AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನಿಮಲ್​’ ಸಿನಿಮಾ ನೋಡಿ 40 ನಿಮಿಷ ಮಾತಾಡಿದ್ದ ರಣವೀರ್​ ಸಿಂಗ್​; ನಿರ್ದೇಶಕರಿಗೆ ಅಚ್ಚರಿ

ಕೆಲವರಿಗೆ ‘ಅನಿಮಲ್​’ ಸಿನಿಮಾ ಇಷ್ಟ ಆಗಿಲ್ಲ. ಆದರೆ ಅನೇಕ ಸೆಲೆಬ್ರಿಟಿಗಳಿಗೆ ತುಂಬ ಇಷ್ಟ ಆಗಿದೆ. ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ, ಅನಿಲ್​ ಕಪೂರ್, ಬಾಬಿ ಡಿಯೋಲ್​ ಮುಂತಾದವರು ನಟಿಸಿದ ಈ ಸಿನಿಮಾವನ್ನು ರಣವೀರ್​ ಸಿಂಗ್​ ವೀಕ್ಷಿಸಿದ್ದಾರೆ. ಬಳಿಕ ಅವರು ನಿರ್ದೇಶಕರಿಗೆ ಕರೆ ಮಾಡಿ ಸುದೀರ್ಘವಾಗಿ ಮಾತನಾಡಿದ್ದಾರೆ. ಅಷ್ಟರಮಟ್ಟಿಗೆ ಅವರು ‘ಅನಿಮಲ್​’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

‘ಅನಿಮಲ್​’ ಸಿನಿಮಾ ನೋಡಿ 40 ನಿಮಿಷ ಮಾತಾಡಿದ್ದ ರಣವೀರ್​ ಸಿಂಗ್​; ನಿರ್ದೇಶಕರಿಗೆ ಅಚ್ಚರಿ
ಸಂದೀಪ್​ ರೆಡ್ಡಿ ವಂಗ, ರಣವೀರ್​ ಸಿಂಗ್​
ಮದನ್​ ಕುಮಾರ್​
|

Updated on: Feb 05, 2024 | 4:41 PM

Share

ಕಳೆದ ವರ್ಷ ಡಿಸೆಂಬರ್​ನಲ್ಲಿ ಬಿಡುಗಡೆಯಾದ ಅನಿಮಲ್​’ ಸಿನಿಮಾ (Animal Movie) ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಒಂದು ವರ್ಗದ ಜನರು ಆ ಸಿನಿಮಾವನ್ನು ಸಿಕ್ಕಾಪಟ್ಟೆ ವಿರೋಧಿಸಿದ್ದಾರೆ. ಆದರೆ ಪ್ರೇಕ್ಷಕರು ಮುಗಿಬಿದ್ದು ಆ ಸಿನಿಮಾವನ್ನು ನೋಡಿದ್ದಾರೆ. ಪರಿಣಾಮವಾಗಿ ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ‘ಅನಿಮಲ್​’ ಸಿನಿಮಾ ಅಂದಾಜು 900 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಚಿತ್ರದಿಂದ ನಟ ರಣಬೀರ್​ ಕಪೂರ್​ ಅವರ ಖ್ಯಾತಿ ಹೆಚ್ಚಾಗಿದೆ. ಅವರಿಗೆ ಇದ್ದ ಡಿಮ್ಯಾಂಡ್​ ಹೆಚ್ಚಿದೆ. ವಿಶೇಷ ಏನೆಂದರೆ, ಬಾಲಿವುಡ್​ ನಟ ರಣವೀರ್​ ಸಿಂಗ್​ (Ranveer Singh) ಕೂಡ ‘ಅನಿಮಲ್​’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿದ ಬಳಿಕ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ (Sandeep Reddy Vanga) ಅವರಿಗೆ ಕರೆ ಮಾಡಿದ ರಣವೀರ್​ ಸಿಂಗ್​ ಅವರು 40 ನಿಮಿಷ ಮಾತನಾಡಿದ್ದಾರೆ.

‘ಅನಿಮಲ್​’ ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಕೆಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘ದೈನಿಕ್​ ಭಾಸ್ಕರ್​’ಗೆ ನೀಡಿದ ಸಂದರ್ಶನದಲ್ಲಿ ಅವರು ರಣವೀರ್​ ಸಿಂಗ್​ ಬಗ್ಗೆ ಮಾತನಾಡಿದ್ದಾರೆ. ‘ರಣವೀರ್​ ಸಿಂಗ್​ ಅವರಿಂದ ನನಗೆ ಬಹಳ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿತು. ನಂಬೋಕೆ ಅಸಾಧ್ಯವಾದ ಪ್ರತಿಕ್ರಿಯೆ ಅದು’ ಎಂದು ಸಂದೀಪ್​ ರೆಡ್ಡಿ ವಂಗ ಹೇಳಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಭೇಟಿ ಮಾಡಿದ ‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ; ಫೋಟೋ ವೈರಲ್​

‘ರಣವೀರ್​ ಸಿಂಗ್​ ಅವರು ನನ್ನ ಜೊತೆ ಸುಮಾರು 40 ನಿಮಿಷ ಮಾತನಾಡಿದರು. ಬಳಿಕ ಒಂದು ಉದ್ದವಾದ ಮೆಸೇಜ್​ ಕಳಿಸಿದರು. ನಾನು ಅದನ್ನು ಮೂರು-ನಾಲ್ಕು ಬಾರಿ ಓದಿದೆ. ಆ ಮೆಸೇಜ್​ ಓದಿದ ಬಳಿಕ ನನಗೆ ಹೇಗೆ ಅನಿಸಿತು ಎಂಬುದನ್ನು ವಿವರಿಸುವುದು ಕಷ್ಟ. ಮೆಸೇಜ್​ ಓದಿದ ನಂತರ ನನಗೆ ಬಹಳ ಖುಷಿ ಆಯಿತು. ಈ ಸಿನಿಮಾದಲ್ಲಿ ಇಷ್ಟೆಲ್ಲ ಅಂಶಗಳು ಇವೆಯಲ್ಲ ಅಂತ ನನಗೆ ಅಚ್ಚರಿ ಆಗುವ ರೀತಿಯಲ್ಲಿ ಅನಿಮಲ್​ ಬಗ್ಗೆ ಅವರು ಮೆಸೇಜ್​​ನಲ್ಲಿ ಬರೆದಿದ್ದರು’ ಎಂದಿದ್ದಾರೆ ಸಂದೀಪ್​ ರೆಡ್ಡಿ ವಂಗ.

ಇದನ್ನೂ ಓದಿ: ‘ಅನಿಮಲ್​’ ಸಿನಿಮಾದ ನಟಿ ತೃಪ್ತಿ ದಿಮ್ರಿ ಬಾಯ್​ಫ್ರೆಂಡ್​ ಫೋಟೋ ವೈರಲ್​

ಅಚ್ಚರಿ ಏನೆಂದರೆ, ರಣವೀರ್​ ಸಿಂಗ್​ ಅವರು ಸಂದೀಪ್​ ರಡ್ಡಿ ವಂಗ ನಿರ್ದೇಶನದ ‘ಕಬೀರ್​ ಸಿಂಗ್​’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಆ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಬಳಿಕ ಅದು ಶಾಹಿದ್​ ಕಪೂರ್​ ಪಾಲಾಯಿತು. ಈಗ ಸಂದೀಪ್​ ರೆಡ್ಡಿ ವಂಗ ಮತ್ತು ರಣವೀರ್​ ಸಿಂಗ್​ ನಡುವೆ ಸ್ನೇಹ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಅವರಿಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!