‘ಅನಿಮಲ್​’ ನಿರ್ದೇಶಕನಿಂದ ಬಂದ ಆಫರ್​ ತಿರಸ್ಕರಿಸಿದ ಕಂಗನಾ ರಣಾವತ್​

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸಿನಿಮಾಗಳಲ್ಲಿ ‘ಅನಿಮಲ್​’ ಸಿನಿಮಾಗೆ ಪ್ರಮುಖ ಸ್ಥಾನ ಇದೆ. ಸಂದೀಪ್​ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ಬಿಡುಗಡೆಯಾಗಿ ಎರಡು ತಿಂಗಳು ಕಳೆದಿದ್ದರೂ ಕೂಡ ಇದರ ಬಗೆಗಿನ ಚರ್ಚೆ ನಿಂತಿಲ್ಲ. ಕಂಗನಾ ರಣಾವತ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

‘ಅನಿಮಲ್​’ ನಿರ್ದೇಶಕನಿಂದ ಬಂದ ಆಫರ್​ ತಿರಸ್ಕರಿಸಿದ ಕಂಗನಾ ರಣಾವತ್​
ಕಂಗನಾ ರಣಾವತ್​, ಸಂದೀಪ್​ ರೆಡ್ಡಿ ವಂಗ
Follow us
ಮದನ್​ ಕುಮಾರ್​
|

Updated on: Feb 06, 2024 | 11:24 AM

ನಿರ್ದೇಶಕ ಸಂದೀಪ್​ ರೆಡ್ಡಿ ವಂಗ (Sandeep Reddy Vanga) ಅವರಿಗೆ ಈಗ ಸಖತ್​ ಬೇಡಿಕೆ ಇದೆ. ಅದಕ್ಕೆ ಕಾರಣ ಆಗಿರುವುದು ‘ಅನಿಮಲ್​’ (Animal Movie) ಸಿನಿಮಾದ ಭರ್ಜರಿ ಯಶಸ್ಸು. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಅಂದಾಜು 900 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅವರ ಕೆಲಸವನ್ನು ಕೆಲವರು ಟೀಕಿಸಿದ್ದಾರೆ. ಇನ್ನೂ ಕೆಲವರು ಮೆಚ್ಚಿಕೊಂಡಿದ್ದಾರೆ. ಸಂದೀಪ್ ರೆಡ್ಡಿ ವಂಗ ಜೊತೆ ಸಿನಿಮಾ ಮಾಡಲು ಅನೇಕ ಸ್ಟಾರ್​ ಕಲಾವಿದರು ಬಯಸುತ್ತಿದ್ದಾರೆ. ಆದರೆ ನಟಿ ಕಂಗನಾ ರಣಾವತ್​ (Kangana Ranaut) ಅವರು ಈ ವಿಚಾರದಲ್ಲಿ ಡಿಫರೆಂಟ್​ ಆಗಿ ಗುರುತಿಸಿಕೊಂಡಿದ್ದಾರೆ. ಸಂದೀಪ್​ ರೆಡ್ಡಿ ವಂಗ ಕಡೆಯಿಂದ ಬಂದ ಆಫರ್​ ಅನ್ನು ಕಂಗನಾ ನೇರವಾಗಿ ತಿರಸ್ಕರಿಸಿದ್ದಾರೆ. ಅಲ್ಲದೇ, ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ.

‘ಅನಿಮಲ್​’ ಸಿನಿಮಾವನ್ನು ವೀಕ್ಷಿಸಿದ ಬಳಿಕ ಕಂಗನಾ ರಣಾವತ್​ ಅವರು ತಮ್ಮ ವಿಮರ್ಶೆ ತಿಳಿಸಿದ್ದರು. ಈ ಸಿನಿಮಾ ಸ್ತ್ರೀ ವಿರೋಧಿಯಾಗಿದೆ ಎಂದು ಅವರು ಹೇಳಿದ್ದರು. ಆದರೂ ಕೂಡ ಅವರ ವಿಮರ್ಶೆಯನ್ನು ಸಂದೀಪ್​ ಅವರು ಪಾಸಿಟಿವ್​ ಆಗಿ ತೆಗೆದುಕೊಂಡಿದ್ದಾರೆ. ಯಾಕೆಂದರೆ, ಕಂಗನಾ ಅವರ ಪ್ರತಿಭೆಯ ಬಗ್ಗೆ ಸಂದೀಪ್​ಗೆ ಅಭಿಮಾನ ಇದೆ. ಕಂಗನಾ ನಟನೆಯ ಸಿನಿಮಾಗಳನ್ನು ಸಂದೀಪ್ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ‘12th ಫೇಲ್​’ ನಿರ್ದೇಶಕನ ಹೆಂಡತಿ ಮೇಲೆ ಸರಣಿ ಆರೋಪ ಮಾಡಿದ ಕಂಗನಾ ರಣಾವತ್​

‘ಅವಕಾಶ ಸಿಕ್ಕರೆ, ಪಾತ್ರಕ್ಕೆ ಕಂಗನಾ ಸೂಕ್ತ ಎನಿಸಿದರೆ ಅವರ ಬಳಿ ಹೋಗಿ ಕಥೆ ಹೇಳುತ್ತೇನೆ. ‘ಕ್ವೀನ್​’ ಮತ್ತು ಇತರೆ ಸಿನಿಮಾಗಳಲ್ಲಿ ಅವರ ನಟನೆಯನ್ನು ನಾನು ಇಷ್ಟಪಟ್ಟಿದ್ದೇನೆ. ನನ್ನ ‘ಅನಿಮಲ್​’ ಚಿತ್ರದ ಬಗ್ಗೆ ಅವರು ನೆಗೆಟಿವ್​ ಕಮೆಂಟ್​ ಮಾಡಿದ್ದರೂ ನನಗೆ ಕೋಪ ಬರುವುದಿಲ್ಲ. ರಾಜಕೀಯವಾಗಿ ಸರಿ-ತಪ್ಪು ಬಗ್ಗೆ ನಾನು ಮಾತನಾಡುತ್ತಿಲ್ಲ. ಒಟ್ಟಿನಲ್ಲಿ ಅವರ ಪರ್ಫಾರ್ಮೆನ್ಸ್​ ನನಗೆ ನಿಜಕ್ಕೂ ಇಷ್ಟವಾಗಿದೆ’ ಎಂದು ಸಂದೀಪ್​ ರೆಡ್ಡಿ ವಂಗ ಹೇಳಿದ್ದಾರೆ.

ಕಂಗನಾ ರಣಾವತ್​ ಟ್ವೀಟ್​:

ಕಂಗನಾ ಪ್ರತಿಕ್ರಿಯೆ:

‘ವಿಮರ್ಶೆ ಮತ್ತು ಟೀಕೆ ಬೇರೆ ಬೇರೆ ಆಗಿರುತ್ತವೆ. ಎಲ್ಲ ಬಗೆಯ ಕಲೆ ಕೂಡ ವಿಮರ್ಶೆಗೆ ಮತ್ತು ಚರ್ಚೆಗೆ ಒಳಪಡಬೇಕು. ಅದು ಸಹಜವಾದ ವಿಷಯ. ಸಂದೀಪ್​ ಅವರು ನನ್ನ ವಿಮರ್ಶೆಗೆ ಗೌರವ ನೀಡಿದ್ದು ನೋಡಿದರೆ ತಿಳಿಯುತ್ತದೆ. ಅವರು ಕೇವಲ ಗಂಡಸುತನದ ಸಿನಿಮಾ ಮಾಡುವುದಷ್ಟೇ ಅಲ್ಲ, ಅವರ ಆ್ಯಟಿಟ್ಯೂಡ್​ ಕೂಡ ಹಾಗೆಯೇ ಇದೆ. ಧನ್ಯವಾದಗಳು ಸರ್​. ಆದರೆ ನೀವು ನನಗೆ ಯಾವುದೇ ಪಾತ್ರ ನೀಡಬೇಡಿ. ನೀಡಿದರೆ ನಿಮ್ಮ ಆಲ್ಫಾ ಮೇಲ್​ ಪಾತ್ರಗಳು ಸ್ತ್ರೀವಾದಿ ಆಗಿಬಿಡುತ್ತವೆ. ಆಗ ನಿಮ್ಮ ಸಿನಿಮಾಗಳು ಸೋಲುತ್ತವೆ. ನೀವು ಬ್ಲಾಕ್​ ಬಸ್ಟರ್​ ಸಿನಿಮಾ ಮಾಡುವವರು. ಇಂಡಸ್ಟ್ರಿಗೆ ನಿಮ್ಮ ಅಗತ್ಯ ಇದೆ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ