ಶಿವಕುಮಾರ ಮನೆಗೆ ಯಾರೂ ಹೋಗಲ್ವಾ ಮತ್ತು ಖುದ್ದು ಶಿವಕುಮಾರ ಯಾರ ಮನೆಗೂ ಭೇಟಿ ನೀಡಲ್ವಾ? ಎಮ್ ಬಿ ಪಾಟೀಲ
ಇದು ಖಾಸಗಿ ಮತ್ತು ಬಹಳ ಸಣ್ಣ ವಿಚಾರ ಮತ್ತು ಒಂದು ಪಕ್ಷದ ಅಧ್ಯಕ್ಷನಾಗಿ ಶಿವಕುಮಾರ ತಲೆಹಾಕುವುದು ಸರಿಯಲ್ಲ. ಸ್ನೇಹಿತರ ಭೇಟಿಯಲ್ಲಿ ರಾಜಕೀಯ ಎಲ್ಲಿಂದ ಬರುತ್ತೆ? ತಾನು ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದುಕೊಂಡು ಪ್ರೊಟೆಕ್ಷನ್ ಕೋಡೋದಿಕ್ಕೆ ಹೇಗೆ ಸಾಧ್ಯ?
Bengaluru: ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಎಮ್ ಬಿ ಪಾಟೀಲ (MB Patil) ಅವರ ಮನೆಗೆ ಭೇಟಿ ನೀಡಿದ್ದು ಮತ್ತು ಸಚಿವರ ಭೇಟಿಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ರಕ್ಷಣೆ ಕೇಳಿಕೊಂಡು ಹೋಗಿರಬೇಕು ಅಂತ ಗೇಲಿ ಮಾಡಿದ್ದು ವಿವಾದದ ಸ್ವರೂಪ ತಳೆದುಬಿಟ್ಟಿದೆ. ಡಿಕೆಶಿ ಹೇಳಿಕೆಯಿಂದ ಸಿಡಿಮಿಡಿಗೊಂಡಿರುವ ಪಾಟೀಲ ಬುಧವಾರ ಬೆಂಗಳೂರಲ್ಲಿ ಟಿವಿ9 ಕನ್ನಡ ಚ್ಯಾನೆಲನೊಂದಿಗೆ ಮಾತಾಡುತ್ತಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬೇರೆ ಪಕ್ಷಗಳ ನಾಯಕರೊಂದಿಗೆ ಸ್ನೇಹ ಇಟ್ಟುಕೊಳ್ಳುವುದು, ಅವರ ಮನೆಗೆ ಹೋಗುವುದು ಅವರು ನಮ್ಮ ಮನೆಗಳಿಗೆ ಬರೋದು ತಪ್ಪು ಹೇಗಾಗುತ್ತದೆ? ನಮ್ಮ ಪಕ್ಷದ ಅಧ್ಯಕ್ಷರು ಬೇರೆಯವರ ಮನೆಗೆ ಹೋಗೋದಿಲ್ವಾ? ಬೇರೆ ಪಕ್ಷದ ನಾಯಕರು ಅವರ ಮನೆಗೆ ಬರೋದಿಲ್ಲವೇ? ಅವರಾಡಿರುವ ಮಾತನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಹೇಳಿದ ಪಾಟೀಲ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುವುದಾಗಿ ಹೇಳಿದರು.
ಇದು ಖಾಸಗಿ ಮತ್ತು ಬಹಳ ಸಣ್ಣ ವಿಚಾರ ಮತ್ತು ಒಂದು ಪಕ್ಷದ ಅಧ್ಯಕ್ಷನಾಗಿ ಶಿವಕುಮಾರ ತಲೆಹಾಕುವುದು ಸರಿಯಲ್ಲ. ಸ್ನೇಹಿತರ ಭೇಟಿಯಲ್ಲಿ ರಾಜಕೀಯ ಎಲ್ಲಿಂದ ಬರುತ್ತೆ? ತಾನು ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದುಕೊಂಡು ಪ್ರೊಟೆಕ್ಷನ್ ಕೋಡೋದಿಕ್ಕೆ ಹೇಗೆ ಸಾಧ್ಯ? ತಾನು ಚೀಫ್ ಮಿನಿಸ್ಟರ್ ಅಲ್ಲ ಅಥವಾ ಹೋಮ್ ಮಿನಿಸ್ಟರ್ ಕೂಡ ಅಲ್ಲ. ರಕ್ಷಣೆಯನ್ನು ಸಿದ್ದರಾಮಯ್ಯನವರು ಕೊಡಬಹುದು ಇಲ್ಲವೇ ಪಕ್ಷದ ಅಧ್ಯಕ್ಷರಾಗಿ ಶಿವಕುಮಾರ ಕೊಡಬಹುದು ಎಂದು ಪಾಟೀಲ ಹೇಳಿದರು.
ಅಸಲು ಸಂಗತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಎಮ್ ಬಿ ಪಾಟೀಲ ಸಿದ್ದರಾಮಯ್ಯನವರ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಅದು ಶಿವಕುಮಾರ ಅವರಿಗೆ ಸಹನೆಯಾಗುತ್ತಿಲ್ಲ. ಪಾಟೀಲ ಮಾತ್ರ ಅಲ್ಲ ಬಹಳಷ್ಟು ಶಾಸಕರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯನವರನ್ನೇ ತಮ್ಮ ನಾಯಕ ಬಹಿರಂಗವಾಗಿ ಹೇಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಶಿವಕುಮಾರ ಅವರಿಗೆ ಇಂಥ ಸಂಗತಿಗಳು ಸಹ್ಯವಾಗುತ್ತಿಲ್ಲ. ವಿಷಯ ಅಷ್ಟೇ ಮಾರಾಯ್ರೇ.
ಇದನ್ನೂ ಓದಿ: ಸಚಿವ ಅಶ್ವತ್ಥ್ ನಾರಾಯಣ-ಎಂ.ಬಿ.ಪಾಟೀಲ್ ಭೇಟಿ ವಿಚಾರ; ಡಿಕೆ.ಶಿವಕುಮಾರ್ ಮೇಲೆ ಹರಿ ಹಾಯ್ದ ನಟಿ, ಮಾಜಿ ಸಂಸದೆ ರಮ್ಯಾ