‘ಹೋಗಿ ಆಮಿರ್​ನ ಪ್ರಶ್ನೆ ಮಾಡಲಿ’; ತಮ್ಮ ಸಿನಿಮಾ ಟೀಕಿಸಿ ಕಿರಣ್ ರಾವ್​​ಗೆ ‘ಅನಿಮಲ್’ ನಿರ್ದೇಶಕನ ಉತ್ತರ

‘ಕಬೀರ್ ಸಿಂಗ್’ ಹಾಗೂ ‘ಅನಿಮಲ್’ ಚಿತ್ರದ ಮಧ್ಯೆ ಸಾಕಷ್ಟು ಹೋಲಿಕೆ ಇದೆ. ಎರಡೂ ಸಿನಿಮಾಗಳಲ್ಲಿ ಸ್ತ್ರೀ ದ್ವೇಷ ಇದೆ. ಗೊತ್ತು ಗುರಿ ಇಲ್ಲದೆ ಸಿನಿಮಾದ ಕಥೆ ಸಾಗುತ್ತದೆ. ಚಿತ್ರದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಶಬ್ದ ಬಳಕೆ ಮಾಡಲಾಗಿದೆ. ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎನ್ನುವ ಆರೋಪ ಇದೆ. ಕಿರಣ್ ರಾವ್ ಅವರು ಈ ರೀತಿಯ ಸಿನಿಮಾಗಳ ಬಗ್ಗೆ ಅಪಸ್ವರ ತೆಗೆದಿದ್ದರು.

‘ಹೋಗಿ ಆಮಿರ್​ನ ಪ್ರಶ್ನೆ ಮಾಡಲಿ’; ತಮ್ಮ ಸಿನಿಮಾ ಟೀಕಿಸಿ ಕಿರಣ್ ರಾವ್​​ಗೆ ‘ಅನಿಮಲ್’ ನಿರ್ದೇಶಕನ ಉತ್ತರ
ಕಿರಣ್ ರಾವ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 03, 2024 | 1:24 PM

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್’ ಸಿನಿಮಾ (Animal Movie) ಸೂಪರ್ ಹಿಟ್ ಆಗಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಬೇಕು ಎಂಬ ಆಸೆ ಇನ್ನೇನು ಈಡೇರುವುದರಲ್ಲಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇನ್ನು ಒಂದು ವರ್ಗದ ಜನರು ಈ ಚಿತ್ರವನ್ನು ಟೀಕೆ ಮಾಡುತ್ತಿದ್ದಾರೆ. ಕೆಲವರು ಅವರ ನಿರ್ದೇಶನದ ‘ಕಬೀರ್ ಸಿಂಗ್’ ಚಿತ್ರವನ್ನು ಟೀಕೆ ಮಾಡಿದ್ದರು. ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಕೂಡ ‘ಕಬೀರ್ ಸಿಂಗ್’ ಚಿತ್ರದ ಬಗ್ಗೆ ಅಪಸ್ವರ ತೆಗೆದಿದ್ದರು. ಇದಕ್ಕೆ ಸಂದೀಪ್ ರೆಡ್ಡಿ ವಂಗ ಉತ್ತರ ನೀಡಿದ್ದಾರೆ.

ಕಿರಣ್ ರಾವ್ ಹೇಳಿದ್ದೇನು?

‘ಕಬೀರ್ ಸಿಂಗ್’ ಹಾಗೂ ‘ಅನಿಮಲ್’ ಚಿತ್ರದ ಮಧ್ಯೆ ಸಾಕಷ್ಟು ಹೋಲಿಕೆ ಇದೆ. ಎರಡೂ ಸಿನಿಮಾಗಳಲ್ಲಿ ಸ್ತ್ರೀ ದ್ವೇಷ ಇದೆ. ಗೊತ್ತು ಗುರಿ ಇಲ್ಲದೆ ಸಿನಿಮಾದ ಕಥೆ ಸಾಗುತ್ತದೆ. ಚಿತ್ರದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಶಬ್ದ ಬಳಕೆ ಮಾಡಲಾಗಿದೆ. ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎನ್ನುವ ಆರೋಪ ಇದೆ. ಕಿರಣ್ ರಾವ್ ಅವರು ಈ ರೀತಿಯ ಸಿನಿಮಾಗಳ ಬಗ್ಗೆ ಅಪಸ್ವರ ತೆಗೆದಿದ್ದರು. ‘ಕಬೀರ್ ಸಿಂಗ್ ಅಂಥ ಚಿತ್ರಗಳು ಸ್ತ್ರೀ ದ್ವೇಷ ಹರಡುತ್ತವೆ’ ಎಂದು ಕಿರಣ್ ರಾವ್ ನವೆಂಬರ್ ತಿಂಗಳಲ್ಲಿ ಹೇಳಿದ್ದರು. ಇದಕ್ಕೆ ಸಂದೀಪ್ ರೆಡ್ಡಿ ಈಗ ಉತ್ತರಿಸಿದ್ದಾರೆ.

ಉತ್ತರ ಕೊಟ್ಟ ಸಂದೀಪ್

ಸಂದೀಪ್ ರೆಡ್ಡಿ ವಂಗ ಅವರು ಈ ಆರೋಪಕ್ಕೆ ಉತ್ತರ ನೀಡಿದ್ದಾರೆ. ‘ಇಂದು ಮುಂಜಾನೆ ನನ್ನ ಸಹಾಯಕ ನಿರ್ದೇಶಕ ಒಂದು ಆರ್ಟಿಕಲ್ ತೋರಿಸಿದರು. ಸೂಪರ್​ಸ್ಟಾರ್​ನ ಎರಡನೇ ಮಾಜಿ ಪತ್ನಿ ನೀಡಿದ ಹೇಳಿಕೆಯ ಬಗ್ಗೆ ಆ ಬರಹ ಇತ್ತು. ಬಾಹುಬಲಿ ಹಾಗೂ ಕಬೀರ್ ಸಿಂಗ್ ಸಿನಿಮಾಗಳು ಸ್ತ್ರೀದ್ವೇಷವನ್ನು ಪ್ರಚಾರ ಮಾಡುತ್ತವೆ ಎಂದು ಹೇಳಿದ್ದರು. ಬಹುಶಃ ಅವರಿಗೆ ವ್ಯತ್ಯಾಸ ತಿಳಿಯುತ್ತಿಲ್ಲ ಅನಿಸುತ್ತದೆ. ಕೆಲವರು ಇದನ್ನು ಓದಿ ಒಪ್ಪಿಕೊಳ್ಳಬಹುದು. ಆದರೆ ಇದು ತಪ್ಪು. ಕೆಲವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ’ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗ.

ಇದನ್ನೂ ಓದಿ: ಮುಗಿಯಿತು ಮಗಳ ಮದುವೆ ಸಂಭ್ರಮ; ಮಗನ ಚಿತ್ರಕ್ಕಾಗಿ ಜಪಾನ್​ಗೆ ತೆರಳಲಿದ್ದಾರೆ ಆಮಿರ್ ಖಾನ್?

ಆಮಿರ್ ಖಾನ್ ಅವರ ಸಿನಿಮಾ ಒಂದರ ದೃಶ್ಯವನ್ನು ಸಂದೀಪ್ ರೆಡ್ಡಿ ನೆನಪಿಸಿಕೊಂಡಿದ್ದಾರೆ. ‘ನಾನು ಆ ಮಹಿಳೆಗೆ (ಕಿರಣ್ ರಾವ್) ಒಂದು ವಿಚಾರ ಹೇಳಲು ಬಯಸುತ್ತೇನೆ. 1990ರ ಸಿನಿಮಾ ದಿಲ್ ಬಗ್ಗೆ ಅವರು ಆಮಿರ್ ಖಾನ್​ಗೆ ಪ್ರಶ್ನೆ ಮಾಡಲಿ. ದಿಲ್ ಚಿತ್ರದಲ್ಲಿ ಆಮಿರ್ ಖಾನ್ ಅವರು ರೇಪ್ ಮಾಡಿಯೇ ಬಿಟ್ಟರು ಎನ್ನುವ ರೀತಿಯ ದೃಶ್ಯ ಇದೆ. ನಂತರ ಇಬ್ಬರ ಮಧ್ಯೆ ಪ್ರೀತಿ ಮೂಡುತ್ತದೆ. ಇದೆಲ್ಲ ಏನು? ತಮ್ಮ ಸುತ್ತಲೂ ಇರುವುದರ ಬಗ್ಗೆ ಗಮನ ಹರಿಸದೇ ಈ ರೀತಿ ನಮ್ಮ ಮೇಲೆ ಅಟ್ಯಾಕ್ ಮಾಡಲು ಬರೋದು ಏಕೆ ಎಂಬುದು ತಿಳಿದಿಲ್ಲ’ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್