AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನದ ಬಳಿಕವೂ ಪತ್ನಿ ಕಿರಣ್ ಜೊತೆ ಕೆಲಸ ಮಾಡೋದೇಕೆ? ಆಮಿರ್ ಖಾನ್ ಕೊಟ್ಟರು ಉತ್ತರ

ಕಿರಣ್ ರಾವ್ ಹಾಗೂ ಆಮಿರ್ ಖಾನ್ ಮದುವೆ 2005ರಲ್ಲಿ ನಡೆಯಿತು. 2021ರಲ್ಲಿ ಇವರು ವಿಚ್ಛೇದನ ಪಡೆದರು. ವಿಚ್ಛೇದನದ ಬಳಿಕವೂ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಿದ್ದಾರೆ. ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಆಮಿರ್ ಖಾನ್ ಮಾಜಿ ಪತ್ನಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ.

ವಿಚ್ಛೇದನದ ಬಳಿಕವೂ ಪತ್ನಿ ಕಿರಣ್ ಜೊತೆ ಕೆಲಸ ಮಾಡೋದೇಕೆ? ಆಮಿರ್ ಖಾನ್ ಕೊಟ್ಟರು ಉತ್ತರ
ಆಮಿರ್-ಕಿರಣ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 05, 2024 | 2:46 PM

Share

ವಿಚ್ಛೇದನ ಪಡೆದ ಬಳಿಕ ಪತಿ-ಪತ್ನಿ ಸಂಪೂರ್ಣವಾಗಿ ದೂರವಾಗುತ್ತಾರೆ. ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳಲು ಇಷ್ಟಡುವುದಿಲ್ಲ. ಈ ರೀತಿ ಆಗುವುದು ಸರ್ವೇ ಸಾಮಾನ್ಯ. ಆದರೆ, ಕೆಲವೇ ಕೆಲವು ಪ್ರಕರಣಗಳಲ್ಲಿ ವಿಚ್ಛೇದನದ ಬಳಿಕವೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಈ ಅಪರೂಪದ ಪ್ರಕರಣದಲ್ಲಿ ಆಮಿರ್ ಖಾನ್ (Aamir Khan) ಕೂಡ ಇದ್ದಾರೆ. ಆಮಿರ್ ಎರಡನೇ ಪತ್ನಿ ಕಿರಣ್ ರಾವ್ ವಿಚ್ಛೇದನ ಪಡೆದಿದ್ದಾರೆ. ಆದಾಗ್ಯೂ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಒಬ್ಬರಿಗೊಬ್ಬರು ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಆಮಿರ್ ಖಾನ್ ಅವರು ರೀನಾ ದತ್ತ ಅವರನ್ನು 1986ರಲ್ಲಿ ಮದುವೆ ಆದರು. ಇವರು 2002ರಲ್ಲಿ ವಿಚ್ಛೇದನ ಪಡೆದರು. 2005ರಲ್ಲಿ ಕಿರಣ್ ರಾವ್ ಹಾಗೂ ಆಮಿರ್ ಖಾನ್ ಮದುವೆ ನಡೆಯಿತು. 2021ರಲ್ಲಿ ಇವರು ವಿಚ್ಛೇದನ ಪಡೆದರು. ವಿಚ್ಛೇದನದ ಬಳಿಕವೂ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡಿದ್ದಾರೆ. ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಇತ್ತೀಚೆಗೆ ಆಮಿರ್ ಖಾನ್ ಮಗಳು ಇರಾ ಖಾನ್ ಮದುವೆ ನಡೆಯಿತು. ಈ ಮದುವೆಗೆ ಕಿರಣ್ ರಾವ್ ಕೂಡ ಹಾಜರಿ ಹಾಕಿದ್ದರು. ಅವರು ಮಾಜಿ ಪತ್ನಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ.

‘ನೀವು ವಿಚ್ಛೇದನ ಪಡೆದ ಬಳಿಕ ವೈರಿಗಳಾಗುತ್ತೀರಿ ಎಂದು ಯಾವುದಾದರೂ ವೈದ್ಯರು ಹೇಳಿದ್ದಾರಾ? ಕಿರಣ್ ನನ್ನ ಬದುಕಿನಲ್ಲಿ ಬಂದಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಅವರ ಜೊತೆಗಿನ ಪ್ರಯಾಣ ನನಗೆ ತೃಪ್ತಿಕರವಾಗಿದೆ. ನಾವಿಬ್ಬರೂ  ವೈಯಕ್ತಿಕವಾಗಿ ಮತ್ತು ವೃತ್ತಿಯಲ್ಲಿ ಸಾಕಷ್ಟು ವಿಚಾರಗಳನ್ನು ಒಟ್ಟಿಗೆ ಮಾಡಿದ್ದೇವೆ. ನಾವು ಒಟ್ಟಿಗೆ ಮುಂದುವರಿಯುವ ಇಚ್ಛೆ ಹೊಂದಿದ್ದೇವೆ’ ಎಂದರು ಅವರು ಹೇಳಿದ್ದಾರೆ.

‘ನಾವಿಬ್ಬರೂ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದೇವೆ. ನಾವು ಯಾವಾಗಲೂ ಒಬ್ಬರಿಗೊಬ್ಬರು ಬೆಂಬಲವಾಗಿ ಇರುತ್ತೇವೆ. ನಾವು ಒಂದು ಕುಟುಂಬದ ಹಾಗೆ ಇದ್ದೇವೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದನ್ನು ಆನಂದಿಸುತ್ತೇವೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಹೀನಾಯ ಸೋಲು ಕಂಡಿತು. ಈ ಚಿತ್ರದಲ್ಲಿ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಒಟ್ಟಾಗಿ ನಟಿಸಿದ್ದರು. ಹಾಲಿವುಡ್​ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಆಗಿತ್ತು. ಇದನ್ನು ಹಿಂದಿಗೆ ರಿಮೇಕ್ ಮಾಡಲು ಹೆಚ್ಚು ಆಸಕ್ತಿ ತೋರಿಸಿದ್ದು ಆಮಿರ್ ಖಾನ್. ಈ ಚಿತ್ರವನ್ನು ಕಿರಣ್ ರಾವ್ ನಿರ್ಮಾಣ ಮಾಡಿದ್ದರು. ವೃತ್ತಿ ಬದುಕಿನಲ್ಲಿ ಈ ಬಾಂಡಿಂಗ್ ಮುಂದಿನ ದಿನಗಳಲ್ಲಿ ಹೀಗೆಯೇ ಇರುತ್ತದೆ ಎಂದು ಆಮಿರ್ ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಮುಗಿಯಿತು ಮಗಳ ಮದುವೆ ಸಂಭ್ರಮ; ಮಗನ ಚಿತ್ರಕ್ಕಾಗಿ ಜಪಾನ್​ಗೆ ತೆರಳಲಿದ್ದಾರೆ ಆಮಿರ್ ಖಾನ್?

ಸದ್ಯ ಆಮಿರ್ ಖಾನ್ ಅವರು ನಟನೆಯಿಂದ ದೂರವೇ ಇದ್ದಾರೆ. ‘ಲಾಲ್ ಸಿಂಗ್ ಚಡ್ಡಾ’ ಸೋಲು ಅವರನ್ನು ಬಹುವಾಗಿ ಕಾಡಿದೆ. ಹೀಗಾಗಿ, ಕುಟುಂಬದ ಕಡೆ ಅವರು ಒಲವು ತೋರುತ್ತಿದ್ದಾರೆ. ಶೀಘ್ರವೇ ಹೊಸ ಸಿನಿಮಾ ಒಪ್ಪಿಕೊಂಡು ಅವರು ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ