AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಕಿತಾಗೆ ಸುಶಾಂತ್​ ಉಡುಗೊರೆಯಾಗಿ ನೀಡಿದ್ದ ಮುದ್ದಿನ ಶ್ವಾನ ಸ್ಕಾಚ್​ ನಿಧನ

ನಟ ಸುಶಾಂತ್ ಸಿಂಗ್​ ರಜಪೂತ್​ ಅವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇತ್ತು. ತಮ್ಮ ಮುದ್ದಿನ ಶ್ವಾನಕ್ಕೆ ಅವರು ಸ್ಕಾಚ್​​ ಎಂದು ಹೆಸರು ಇಟ್ಟಿದ್ದರು. ಅದನ್ನು ಅವರು ಅಂಕಿತಾ ಲೋಖಂಡೆಗೆ ಉಡುಗೊರೆಯಾಗಿ ನೀಡಿದ್ದರು. ಆದರೆ ಈಗ ಸ್ಕಾಚ್​ ಕೊನೆಯುಸಿರು ಎಳೆದಿದೆ. ಆ ನೋವಿನ ಸುದ್ದಿಯನ್ನು ಅಂಕಿತಾ ಲೋಖಂಡೆ ಹಂಚಿಕೊಂಡಿದ್ದಾರೆ. ಅದರ ಫೋಟೋ ವೈರಲ್​ ಆಗಿದೆ.

ಅಂಕಿತಾಗೆ ಸುಶಾಂತ್​ ಉಡುಗೊರೆಯಾಗಿ ನೀಡಿದ್ದ ಮುದ್ದಿನ ಶ್ವಾನ ಸ್ಕಾಚ್​ ನಿಧನ
ಸ್ಕಾಚ್​ ಶ್ವಾನ, ಅಂಕಿತಾ ಲೋಖಂಡೆ, ಸುಶಾಂತ್​ ಸಿಂಗ್​ ರಜಪೂತ್​
ಮದನ್​ ಕುಮಾರ್​
| Edited By: |

Updated on:Feb 06, 2024 | 6:25 AM

Share

ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ಕೆಲವೇ ದಿನಗಳ ಹಿಂದೆ ‘ಬಿಗ್​ ಬಾಸ್​ 17’ ಶೋನಲ್ಲಿ ಸ್ಪರ್ಧಿಸಿ ಹೊರಬಂದಿದ್ದಾರೆ. ಈಗ ಅವರ ಕಡೆಯಿಂದ ಒಂದು ಕಹಿ ಸುದ್ದಿ ಸಿಕ್ಕಿದೆ. ಅವರ ಮನೆಯಲ್ಲಿ ಸಾಕಿದ್ದ ಮುದ್ದಿನ ನಾಯಿ (Ankita Lokhande Dog) ಸತ್ತು ಹೋಗಿದೆ. ಈ ಶ್ವಾನಕ್ಕೆ ಪ್ರೀತಿಯಿಂದ ಸ್ಕಾಚ್​ ಎಂದು ಹೆಸರು ಇಡಲಾಗಿತ್ತು. ಈಗ ಸ್ಕಾಚ್​ ಮೃತಪಟ್ಟಿದೆ. ಅದರ ಫೋಟೋವನ್ನು ಅಂಕಿತಾ ಲೋಖಂಡೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಕಂಬನಿ ಮಿಡಿದಿದ್ದಾರೆ. ವಿಶೇಷ ಏನೆಂದರೆ, ಅಂಕಿತಾಗೆ ಈ ಶ್ವಾನವನ್ನು ನೀಡಿದ್ದು ಮಾಜಿ ಪ್ರಿಯಕರ ಸುಶಾಂತ್​ ಸಿಂಗ್​ ರಜಪೂತ್​. ಹಾಗಾಗಿ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರ ಅಭಿಮಾನಿಗಳು ಕೂಡ ಸ್ಕಾಚ್​ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಮತ್ತು ಅಂಕಿತಾ ಲೋಖಂಡೆ ಅವರು ಕಿರುತೆರೆಯ ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಪ್ರಾಣಿಗಳ ಬಗ್ಗೆ ಸುಶಾಂತ್​ ಸಿಂಗ್​ ರಜಪೂತ್​ ವಿಶೇಷ ಕಾಳಜಿ ಮತ್ತು ಪ್ರೀತಿ ಹೊಂದಿದ್ದರು. ತಮ್ಮ ಮುದ್ದಿನ ಶ್ವಾನದ ಜೊತೆ ಅವರು ಆಟವಾಡುತ್ತಿದ್ದ ವಿಡಿಯೋ ಕೂಡ ವೈರಲ್​ ಆಗಿತ್ತು. ಅದೇ ನಾಯಿ ಈಗ ಮೃತಪಟ್ಟಿದೆ.

ಅಂಕಿತಾ ಲೋಖಂಡೆ ಸೋಶಿಯಲ್​ ಮೀಡಿಯಾ ಪೋಸ್ಟ್​:

ಸ್ಕಾಚ್​ ಶ್ವಾನದ ಜೊತೆ ಅನೇಕ ನೆನಪುಗಳು ಬೆರೆತಿದ್ದವು. ಸುಶಾಂತ್​ ಸಿಂಗ್ ರಜಪೂತ್​ ಅವರು ಉಡುಗೊರೆಯಾಗಿ ನೀಡಿದ್ದು ಎಂಬ ಕಾರಣದಿಂದಲೂ ಅದು ತುಂಬಾ ಸ್ಪೆಷಲ್​ ಎನಿಸಿಕೊಂಡಿತ್ತು. ಪ್ರೀತಿಯಿಂದ ಸಾಕಿದ ನಾಯಿಯನ್ನು ಕಳೆದುಕೊಂಡು ಅಂಕಿತಾ ಲೋಖಂಡೆ ಅವರಿಗೆ ಬೇಸರ ಆಗಿದೆ. ‘ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಸ್ಕಾಚ್​. ಅಮ್ಮ ನಿನ್ನನ್ನು ಯಾವಾಗಲೂ ಮಿಸ್​ ಮಾಡಿಕೊಳ್ಳುತ್ತಾಳೆ’ ಎಂದು ಅಂಕಿತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ನಾಗಿನ್’ ಧಾರಾವಾಹಿಯಲ್ಲಿ ನಟಿಸೋಕೆ ರೆಡಿ ಆದ ಅಂಕಿತಾ ಲೋಖಂಡೆ; ಸಿಗುತ್ತಿದೆ ಭರ್ಜರಿ ಸಂಭಾವನೆ?

ಅಂಕಿತಾ ಲೋಖಂಡೆ ಹಂಚಿಕೊಂಡ ಫೋಟೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ನಿಮ್ಮ ಟೈಮ್​ ಈಗ ಸರಿಯಿಲ್ಲ ಎನಿಸುತ್ತದೆ’ ಎಂದು ಕೆಲವರು ಎಚ್ಚರಿಕೆ ನೀಡಿದ್ದಾರೆ. ಟ್ರೋಫಿ ಗೆಲ್ಲಬೇಕು ಎಂದು ಅಂಕಿತಾ ಲೋಖಂಡೆ ಅವರು ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಆದರೆ ಫಿನಾಲೆ ತನಕ ಬಂದ ಅವರಿಗೆ ವಿನ್ನರ್​ ಆಗಲು ಸಾಧ್ಯವಾಗಲಿಲ್ಲ. ಅವರ ಜೊತೆ ಪತಿ ವಿಕ್ಕಿ ಜೈನ್​ ಕೂಡ ದೊಡ್ಮನೆಯಲ್ಲಿ ಸ್ಪರ್ಧಿಯಾಗಿದ್ದರು. ಆದರೆ ಅವರಿಬ್ಬರ ನಡುವೆ ಸಾಕಷ್ಟು ಬಾರಿ ಜಗಳ ಆಗಿತ್ತು. ಬಿಗ್​ ಬಾಸ್​ ಶೋ ಮುಗಿಸಿ ಬಂದ ಕೆಲವೇ ದಿನಗಳಲ್ಲಿ ಸ್ಕಾಚ್​ ಶ್ವಾನ ಮೃತಪಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:28 pm, Mon, 5 February 24

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!