ರಾಜ್ಯದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ: ನಿರ್ದೇಶಕ ಅಗ್ನಿ ಶ್ರೀಧರ ಆರೋಪ

ನರಬಲಿ, ಹೆಣ್ಣು ಮಕ್ಕಳ ಬಲಿ ಈಗಲೂ ಇದೆ. ಕಾಮಾಕ್ಯದಿಂದ ಕೇರಳದವರೆಗೂ ನರಬಲಿ ನಡೆಯುತ್ತದೆ. ಬಡ ಮಕ್ಕಳನ್ನು, ಒಂಟಿ ಹೆಣ್ಣು ಮಕ್ಕಳನ್ನು ಮತ್ತು ಬಿಕ್ಷುಕರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತೆ. ಕರ್ನಾಟಕದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ ಎಂದು ನಿರ್ದೇಶಕ ಅಗ್ನಿ ಶ್ರೀಧರ ಆರೋಪ ಮಾಡಿದರು.

ರಾಜ್ಯದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ: ನಿರ್ದೇಶಕ ಅಗ್ನಿ ಶ್ರೀಧರ ಆರೋಪ
ನಿರ್ದೇಶಕ ಅಗ್ನಿ ಶ್ರೀಧರ್​​
Follow us
Malatesh Jaggin
| Updated By: ವಿವೇಕ ಬಿರಾದಾರ

Updated on: Feb 03, 2024 | 1:57 PM

ಬೆಂಗಳೂರು, ಫೆಬ್ರವರಿ 03: ನರಬಲಿ (Human sacrifice), ಹೆಣ್ಣು ಮಕ್ಕಳ ಬಲಿ ಈಗಲೂ ಇದೆ. ಕಾಮಾಕ್ಯದಿಂದ ಕೇರಳದವರೆಗೂ (Kerala) ನರಬಲಿ ನಡೆಯುತ್ತದೆ. ಬಡ ಮಕ್ಕಳನ್ನು, ಒಂಟಿ ಹೆಣ್ಣು ಮಕ್ಕಳನ್ನು ಮತ್ತು ಬಿಕ್ಷುಕರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತೆ. ಕರ್ನಾಟಕದ ಕೆಲವು ರಾಜಕಾರಣಿಗಳು ಈಗಲೂ ನರಬಲಿ ಕೊಡುತ್ತಾರೆ. ನೇರವಾಗಿ ಅವರು ಇದರಲ್ಲಿ ಭಾಗಿಯಾಗಲ್ಲ. ಆದರೆ ಈ ಕೆಲಸ ಮಾಡಿಸುತ್ತಾರೆ ಎಂದು ನಿರ್ದೇಶಕ ಅಗ್ನಿ ಶ್ರೀಧರ್ (Agni Sreedhar) ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಂಡುಪಾಳ್ಯ ಗ್ಯಾಂಗ್​ ಮೇಲೆ ಕೊಲೆ ಆರೋಪ ಹೊರಿಸಿದರು ಎಂದರು.

ಆದರೆ ದಂಡುಪಾಳ್ಯ ಗ್ಯಾಂಗ್ ಆ ಕೊಲೆಗಳನ್ನು ಮಾಡಿರಲಿಲ್ಲ. ದಂಡುಪಾಳ್ಯ ಸಿನಿಮಾದಲ್ಲಿ ತೋರಿಸುವ ಅಂಶಗಳು ನೈಜವಲ್ಲ. ಕ್ರೀಂ ಸಿನಿಮಾದ ಕಥೆ ನರಬಲಿಗೆ ಸಂಬಂಧಿಸಿದೆ ಎಂದು ಹೇಳಿದರು. ಇನ್ನು ಅಗ್ನಿ ಶ್ರೀಧರ ಕ್ರೀಂ ಚಿತ್ರದಲ್ಲಿ ನಟಿಸಿದ್ದಾರೆ.

ಕ್ರೀಂ ಚಿತ್ರದ ವಿಷುಯಲ್ ಟ್ರೇಲರ್ ಬಿಡುಗಡೆ

ಡಿ.ಕೆ.ದೇವೇಂದ್ರ, ನಿರ್ಮಿಸಿರುವ ಈ ಸಿನಿಮಾವನ್ನು ಅಭಿಷೇಕ್ ಬಸಂತ್ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಈ ಚಿತ್ರದ ವಿಷುಯಲ್ ಟ್ರೇಲರ್ ಇತ್ತೀಚೆಗೆ ಎ2 ಮ್ಯೂಸಿಕ್ ಮೂಲಕ ಬಿಡುಗಡೆಯಾಯ್ತು. ಲೇಖಕ ಅಗ್ನಿ ಶ್ರೀಧರ್ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದರು. ಕ್ರೀಂ ಚಿತ್ರದಲ್ಲಿ ‘ಕಿರಿಕ್ ಪಾರ್ಟಿ’ ಚಿತ್ರ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಬಲಿಯಾಗುತ್ತಿದ್ದಾರೆ? ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಕೂಡ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ‘ಅಲ್ಲಿ ಬರುವ ಪಾತ್ರಗಳು ನನಗೆ ಸೇರಿದ್ದು’; ‘ಹೆಡ್​ ಬುಷ್​’ ವಿವಾದದ ಬಗ್ಗೆ ಅಗ್ನಿ ಶ್ರೀಧರ್ ಮಾತು

ಯಾರು ಈ ಅಗ್ನಿ ಶ್ರೀಧರ್​

ಅಗ್ನಿ ಶ್ರೀಧರ ಪತ್ರಕರ್ತರು, ಲೇಖಕರು, ಚಲನಚಿತ್ರ ಸಂಭಾಷಣೆಗಾರರು ಹಾಗೂ ನಿರ್ದೇಶಕರು. ಅಗ್ನಿ ಎಂಬ ವಾರಪತ್ರಿಕೆಯನ್ನು ನಡೆಸುತ್ತಿದ್ದಾರೆ. ಇವರು ಕರುನಾಡ ಸೇನೆಯ ಸ್ಥಾಪಕರೂ ಸಹ ಆಗಿದ್ದಾರೆ. ನಂತರ ಅವರು ಸಾಪ್ತಾಹಿಕ ಕನ್ನಡ ವೃತ್ತಪತ್ರಿಕೆ ಅಗ್ನಿಯನ್ನು ಸ್ಥಾಪಿಸಿದರು. ಮತ್ತು ವೃತ್ತಿಪರ ಬರಹಗಾರ. “ದಾದಗಿರಿಯ ದಿನಗಳು” ಎಂಬ ಪುಸ್ತಕವನ್ನು ಬರೆದಿದ್ದಾರೆ. ಅಗ್ನಿ ಅಸ್ತ್ರ ಎಂಬ ಯು-ಟ್ಯೂಬ್ ಚಾನಲ್‌ನಲ್ಲೂ ತಮ್ಮ ವಿಮರ್ಷೆಗಳನ್ನು ಪ್ರಕಟಿಸಿದ್ದಾರೆ.

ಆ ದಿನಗಳು, ಎದೆಗಾರಿಕೆ ಮತ್ತು ಕಳ್ಳರ ಸಂತೆ ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ತಮಸ್ಸು ಚಿತ್ರಕ್ಕೆ ಕಥೆ, ಚಿತ್ರಕಥೆಯೊಂದಿಗೆ ನಿರ್ದೇಶನ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ