು ಮೆಚ್ಚಿಕೊಳ್ಳಲಾಗಿದೆ. ಆದರೆ, ಒಂದು ಕೆಟ್ಟ ಚಿತ್ರಕ್ಕೆ ಕಲಾವಿದರನ್ನು ಬಳಕೆ ಮಾಡಿಕೊಂಡಂತೆ ಆಗಿದೆ ಎನ್ನುವ ಟೀಕೆಯೂ ಕೇಳಿಬಂದಿದೆ. ಒಂದು ವರ್ಗದ ಜನರು ಚಿತ್ರವನ್ನು ಹೊಗಳುತ್ತಿದ್ದಾರೆ. ಈ ಸಿನಿಮಾ ಯಶಸ್ಸಿನ ಬಳಿಕ ‘ಅನಿಮಲ್ ಪಾರ್ಕ್’ ಸಿನಿಮಾ ಮಾಡಲು ಮುಂದಾಗಿದ್ದಾರೆ ಸಂದೀಪ್ ರೆಡ್ಡಿ ವಂಗ. ಈ ಚಿತ್ರದಲ್ಲಿ ಹಲವು ಸ್ಟಾರ್​ಗಳು ಕೆಲಸ ಮಾಡೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್