‘ಅಲ್ಲಿ ಬರುವ ಪಾತ್ರಗಳು ನನಗೆ ಸೇರಿದ್ದು’; ‘ಹೆಡ್​ ಬುಷ್​’ ವಿವಾದದ ಬಗ್ಗೆ ಅಗ್ನಿ ಶ್ರೀಧರ್ ಮಾತು

‘ಹೆಡ್​ ಬುಷ್​’ ಸಿನಿಮಾ ವಿವಾದದಲ್ಲಿ ಸಿಲುಕಿದೆ. ಸಿನಿಮಾ ಬಗ್ಗೆ ಜಯರಾಜ್ ಮಗ ಅಜಿತ್ ಜಯರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದ ಕಥೆ ಬರೆದಿರುವ ಅಗ್ನಿ ಶ್ರೀಧರ್ ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

May 11, 2022 | 6:32 PM

ಅಂಡರ್​ವರ್ಲ್ಡ್​ ಡಾನ್​ ಆಗಿದ್ದ ಜಯರಾಜ್​ ಜೀವನ ಕಥೆ ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ‘ಹೆಡ್​ ಬುಷ್​’ (Head Bush) ಎಂದು ನಾಮಕರಣ ಮಾಡಿರುವ ಈ ಚಿತ್ರದಲ್ಲಿ ಜಯರಾಜ್​ ಪಾತ್ರದಲ್ಲಿ ಧನಂಜಯ​ (Dhananjaya) ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮೇಲೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗ ಸಿನಿಮಾ ವಿವಾದದಲ್ಲಿ ಸಿಲುಕಿದೆ. ಸಿನಿಮಾ ಬಗ್ಗೆ ಜಯರಾಜ್ ಮಗ ಅಜಿತ್ ಜಯರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದ ಕಥೆ ಬರೆದಿರುವ ಅಗ್ನಿ ಶ್ರೀಧರ್ ಮಾತನಾಡಿದ್ದಾರೆ. ‘ಒಂದು ಕಾಲಘಟ್ಟದಲ್ಲಿ ನಡೆದಿದ್ದನ್ನು ನಾನು ದಾಖಲು ಮಾಡಿದ್ದೇನೆ. ಇದು ನನ್ನ ಸ್ಟೋರಿ. ಅಲ್ಲಿ ಬರುವ ಮಾತ್ರಗಳು ನನಗೆ ಸೇರಿದ್ದು, ಉಳಿದವರಿಗಲ್ಲ’ ಎಂದಿದ್ದಾರೆ ಅವರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada