ಸಚಿವ ಅಶ್ವತ್ಥ್ ನಾರಾಯಣ-ಎಂ.ಬಿ.ಪಾಟೀಲ್ ಭೇಟಿ ವಿಚಾರ; ಡಿಕೆ.ಶಿವಕುಮಾರ್‌ ಮೇಲೆ ಹರಿ ಹಾಯ್ದ ನಟಿ, ಮಾಜಿ ಸಂಸದೆ ರಮ್ಯಾ

ಸಚಿವ ಅಶ್ವತ್ಥ್ ನಾರಾಯಣ-ಎಂ.ಬಿ.ಪಾಟೀಲ್ ಭೇಟಿ ವಿಚಾರ; ಡಿಕೆ.ಶಿವಕುಮಾರ್‌ ಮೇಲೆ ಹರಿ ಹಾಯ್ದ ನಟಿ, ಮಾಜಿ ಸಂಸದೆ ರಮ್ಯಾ
ರಮ್ಯಾ

ಪಕ್ಷವನ್ನು ಹೊರತುಪಡಿಸಿ ಅನೇಕರು ಭೇಟಿಯಾಗುತ್ತಿರುತ್ತಾರೆ. ಮದುವೆ, ಇತರೆ ಸಮಾರಂಭಗಳಿಗೆ ಭೇಟಿಯಾಗುತ್ತಿರುತ್ತಾರೆ. ಎಂ.ಬಿ.ಪಾಟೀಲ್‌ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ ಎಂದು ರಮ್ಯಾ ಟ್ವೀಟ್‌ ಮಾಡಿದ್ದಾರೆ.

TV9kannada Web Team

| Edited By: Ayesha Banu

May 11, 2022 | 6:04 PM

ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಣ(Ashwath Narayan) ಎಂ.ಬಿ.ಪಾಟೀಲ್(MB Patil) ಭೇಟಿ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿಕೆ ಅಚ್ಚರಿ ತಂದಿದೆ ಎಂದು ಟ್ವೀಟ್‌ ಮಾಡಿ ಎಂ.ಬಿ.ಪಾಟೀಲ್ ಪರ ನಟಿ, ಮಾಜಿ ಸಂಸದೆ ರಮ್ಯಾ (Ramya) ಬ್ಯಾಟಿಂಗ್‌ ಮಾಡಿದ್ದಾರೆ. ಪಕ್ಷವನ್ನು ಹೊರತುಪಡಿಸಿ ಅನೇಕರು ಭೇಟಿಯಾಗುತ್ತಿರುತ್ತಾರೆ. ಮದುವೆ, ಇತರೆ ಸಮಾರಂಭಗಳಿಗೆ ಭೇಟಿಯಾಗುತ್ತಿರುತ್ತಾರೆ. ಎಂ.ಬಿ.ಪಾಟೀಲ್‌ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ ಎಂದು ರಮ್ಯಾ ಟ್ವೀಟ್‌ ಮಾಡಿದ್ದಾರೆ.

ಇತರೆ ರಾಜಕೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಕ್ಷಣೆಗಾಗಿ ಅಶ್ವತ್ಥ್​ ನಾರಾಯಣ್​ ಎಂಬಿ ಪಾಟೀಲ್​ ಮೊರೆ ಹೋಗಿರುವ ಸಾಧ್ಯತೆ ಇದೆ ಎಂದು ತಮ್ಮ ಪಕ್ಷದ ನಾಯಕನ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆಗೆ ನೀಡಿದ್ದರು. ಈ ಹೇಳಿಕೆ ಸಂಬಂಧ ರಮ್ಯಾ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಎಂಬಿ ಪಾಟೀಲ್​ ಪರ ಬ್ಯಾಟಿಂಗ್ ಮಾಡಿದ್ದಾರೆ. ಡಿಕೆ ಶಿವಕುಮಾರ್​ರ ಹೇಳಿಕೆ ಅಚ್ಚರಿ ತಂದಿದೆ ಎಂದಿದ್ದಾರೆ. ಪಕ್ಷಾತೀತವಾಗಿ ನಾಯಕರು ಭೇಟಿಯಾಗುವುದು ಹೊಸದಲ್ಲ. ಪಕ್ಷ ಭೇದ ಮರೆತು ಅನೇಕ ನಾಯಕರು ಒಟ್ಟಿಗೆ ಸಮಾರಂಭಗಳಿಗೆ ಹೋಗುವುದು ಸಹಜ. ಬೇರೆ ಬೇರೆ ಪಕ್ಷಗಳಲ್ಲಿರುವ ನಾಯಕರು ಎರಡೂ ಕುಟುಂಬಗಳ ನಡುವೆ ಮದುವೆ ಸಂಬಂಧ ಬೆಳೆಸಿರುವ ಉದಾಹರಣೆ ಇದೆ. ಇಂತಹ ಸಂದರ್ಭದಲ್ಲಿ ಡಿಕೆ ಶಿವಕುಮಾರ್​​ ಅವರ ಹೇಳಿಕೆ ನನಗೆ ಆಶ್ವರ್ಯ ಮೂಡಿಸಿದೆ. ಎಂಬಿ ಪಾಟೀಲ್​ ಕಟ್ಟಾ ಕಾಂಗ್ರೆಸ್ಸಿಗ. ಚುನಾವಣಾ ಹೊತ್ತಲ್ಲಿ ಈ ರೀತಿ ಹೇಳಿಕೆ ಸರಿ ಇಲ್ಲ. ನಾವು ಒಟ್ಟಿಗೆ ಚುನಾವಣೆ ಎದುರಿಸಬೇಕು ಅಲ್ಲವೇ ಎನ್ನುವ ಮೂಲಕ ಚುನಾವಣೆ ಸಮೀಪಿಸುತ್ತಿರುವಾಗ ಪಕ್ಷದ ನಾಯಕರೊಳಗೆ ಈ ರೀತಿ ಭಿನ್ನಾಭಿಪ್ರಾಯ ಬೇಡ ಎಂಬ ಅರ್ಥದಲ್ಲಿ ಟ್ವೀಟ್​ ಮಾಡಿ ಡಿಕೆ ಶಿವಕುಮಾರ್ ವಿರುದ್ಧ ಹರಿ ಹಾಯ್ದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada